White Hair Remedy: ಬಿಳಿ ಕೂದಲನ್ನು ಕಪ್ಪಾಗಿಸಲು ತೆಂಗಿನೆಣ್ಣೆಯಂತೆ ಕಲೋಂಜಿ ಎಣ್ಣೆಯೂ ತುಂಬಾ ಪ್ರಯೋಜನಕಾರಿ ಆಗಿದೆ. ಇದರ ಸಹಾಯದಿಂದ ಯಾವುದೇ ಕೆಮಿಕಲ್ ಮಿಶ್ರಿತ ಹೇರ್ ಡೈ ಬಳಸದೆ ತ್ವರಿತವಾಗಿ ಬೆಳ್ಳಗಿರುವ ಕೂದಲನ್ನು ಕಪ್ಪಾಗಿಸಬಹುದು.
1/6ಬದಲಾದ ಕಾಲಮಾನದಲ್ಲಿ ಮಾಲಿನ್ಯ, ಒತ್ತಡ, ಕಳಪೆ ಆಹಾರಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೂದು ಬಣ್ಣಕ್ಕೆ ತಿರುಗುವುದು ಸಾಮಾನ್ಯ ಸಂಗತಿಯಾಗಿದೆ. ಬೂದು ಅಥವಾ ಬೆಳ್ಳಗಾಗಿರುವ ಕೂದಲನ್ನು ಕಪ್ಪಾಗಿಸಲು ರಾಸಾಯನಿಕ ಹೇರ್ ಡೈಗಳ ಬಳಕೆಯಿಂದ ತಕ್ಷಣಕ್ಕೆ ಕೂದಲು ಕಪ್ಪಾದರೂ ಸಹ ಬಳಿಕ ಇದು ಕೂದಲು, ಚರ್ಮದ ಮೇಲೆ ಅಡ್ಡಪರಿಣಾಮವನ್ನುಂಟು ಮಾಡುತ್ತದೆ. ಆದರೆ ಕಲೋಂಜಿ ಎಣ್ಣೆ ಸಹಾಯದಿಂದ ಬಿಳಿ ಕೂದಲನ್ನು ಆರೋಗ್ಯಕರವಾಗಿ, ತ್ವರಿತವಾಗಿ ಕಪ್ಪಾಗುವಂತೆ ಮಾಡಬಹುದು.
2/6ಕಲೋಂಜಿ ಎಣ್ಣೆ ಬಿಳಿ ಕೂದಲಿನ ಸಮಸ್ಯೆಗೆ ನೈಸರ್ಗಿಕ ಪರಿಹಾರವಾಗಿದೆ. ಇದರೊಂದಿಗೆ ಕೇವಲ ಎರಡು ಪದಾರ್ಥಗಳನ್ನು ಬೆರೆಸಿ ಬಳಸುವುದರಿಂದ ಬೆಳ್ಳಗಿರುವ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.
3/6ಬಿಳಿ ಕೂದಲನ್ನು ಕಪ್ಪಾಗಿಸಲು ಒಂದು ಕಪ್ ಕಲೋಂಜಿ ಎಣ್ಣೆ, 1 ಚಮಚ ಆಮ್ಲಾ ಪುಡಿ, 15 - 20 ಕರಿಬೇವಿನ ಎಲೆಗಳು (ಒಣಗಿಸಿ ಪುಡಿ ಮಾಡಿ) ಬೇಕಾಗುತ್ತದೆ.
4/6ಮೊದಲಿಗೆ ಒಂದು ಪಾತ್ರೆಯಲ್ಲಿ ಕಲೋಂಜಿ ಎಣ್ಣೆ, ಆಮ್ಲಾ ಪುಡಿ, ಕರಿಬೇವಿನ ಪುಡಿಯನ್ನು ಹಾಕಿ ಸಣ್ಣ ಉರಿಯಲ್ಲಿ ಸತತ ಎರಡು ಗಂಟೆಗಳವರೆಗೆ ಚೆನ್ನಾಗಿ ಕಾಯಿಸಿ. ಬಳಿಕ ಕತ್ತಲೆ ಇರುವ ಜಾಗದಲ್ಲಿಟ್ಟು ಅದನ್ನು ತಂಪಾಗಲು ಬಿಡಿ.
5/6ಆಮ್ಲಾ ಪುಡಿ+ಕರಿಬೇವಿನ ಪುಡಿ ಮಿಶ್ರಿತ ಕಲೋಂಜಿ ಎಣ್ಣೆಯನ್ನು ಕೂದಲಿನ ಬೇರುಗಳಿಂದ ತುದಿಯವರೆಗೂ ಹಚ್ಚಿ ಹತ್ತು ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ರಾತ್ರಿಯಿಡೀ ಹಾಗೆಯೇ ಬಿಟ್ಟು ಬೆಳಿಗ್ಗೆ ಸೌಮ್ಯ ಶಾಂಪೂ, ಉಗುರು ಬೆಚ್ಚಗಿನ ನೀರಿನ ಸಹಾಯದಿಂದ ಹೇರ್ ವಾಶ್ ಮಾಡಿ.
6/6ವಾರಕ್ಕೆ ಒಂದೆರಡು ಬಾರಿ ಕಲೋಂಜಿ ಎಣ್ಣೆಯನ್ನು ಈ ರೀತಿ ಬಳಸುವುದರಿಂದ ನೆತ್ತಿಗೆ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಕೂದಲನ್ನು ಬೇರುಗಳಿಂದ ಬಲಪಡಿಸುವುದಲ್ಲದೆ, ಬೆಳ್ಳಗಿರುವ ಕೂದಲು ಕಪ್ಪಾಗುವಂತೆ ಮಾಡುವಲ್ಲಿ ಪರಿಣಾಮಕಾರಿ ಮನೆಮದ್ದು ಎಂದು ಸಾಬೀತುಪಡಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.