ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಅಜೀರ್ಣತೆ, ಗ್ಯಾಸ್ಟ್ರಿಕ್, ಮಲಬದ್ಧತೆಯಂತಹ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಇಂತಹವರಿಗೆ ಹಲಸಿನ ಹಣ್ಣಿನ ಬೀಜಗಳ ಪುಡಿ ರಾಮಬಾಣ.
ಈಗ ಹಣ್ಣುಗಳ ಸೀಸನ್. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಈಗ ಹಲಸಿನ ಹಣ್ಣುಗಳದ್ದೇ ಕಾರು -ಬಾರು. ಕಾಯಿಗಳಿಂದ ಹಿಡಿದು ಹಣ್ಣುಗಳವರೆಗೆ ಹಲಸು ಸಂಪೂರ್ಣ ಉಪಯೋಗಕ್ಕೆ ಬರುತ್ತದೆ. ಹಲಸಿನ ಹಣ್ಣಿನ ತೊಳೆಗಳು ಬಾಯಲ್ಲಿ ನೀರು ತರಿಸುತ್ತವೆ. ಅದ್ಭುತ ಸುವಾಸನೆಯಿಂದ ಹಲಸು ಸುತ್ತಮುತ್ತಲಿನ ಪ್ರದೇಶದಲ್ಲಿ ತನ್ನ ಪರಿಮಳ ಬೀರುವ ಮೂಲಕ ಜನರನ್ನ ಆಕರ್ಷಿಸುತ್ತದೆ. ಈ ಎಲ್ಲಾ ಗುಣಗಳಿಂದ ಹಲಸಿನ ಹಣ್ಣು ಬಹುತೇಕರ ನೆಚ್ಚಿನ ಹಣ್ಣಾಗಿದೆ. ಹಲಸಿನ ಹಣ್ಣು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನ ಪಡೆಯಬಹುದು. ಹಲಸಿನ ಹಣ್ಣಿನಂತೆಯೇ ಅದರ ಬೀಜಗಳು ಕೂಡ ಅದ್ಭುತ ಆರೋಗ್ಯ ಪ್ರಯೋಜನಗಳನ್ನ ನೀಡುತ್ತವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ
ಹಲಸಿನ ಹಣ್ಣಿನಲ್ಲಿ ಅತ್ಯಂತ ಒಳ್ಳೆಯ ಪೌಷ್ಟಿಕಾಂಶಗಳು ಲಭ್ಯವಾಗುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ಹಲಸಿನ ಹಣ್ಣಿನಲ್ಲಿ ಪರಿಹಾರವಿದೆ. ʼಹಸಿದು ಹಲಸಿನ ಹಣ್ಣು ತಿನ್ನಬೇಕು " ಎಂಬ ಹಿರಿಯರ ಮಾತೇ ಇದೆ. ಇದಕ್ಕೆ ಕಾರಣವೂ ಇದೆ. ತುಂಬಾ ಹೆಚ್ಚು ಹೊಟ್ಟೆ ಹಸಿವಾದಾಗ ದೇಹದಲ್ಲಿ ಶಕ್ತಿ ಇಲ್ಲದಂತಾಗಿ ಬಹಳ ನಿತ್ರಾಣಗೊಂಡು ಬಿಡುತ್ತೇವೆ. ಇಂತಹ ಸಂದರ್ಭದಲ್ಲಿ ಹಲಸಿನ ಹಣ್ಣು ತಿಂದರೆ ಅದ್ಭುತ ರುಚಿಯ ಜೊತೆಗೆ ದೇಹಕ್ಕೆ ಸಾಕಷ್ಟು ಶಕ್ತಿ ಕೂಡ ಸಿಗುತ್ತದೆ.
