Anchor Anushree: ಅನುಶ್ರೀ ಮದುವೆ ಕುರಿತು ಶೀಘ್ರದಲ್ಲೇ ಸಂತಸದ ಸುದ್ದಿಯೊಂದು ಸಿಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಇದೆ. ಮಾತುಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ಚೆಲುವೆ ಅನುಶ್ರೀ ಮದುವೆ ಆಗುವ ಹುಡುಗ ಯಾರು?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
Reason why Anchor Anushree is not married: ಅನುಶ್ರೀ ಮದುವೆ ಕುರಿತು ಶೀಘ್ರದಲ್ಲೇ ಸಂತಸದ ಸುದ್ದಿಯೊಂದು ಸಿಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಇದೆ. ಮಾತುಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ಚೆಲುವೆ ಅನುಶ್ರೀ ಮದುವೆ ಆಗುವ ಹುಡುಗ ಯಾರು?
ಕರಾವಳಿ ಚೆಲುವೆ ಸ್ಯಾಂಡಲ್‌ವುಡ್ ಖ್ಯಾತ ನಿರೂಪಕಿ ಅನುಶ್ರೀ ಮದುವೆ ಬಗ್ಗೆ ಆಗಾಗ ಅನೇಕ ಗಾಸಿಪ್‌ಗಳು ಹರಿದಾಡುತ್ತಲೇ ಇರುತ್ತವೆ. ಅನುಶ್ರೀ ಫ್ಯಾನ್ಸ್ ಕೂಡ ಅವರ ಮದುವೆ ನೋಡಲು ಕಾದು ಕುಳಿತಿದ್ದಾರೆ.
ಅನುಶ್ರೀ ಎಲ್ಲೇ ಹೋದರು ಮದುವೆ ಯಾವಾಗ? ಎಂದೇ ಕೇಳುತ್ತಾರೆ. ಇದಕ್ಕೆ ಈಗ ಉತ್ತರ ಸಿಗುವ ಸಮಯ ಹತ್ತಿರ ಬಂದಾಗಿದೆ. ಅನುಶ್ರೀ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು. ಅಲ್ಲದೇ ನಿರೂಪಕಿ ಅನುಶ್ರೀ ಮದುವೆ ಡೇಟ್ ರಿವೀಲ್ ಮಾಡುವ ಬಗ್ಗೆಯೂ ಹೇಳಿದ್ದರು.
ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯರಾದ ನಟಿ ನಯನ, ಸೂರಜ್, ಜಗ್ಗ ಹಾಗೂ ಗಿಲ್ಲಿ ಜೊತೆ ಅನುಶ್ರೀ ಚಾಟ್ ಶೋಗೆ ಬಂದಿದ್ದರು. ಈ ವೇಳೆ ಅನುಶ್ರೀ ಮದುವೆ ಆದವರು ಒಂದೆಡೆ, ಮದುವೆ ಆಗದವರು ಒಂದು ಕಡೆ ಚೆನ್ನಾಗಿ ಕುಳಿತಿದ್ದಾರೆ ಎಂದಾಗ ಗಿಲ್ಲಿ ಅನು ಅಕ್ಕ ಮಧ್ಯದಲ್ಲಿ ಕುಳಿತ ನೀವೂ ಆಲ್ ರೆಡಿ ಫಿಕ್ಸ್ ಆಗಿದ್ದೀರಾ ಎಂದು ಹೇಳುತ್ತಾರೆ.
ಇದಕ್ಕೆ ಅನುಶ್ರೀ ಫಿಕ್ಸ್ ಆಗ್ತಿದ್ದೇನೆ ಎನ್ನುತ್ತಾರೆ. ಈ ಚಾಟ್ ಶೋ ನಡೆದ್ದು ಅಕ್ಟೋಬರ್ 2024 ರಲ್ಲಿ. ಹೀಗಾಗಿ ಮುಂದಿನ ಫೆಬ್ರವರಿಯಲ್ಲಿ ಅಂದರೆ 2025ರಲ್ಲಿ ಮದುವೆ ನಡೆಯಬಹುದಾ ಎಂದು ಸೂರಜ್ ಕೇಳುತ್ತಾರೆ. ಆಗ ಅನುಶ್ರೀ ಇಲ್ಲ ಕಣ್ರೋ ನಾನು ಅಪ್ಪು ಫ್ಯಾನ್. ಹೀಗಾಗಿ ಮಾರ್ಚ್ ನಲ್ಲಿ ಮದುವೆ ಆಗಬಹುದು ಎಂದು ಹೇಳುತ್ತಾರೆ.
