ತಾಯಿಯಾಗ್ತಿದ್ದಾರಾ 49 ವರ್ಷದ ನಟಿ ಅಮಿಷಾ ಪಟೇಲ್‌? ಸಿಂಗಲ್‌ ಆಗಿದ್ದ ನಟಿಯ ಬೇಬಿ ಬಂಪ್ ಫೊಟೋ ವೈರಲ್

Ameesha patel pregnancy rumors : ನಟಿ ಅಮಿಷಾ ಪಟೇಲ್‌ ತಾಯಿಯಾಗ್ತಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. 49 ವರ್ಷದ ನಟಿ ಅಮಿಷಾ ಪಟೇಲ್‌ ಸಿಂಗಲ್‌ ಆಗಿದ್ದು, ಇನ್ನೂ ಮದುವೆ ಆಗಿಲ್ಲ.

ಹೃತಿಕ್ ರೋಷನ್ ಜೊತೆ ಕಹೋ ನಾ ಪ್ಯಾರ್ ಹೈ ಚಿತ್ರದ ಮೂಲಕ ಪ್ರಸಿದ್ಧರಾದ ನಟಿ ಅಮೀಷಾ ಪಟೇಲ್ ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. 

1 /6

Ameesha Patel: 49 ವರ್ಷ ವಯಸ್ಸಿನ ಅಮೀಷಾ ಪಟೇಲ್‌ ಇತ್ತೀಚೆಗೆ ಒಂದಿಷ್ಟು ಸುಂದರ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದರು. 

2 /6

ನಟಿ ದುಬೈನಲ್ಲಿ ವೆಕೆಷನ್‌ ಎಂಜಾಯ್‌ ಮಾಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದರು. ಇದು ಅವರ ಅಭಿಮಾನಿಗಳಲ್ಲಿ ಒಂದು ಬಹುದೊಡ್ಡ ಪ್ರಶ್ನೆಯನ್ನು ಹಟ್ಟು ಹಾಕಿದೆ.

3 /6

ಅಮೀಷಾ ಪಟೇಲ್‌ ಫೋಟೋಗಳನ್ನ ನೋಡಿದ ಕೆಲವು ನೆಟ್ಟಿಗರು ʻನೀವು ಪ್ರಗ್ನೆಂಟ್‌ ಆಗಿದ್ದೀರಾʼ ಎಂದು ಪ್ರಶ್ನಿಸಿ ಕಾಮೆಂಟ್‌ ಮಾಡುತ್ತಿದ್ದಾರೆ.

4 /6

ಅಮೀಷಾ ಪಟೇಲ್‌ ಫೋಟೋ ವೈರಲ್‌ ಆಗುತ್ತಿದ್ದು, 49 ವರ್ಷದ ವಯಸ್ಸಿನಲ್ಲೂ ಸಿಂಗಲ್‌ ಆಗಿರುವ ನಟಿ ಅಮೀಷಾ ಪಟೇಲ್‌ ಗರ್ಭಿಣಿಯಾದ್ರಾ ಎಂಬ ಅನುಮಾನ ಹುಟ್ಟು ಹಾಕಿವೆ. 

5 /6

ಅಮೀಷಾ ಪಟೇಲ್‌ ಈ ಫೋಟೋಗಳಲ್ಲಿ ಸ್ಕಿನ್‌ ಟೈಟ್‌ ಬಟ್ಟೆ ಧರಿಸಿದ್ದಾರೆ. ಇದರಿಂದಾಗಿ ಅವರ ಹೊಟ್ಟೆ ಭಾಗ ಕೊಂಚ ಮುಂದೆ ಬಂದಂತೆ ಕಾಣುತ್ತಿದೆ.

6 /6

ಇದರಿಂದಾಗಿ ಕೆಲವು ನೆಟ್ಟಿಜನ್‌ಗಳು ಅಮೀಷಾ ಪಟೇಲ್‌ ಗರ್ಭಿಣಿಯಾಗಿದ್ದಾರಾ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.