ಹಲಸಿನ ಹಣ್ಣಿನ ಬಗೆಗಿನ ಅನೇಕ ವಿಚಾರಗಳು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತವೆ. ಹಲಸಿನ ಹಣ್ಣಿನ ತೊಳೆಗಳನ್ನ ತಿಂದು ಬೇಡವೆಂದು ಬಿಸಾಡುವ ಬೀಜಗಳು ನಮ್ಮ ಆರೋಗ್ಯಕ್ಕೆ ಹೇಗೆ ಸಹಕಾರಿಯಾಗುತ್ತವೆ ಅನ್ನೋದನ್ನ ತಿಳಿಯುವುದು ಬಹುಮುಖ್ಯ. ಹಣ್ಣಿನಂತೆಯೇ ಅದರ ಬೀಜಗಳು ಕೂಡ ಅದ್ಭುತ ಆರೋಗ್ಯ ಪ್ರಯೋಜನಗಳನ್ನ ಒದಗಿಸುತ್ತವೆ. ಹಲಸಿನ ಬೀಜಗಳ ಪ್ರಯೋಜನ ತಿಳಿಸಿದರೆ ನೀವು ಯಾವುದೇ ಕಾರಣಕ್ಕೂ ಅವುಗಳನ್ನ ಬಿಸಾಕುವುದಿಲ್ಲ.
ಹಲಸಿನ ಹಣ್ಣಿನ ತೊಳೆಗಳು ಸೇರಿದಂತೆ ಹಲಸಿನ ಬೀಜಗಳು ಸಹ ಕಬ್ಬಿಣದ ಅಂಶಗಳಿಂದ ಸಮೃದ್ಧವಾಗಿವೆ. ನಮ್ಮ ದೇಹದಲ್ಲಿ ಹರಿಯುವ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಇರುತ್ತದೆ. ಕಬ್ಬಿಣದ ಅಂಶ ಇದರ ಮುಖ್ಯ ಭಾಗ. ನಮ್ಮ ದೇಹದಲ್ಲಿ ಒಂದು ವೇಳೆ ಕಬ್ಬಿಣ ಅಂಶದ ಕೊರತೆಯುಂಟಾದರೆ ರಕ್ತ ಸಂಬಂಧಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಕೆಲ ಬಾರಿ ಯಾವುದಾದರೂ ಸಣ್ಣ ಪುಟ್ಟ ಕೆಲಸ ಮಾಡಿದಾಗ ನಮಗೆ ಹೆಚ್ಚಿನ ಆಯಾಸವಾಗುವುದು ಸಹ ದೇಹದ ರಕ್ತದಲ್ಲಿನ ಕಬ್ಬಿಣದ ಅಂಶದ ಕೊರತೆ ಉಂಟಾದಾಗ. ಇದಕ್ಕೇ 'ಅನಿಮಿಯಾ' ಎಂದು ಕರೆಯುತ್ತಾರೆ. ನಮ್ಮ ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾದಷ್ಟು ಕೆಂಪು ರಕ್ತ ಕಣಗಳ ಉತ್ಪತ್ತಿ ಜಾಸ್ತಿಯಾಗಿ ನಮ್ಮ ರೋಗ ನಿರೋಧಕ ವ್ಯವಸ್ಥೆ ಬಲಗೊಂಡು ಹಲವಾರು ಕಾಯಿಲೆಗಳಿಂದ ರಕ್ಷಣೆ ಸಿಗುತ್ತದೆ. ಹೀಗಾಗಿ ಹಲಸಿನ ಹಣ್ಣಿನ ಕಾಲದಲ್ಲಿ ಹಲಸಿನ ತೊಳೆ ತಿಂದು ಅದರ ಬೀಜಗಳನ್ನು ಯಾವುದೇ ಕಾರಣಕ್ಕೂ ಬಿಸಾಡಬೇಡಿ. ಹಲಸಿನ ಬೀಜಗಳ ಹಲವು ಬಗೆಯ ರೆಸಿಪಿಗಳನ್ನ ಟ್ರೈ ಮಾಡಿದ್ರೆ ಫಲಿತಾಂಶವನ್ನ ನೀವೇ ಸ್ವತಃ ಕಾಣಬಹುದು.
ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಅಜೀರ್ಣತೆ, ಗ್ಯಾಸ್ಟ್ರಿಕ್, ಮಲಬದ್ಧತೆಯಂತಹ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಇಂತಹವರಿಗೆ ಹಲಸಿನ ಹಣ್ಣಿನ ಬೀಜಗಳ ಪುಡಿ ರಾಮಬಾಣ. ಹಲಸಿನ ಹಣ್ಣಿನ ಬೀಜಗಳಲ್ಲಿ ನಾರಿನಂಶ ಹೆಚ್ಚಾಗಿದ್ದು, ವಿಶೇಷವಾಗಿ ವಯಸ್ಸಾದವರಿಗೆ ಜೀರ್ಣಕ್ರಿಯೆಯಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ. ಬೇಧಿ ಸಮಸ್ಯೆ ಎದುರಿಸುತ್ತಿರುವವರು ಹಲಸಿನ ಬೀಜಗಳನ್ನು ಬೇಯಿಸಿಯೂ ತಿನ್ನಬಹುದು. ಈಗಾಗಲೇ ಗ್ಯಾಸ್ಟ್ರಿಕ್ ಔಷಧಿ ತೆಗೆದುಕೊಳ್ಳುತ್ತಿರುವವರು ಔಷಧಿಗಳ ಜೊತೆ ಹಲಸಿನ ಬೀಜಗಳನ್ನ ಸೇವಿಸುವುದರ ಸಲುವಾಗಿ ವೈದ್ಯರನ್ನ ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಿರಿ.
ದೃಷ್ಟಿ ದೋಷ, ಕಣ್ಣಿನ ಪೊರೆ, ಕಣ್ಣಿನಲ್ಲಿ ನೀರು ತುಂಬಿಕೊಳ್ಳುವುದು, ಇದ್ದಕ್ಕಿದ್ದಂತೆ ಕಣ್ಣು ಕೆಂಪಾಗುವುದು, ಕಣ್ಣು ಮಂಜಾಗುವುದು ಇತ್ಯಾದಿ ಸಮಸ್ಯೆಗಳಿಗೆ ಹಲಸಿನ ಬೀಜಗಳು ಪರಿಹಾರ ಒದಗಿಸಬಲ್ಲವು. ಹಲಸಿನ ಬೀಜದಲ್ಲಿ ವಿಟಮಿನ್ 'ಎ' ಅಂಶ ಹೆಚ್ಚಾಗಿದ್ದು, ರಾತ್ರಿ ಕುರುಡು ಸಮಸ್ಯೆ ಅನುಭವಿಸುತ್ತಿರುವವರಿಗೆ ಇದು ಉತ್ತಮ ಪರಿಹಾರ. ವಯಸ್ಸಾಗುತ್ತಿದ್ದಂತೆ ಉಂಟಾಗುವ ಕಣ್ಣಿನ ಪೊರೆ ಸಮಸ್ಯೆಯನ್ನು ಸಹ ಇದು ನಿವಾರಣೆ ಮಾಡುತ್ತದೆ.
ಹಲಸಿನ ಹಣ್ಣಿನ ಬೀಜಗಳಲ್ಲಿ ಮ್ಯಾಂಗನೀಸ್ ಅಂಶ ಹೆಚ್ಚಾಗಿದೆ. ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಮ್ಯಾಂಗನೀಸ್ ಅಂಶವು ರಕ್ತದ ಹೆಪ್ಪುಗಟ್ಟುವಿಕೆಯನ್ನ ತಡೆಯುವ ಕೆಲಸ ಮಾಡುತ್ತದೆ. ಇದಲ್ಲದೆ ಹಲಸಿನ ಬೀಜಗಳಿಂದ ಮಾಂಸ - ಖಂಡಗಳು ಬಲಗೊಳ್ಳುತ್ತವೆ, ಚರ್ಮದ ಮೇಲಿನ ಸುಕ್ಕುಗಳು ನಿವಾರಣೆಯಾಗುತ್ತ, ಚರ್ಮದ ಹೊಳಪು ಹೆಚ್ಚಾಗುತ್ತದೆ ಮತ್ತು ತಲೆ ಕೂದಲು ಸೊಂಪಾಗಿ ಬೆಳೆಯುತ್ತದೆ. (ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)