ಈ ಮೂಲಕ ಶೀಘ್ರವೇ ಹಸೆಮಣೆ ಏರಲಿರುವ ಸುಳಿವನ್ನು ಅನುಶ್ರೀ ಆಗಲೇ ನೀಡಿದ್ದರು. ಮದುವೆ ಫಿಕ್ಸ್ ಆಗ್ತಿದೆ ಎಂಬ ಸಂಗತಿ ಬಿಚ್ಚಿಟ್ಟಿದ್ದರು. ಇದೀಗ ಮಾರ್ಚ್ 17ರಂದು ಪುನೀತ್ ರಾಜ್‌ಕುಮಾರ್ ಜನ್ಮದಿನ ಹತ್ತಿ ಬಂದೇ ಬಿಟ್ಟಿದೆ. ಅನುಶ್ರೀ ಮದುವೆ ಬ್ಗಗೆ ಯಾವ ಅಪ್‌ಡೇಟ್ ಕೊಡ್ತಾರೆ ಎಂದು ಜನ ಕಾಯುತ್ತಿದ್ದಾರೆ.
ಅಪ್ಪು ಹುಟ್ಟುಹಬ್ಬದಂದು ಅನುಶ್ರೀ ಮದುವೆ ಡೇಟ್ ಹೇಳುತ್ತಾರಾ ಅಥವಾ ಮದುವೆ ಆಗುವ ಹುಡುಗನನ್ನು ಪರಿಚಯ ಮಾಡಿ ಕೊಡ್ತಾರಾ ಇಲ್ಲವೇ ಅನುಶ್ರೀ ಮದುವೆಯೇ ನಡೆಯಲಿದೆಯಾ ಎಂಬ ಅನೇಕ ಪ್ರಶ್ನೆಗಳು ಜನರ ಮನಸ್ಸಲ್ಲಿ ಓಡುತ್ತಿವೆ. ಎಲ್ಲದಕ್ಕೂ ಇದೇ ಮಾರ್ಚ್ 17ರಂದು ಉತ್ತರ ಸಿಗಲಿದೆ.
ಅನುಶ್ರೀ ಮಂಗಳೂರು ಮೂಲದ ನಮ್ಮ ಟಿವಿ ಚಾನೆಲ್ ನಲ್ಲಿ ಅಂತಾಕ್ಷರಿ ಶೋ ಮೂಲಕ ಟಿವಿ ಜರ್ನಿ ಶುರು ಮಾಡಿದರು. ಬಳಿಕ ETV ಯ ‘ಡಿಮ್ಯಾಂಡಪ್ಪೋ ಡಿಮ್ಯಾಂಡ್’ ಕಾರ್ಯಕ್ರಮದ ಮೂಲಕ ಪ್ರಸಿದ್ಧರಾದರು. ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿ ಜನಪ್ರಿಯರಾದರು.
ಜೀ ತಂಡದಲ್ಲಿ ಬಹುಕಾಲದಿಂದ ಇರುವ ಆಂಕರ್ ಅನು ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕುಣಿಯೋಣು ಬಾರಾ, ಕಾಮಿಡಿ ಕಿಲಾಡಿ ಹೀಗೆ ಅನೇಕ ಸಾಕಷ್ಟು ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಇದೀಗ ಅನುಶ್ರೀ ಲಂಡನ್ ಪ್ರವಾಸದಲ್ಲಿದ್ದಾರೆ. ಅಲ್ಲಿನ ಫೋಟೋ, ವೀಡಿಯೋಗಳನ್ನು ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.