ಬಾದಾಮಿ ಎಣ್ಣೆಯಲ್ಲಿ ಈ ರಸ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಪ್ರಕೃತಿದತ್ತವಾಗಿ ಕಪ್ಪಾಗಿ ಮೊಣಕಾಲುದ್ದ ಬೆಳೆಯುತ್ತೆ

Written ByYashaswini VUpdated byYashaswini V
Published: Sep 01, 2025, 11:51 AM IST|Updated: Sep 01, 2025, 11:51 AM IST

Gray Hair Home Remedies: ಹೇರ್ ಡೈ ಬೇಕಿಲ್ಲ. ಮೆಹಂದಿ ಬಳಸುವ ತೊಂದರೆಯೂ ಇಲ್ಲ. ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಎರಡೇ ಎರಡು ಪದಾರ್ಥಗಳನ್ನು ಬಳಸಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. ಜೊತೆಗೆ ಕೂದಲಿನ ಸಮಸ್ಯೆಗಳನ್ನು ನಿವಾರಿಸಿ ದಷ್ಟಪುಷ್ಟವಾದ ಉದ್ದ ಕೂದಲನ್ನು ಸಹ ನಿಮ್ಮದಾಗಿಸಬಹುದು. 

White Hair Natural Remedies1/6

ಧೂಳು, ಮಾಲಿನ್ಯ, ಒತ್ತಡಭರಿತ ಜೀವನಶೈಲಿಯಲ್ಲಿ ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿದೆ. ಆದರೆ, ಹೇರ್ ಡೈ ಬಳಸದೆ, ಮೆಹಂದಿ ಹಚ್ಚದೆ, ದುಬಾರಿ ಖರ್ಚುಗಳಿಲ್ಲದೆ ಮನೆಯಲ್ಲೇ ಸುಲಭವಾಗಿ ಲಭ್ಯವಿರುವ ಬಾದಾಮಿ ಎಣ್ಣೆ, ನಿಂಬೆ ರಸವನ್ನು ಬಳಸಿ ಬಿಳಿ ಕೂದಲನ್ನು ಪ್ರಕೃತಿದತ್ತವಾಗಿ ಕಪ್ಪಾಗಿಸಬಹುದು.

Badam Lemon For White Hair 2/6

ಹೌದು, ಬಿಳಿ ಕೂದಲನ್ನು ಪ್ರಕೃತಿದತ್ತವಾಗಿ ಬೇರುಗಳಿಂದ ಕಪ್ಪಾಗಿಸಿ ಉದ್ದವಾದ ಕಾಂತಿಯುತವಾದ ಕೇಶರಾಶಿಯನ್ನು ಹೊಂದಲು ಕೇವಲ ಬಾದಾಮಿ ಎಣ್ಣೆ-3 ಸ್ಪೂನ್ ಮತ್ತು ಒಂದೆರಡು ಸ್ಪೂನ್ ನಿಂಬೆ ರಸ ಚಮತ್ಕಾರಿ ಮನೆಮದ್ದಾಗಿ ಕಾರ್ಯನಿರ್ವಹಿಸುತ್ತದೆ. 

Almond Oil For Gray Hair 3/6

ಬಾದಾಮಿ ಎಣ್ಣೆ ವಿಟಮಿನ್ ಇ ಯ ಅತ್ಯುತ್ತಮ ಮೂಲವಾಗಿದೆ. ಬಾದಾಮಿ ಎಣ್ಣೆ ಬಳಕೆಯಿಂದ ಕೂದಲು ಬೇರುಗಳಿಂದ ಗಟ್ಟಿಗೊಳ್ಳುವುದರ ಜೊತೆಗೆ ಬೆಳ್ಳಗಿರುವ ಕೂದಲು ಕಪ್ಪಾಗುತ್ತದೆ. ಅಲ್ಲದೆ, ಭವಿಷ್ಯದಲ್ಲಿ ಕೂದಲು ಬೆಳ್ಳಗಾಗುವುದನ್ನು ಸಹ ತಡೆಯುವಲ್ಲಿ ಪರಿಣಾಮಕಾರಿ ಆಗಿದೆ. 

Lemon For White Hair 4/6

ಸಾವಿರಾರು ವರ್ಷಗಳಿಂದ ಕೂದಲಿನ ಆರೈಕೆಯ ಭಾಗವಾಗಿರುವ ನಿಂಬೆ ರಸವು ಕೂದಲಿಗೆ ಅತ್ಯುತ್ತಮ ಪೋಷಣೆಯನ್ನು ಒದಗಿಸುತ್ತದೆ. ತಲೆಹೊಟ್ಟು ನಿವಾರಿಸುವಲ್ಲಿ ರಾಮಬಾಣವಾಗಿ ಕಾರ್ಯನಿರ್ವಹಿಸುವ ನಿಂಬೆ ರಸ ಬಳಕೆಯಿಂದ ಕೂದಲಿಗೆ ನೈಸರ್ಗಿಕ ಬಣ್ಣ ದೊರೆಯುತ್ತದೆ. ಅಲ್ಲದೆ, ಕೂದಲು ಸಮೃದ್ಧಿಯಾಗಿ ಕಾಂತಿಯುತವಾಗಿ ಬೆಳೆಯುವಲ್ಲಿಯೂ ಪರಿಣಾಮಕಾರಿ ಆಗಿದೆ.

Badam Oil mix for Gray hair 5/6

ಮೊದಲಿಗೆ ಒಂದು ಬಟ್ಟಲಿನಲ್ಲಿ ಮೂರು ಸ್ಪೂನ್ ಬಾದಾಮಿ ಎಣ್ಣೆಯನ್ನು ಹಾಕಿ (ಉದ್ದ ಕೂದಲು ಹೊಂದಿರುವವರು ಅಗತ್ಯವಿದ್ದರೆ ಹೆಚ್ಚು ಎಣ್ಣೆ ಬಳಸಿ). ನಂತರ ಇದರಲ್ಲಿ ಎರಡು ಚಮಚದಷ್ಟು ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 

Badam oil Lemon mix to darken gray hair 6/6

ಬಾದಾಮಿ ಎಣ್ಣೆ ನಿಂಬೆ ರಸ ಮಿಶ್ರಿತ ಹೇರ್ ಆಯಿಲ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ. ಚೆನ್ನಾಗಿ ಮಸಾಜ್ ಮಾಡಿ. ಬಳಿಕ ಅರ್ಧಗಂಟೆ ಬಿಟ್ಟು ಹೇರ್ ವಾಶ್ ಮಾಡಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ದಷ್ಟಪುಷ್ಟವಾದ ಆರೋಗ್ಯಕರವಾದ ಉದ್ದ ಕಪ್ಪು ಕೂದಲು ನಿಮ್ಮದಾಗುತ್ತದೆ.  

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.