ಮದುವೆಗೆ ಸಜ್ಜಾಗಿರುವ ಆಂಕರ್‌ ಅನುಶ್ರೀ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ? ಈಕೆ ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ...

Anchor Anushree Net worth and remuneration: ಕರ್ನಾಟಕದಲ್ಲಿ ಅತಿ ಜನಪ್ರಿಯತೆ ಪಡೆದ ಆಂಕರ್‌ ಯಾರೆಂದು ಕೇಳಿದ್ರೆ ಮೊದಲು ಬಾಯಿಗೆ ಬರುವ ಹೆಸರೇ ಅನುಶ್ರೀ. ಸಿಕ್ಕಾಪಟ್ಟೆ ಜನಮನ್ನಣೆ ಪಡೆದಿರುವ ಈ ಸುಂದರಿ ನಟಿಯೂ ಹೌದು. ಕನ್ನಡ ದೂರದರ್ಶನದಲ್ಲಿ ನಿರೂಪಕಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು, ಅದಾದ ಬಳಿಕ ನಟನೆಯಲ್ಲೂ ಮೋಡಿ ಮಾಡಿದರು. (Photo Courtesy: Anushree Instagram page)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ:  Zee5 ನಲ್ಲೂ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /9

 ಕರ್ನಾಟಕದಲ್ಲಿ ಅತಿ ಜನಪ್ರಿಯತೆ ಪಡೆದ ಆಂಕರ್‌ ಯಾರೆಂದು ಕೇಳಿದ್ರೆ ಮೊದಲು ಬಾಯಿಗೆ ಬರುವ ಹೆಸರೇ ಅನುಶ್ರೀ. ಸಿಕ್ಕಾಪಟ್ಟೆ ಜನಮನ್ನಣೆ ಪಡೆದಿರುವ ಈ ಸುಂದರಿ ನಟಿಯೂ ಹೌದು. ಕನ್ನಡ ದೂರದರ್ಶನದಲ್ಲಿ ನಿರೂಪಕಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು, ಅದಾದ ಬಳಿಕ ನಟನೆಯಲ್ಲೂ ಮೋಡಿ ಮಾಡಿದರು. (Photo Courtesy: Anushree Instagram page)

2 /9

೨೦೧೧ ರಲ್ಲಿ ಬಿಡುಗಡೆಯಾದ ʼಮುರಳಿ ಮೀಟ್ಸ್ ಮೀರಾʼ ಚಿತ್ರಕ್ಕಾಗಿ ಅವರು ಅತ್ಯುತ್ತಮ ಡಬ್ಬಿಂಗ್ ಕಲಾವಿದೆಯಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಕೂಡ ಗೆದ್ದಿದ್ದಾರೆ.(Photo Courtesy: Anushree Instagram page)  

3 /9

ಅನುಶ್ರೀ ಅವರ ಆರಂಭಿಕ ಜೀವನ ಕಷ್ಟದಿಂದಲೇ ಕೂಡಿತ್ತು. ಮಂಗಳೂರಿನ ಸುರತ್ಕಲ್‌ನಲ್ಲಿ ಸಂಪತ್ ಮತ್ತು ಶಶಿಕಲಾ ದಂಪತಿ ಮಗಳಾಗಿ ಜನಿಸಿದ ಅನುಶ್ರೀ ಬಾಲ್ಯದಿಂದಲೇ ಶ್ರಮಜೀವಿ. ಇವರಿಗೆ ಅಭಿಜೀತ್ ಎಂಬ ಕಿರಿಯ ಸಹೋದರನಿದ್ದಾನೆ. ಚಿಕ್ಕವರಿದ್ದಾಗಲೇ ತಂದೆ ಪ್ರೀತಿ ಕಳೆದುಕೊಂಡ ಅನುಶ್ರೀ, ಈ ಸ್ಥಾನಕ್ಕೆ ಬರಲು ಬಹಳ ಶ್ರಮಪಟ್ಟಿದ್ದಾರೆ. (Photo Courtesy: Anushree Instagram page)  

4 /9

ಐದನೇ ತರಗತಿಯವರೆಗೆ ಸೇಂಟ್ ಥಾಮಸ್ ಬೆಂಗಳೂರಿನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು, ನಂತರ ಮಂಗಳೂರಿನ ನಾರಾಯಣ ಗುರು ಶಾಲೆಗೆ ಸ್ಥಳಾಂತರಗೊಂಡರು. ಅಲ್ಲಿಂದ ತಮ್ಮ ಪೂರ್ವ-ವಿಶ್ವವಿದ್ಯಾಲಯ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ದೂರದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲು ಆಫರ್‌ಗಳು ಬರಲು ಪ್ರಾರಂಭಿಸಿತು. ಅದಕ್ಕಾಗಿಯೇ ಬೆಂಗಳೂರಿಗೆ ಮರಳಿದರು. (Photo Courtesy: Anushree Instagram page)  

