Diabetes control tips: ಮಧುಮೇಹವನ್ನು ನಿಯಂತ್ರಿಸಲು ಕೆಲವು ನೈಸರ್ಗಿಕ ಪದಾರ್ಥಗಳನ್ನು ನೀರಿಗೆ ಬೆರೆಸಿ ಕುಡಿಯಬಹುದು.
ashwagandha powder : ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೀವು ಆಯುರ್ವೇದ ಮೂಲಿಕೆ ಅಶ್ವಗಂಧವನ್ನು ಸೇವಿಸಬಹುದು.
1/7ashwagandha powder for diabetes: ಅಶ್ವಗಂಧ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಶ್ವಗಂಧವು ಶಕ್ತಿಶಾಲಿ ಉತ್ಕರ್ಷಣ ನಿರೋಧಕವಾಗಿದ್ದು, ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ.
2/7ಅಶ್ವಗಂಧವನ್ನು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಸೇರಿದಂತೆ ಅನೇಕ ಸಾಮಾನ್ಯ ಕಾಯಿಲೆಗಳಿಂದ ಹೆಚ್ಚುವರಿ ರಕ್ಷಣೆ ನೀಡುತ್ತದೆ.
3/7ಅಶ್ವಗಂಧ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧ್ಯಯನಗಳು ತೋರಿಸಿವೆ. ಅಶ್ವಗಂಧ ಬೇರಿನ ಪುಡಿಯನ್ನು ಸೇವಿಸುವುದರಿಂದ ಬ್ಲಡ್ ಶುಗರ್ ನಿಯಂತ್ರಿಸಬಹುದಾಗಿದೆ.
4/7ಅಶ್ವಗಂಧವನ್ನು ಪುಡಿಯ ರೂಪದಲ್ಲಿ ಸೇವಿಸಬಹುದು. ಇದು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ದೇಹದಿಂದ ಹೆಚ್ಚುವರಿ ಸೋಡಿಯಂ ಅನ್ನು ಮೂತ್ರದ ಮೂಲಕ ಹೊರಹಾಕಬಹುದು.
5/7ಕೆಲವರು ಇದನ್ನು ದೇಸಿ ತುಪ್ಪದೊಂದಿಗೆ ಬೆರೆಸಿ ತಿನ್ನುತ್ತಾರೆ. ಇದು ಅಶ್ವಗಂಧದ ನೈಸರ್ಗಿಕ ಉತ್ಕರ್ಷಣ ನಿರೋಧಕ ಗುಣಗಳನ್ನು ಸುಧಾರಿಸುತ್ತದೆ. ಅಶ್ವಗಂಧದ ಪುಡಿಯನ್ನು ಹಾಲಿನಲ್ಲಿ ಬೆರೆಸಿಯೂ ಕುಡಿಯಬಹುದು.
6/7ಅಶ್ವಗಂಧದ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಬ್ಲಡ್ ಶುಗರ್ ದಿನವಿಡೀ ನಿಯಂತ್ರಣದಲ್ಲಿರುತ್ತದೆ. ಜೊತೆಗೆ ಆಹಾರ ಸೇವನೆ ಬಳಿಕ ಶುಗರ್ ಏರುಪೇರಾಗುವುದಿಲ್ಲ.
7/7ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ಜೀ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.