5 /9

ಅನುಶ್ರೀ ಮಂಗಳೂರು ಮೂಲದ ನಮ್ಮ ಟಿವಿಯಲ್ಲಿ ಟೆಲಿ ಅಂತ್ಯಾಕ್ಷರಿ ಎಂಬ ಫೋನ್-ಇನ್ ಸಂಗೀತ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದಾದ ಬಳಿಕ ಇಟಿವಿ ಕನ್ನಡದ ದೂರದರ್ಶನ ಕಾರ್ಯಕ್ರಮ ಡಿಮ್ಯಾಂಡಪ್ಪೋ ಡಿಮ್ಯಾಂಡೂನಲ್ಲಿ ನಿರೂಪಕಿಯಾದರು. ಅದು ಅವರ ಜನಪ್ರಿಯತೆಯನ್ನು ಹೆಚ್ಚಿಸಿತು.(Photo Courtesy: Anushree Instagram page)  

6 /9

ಅದಾದ ಬಳಿಕ ಸುವರ್ಣ ಫಿಲಂ ಅವಾರ್ಡ್‌, ಫಿಲ್ಮ್‌ಫೇರ್ ಅವಾರ್ಡ್‌, ಟಿವಿ9 ಚಲನಚಿತ್ರ ಪ್ರಶಸ್ತಿಗಳು, ಜೀ ಸಂಗೀತ ಪ್ರಶಸ್ತಿಗಳು, SIIMA ಪ್ರಶಸ್ತಿಗಳು, ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಂತಹ ಹಲವಾರು ವೇದಿಕೆ ಕಾರ್ಯಕ್ರಮಗಳನ್ನು ಆಯೋಜಿಸಿದರು. ಕಾಮಿಡಿ ಖಿಲಾಡಿಗಳು ಮತ್ತು ಟ್ವೆಂಟಿ-ಟ್ವೆಂಟಿ ಕಾಮಿಡಿ ಕಪ್, ಕುಣಿಯೋಣ ಬಾರಾ ಮತ್ತು ಇತರ ಪ್ರಮುಖ ಕಾರ್ಯಕ್ರಮಗಳನ್ನು ಅನುಶ್ರೀಯೇ ಆಯೋಜನೆ ಮಾಡಿದ್ದಾರೆ.(Photo Courtesy: Anushree Instagram page)  

7 /9

ಸದ್ಯ ಮಾಹಿತಿಯ ಪ್ರಕಾರ ಅನುಶ್ರೀ ಒಂದು ಎಪಿಸೋಡ್​ಗೆ ಒಂದು ಲಕ್ಷದ 20ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ತಿಳಿದುಬಂದಿದೆ. ಇದಲ್ಲದೆ, ಸಿನಿಮಾ ಪ್ರಿ ರಿಲೀಸ್‌ ಈವೆಂಟ್‌, ಆಡಿಯೋ ಲಾಂಚ್‌ ಮತ್ತು ತಮ್ಮದೇ ಆದ ಯ್ಯೂಟ್ಯೂಬ್‌ ಚಾನೆಲ್‌ ಹೊಂದಿರುವ ಅವರು ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಾ ಭರ್ಜರಿ ಹಣ ಗಳಿಸುತ್ತಾರೆ ಎನ್ನಲಾಗಿದೆ. (Photo Courtesy: Anushree Instagram page)  

8 /9

ಇದೀಗ ಲಕ್ಷ ಲಕ್ಷ ಸಂಭಾವನೆ ಪಡೆಯುವ ಅನುಶ್ರೀ ತಮ್ಮ ಮೊದಲ ಸಂಭಾವನೆಯಾಗಿ ಪಡೆದಿದ್ದು ರೂ. ೨೫೦. ಈ ಬಗ್ಗೆ ಮಾತನಾಡಿದಾಗಲೆಲ್ಲಾ ಭಾವುಕರಾಗ್ತಾರೆ ಅನುಶ್ರೀ. (Photo Courtesy: Anushree Instagram page)  

9 /9

ಇನ್ನು ನಿರೂಪಣೆಯಿಂದಲೇ ಅನುಶ್ರೀ ಸುಮಾರು 50 ಕೋಟಿ ರೂಪಾಯಿ ಆಸ್ತಿ ಸಂಪಾದಿಸಿದ್ದಾರೆ ಎನ್ನಲಾಗುತ್ತದೆ. ಆದರೆ, ಈ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿಯಿಲ್ಲ. (Photo Courtesy: Anushree Instagram page)