ಆಗರ್ಭ ಶ್ರೀಮಂತೆ.. ಸಣ್ಣ ವಯಸ್ಸಿಗೆ ಮದುವೆ! ಬಿಗ್‌ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಹಿನ್ನೆಲೆ ಇದು...

Written ByDeepa A Reddy
Published: Oct 01, 2025, 12:03 PM IST|Updated: Oct 01, 2025, 02:43 PM IST

Ashwini Gowda: ಅಶ್ವಿನಿ ಗೌಡ ಅವರ ಹಿನ್ನೆಲೆ ಏನು ಗೊತ್ತಾ?
 

1/9

Ashwini Gowda: ಬಿಗ್‌ಬಾಸ್‌ ಸೀಸನ್‌ 12 ಶುರುವಾಗಿದೆ. 19 ಮಂದಿ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ, ಅವರ ಪೈಕಿ ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ ಕೂಡ ಒಬ್ಬರು.   

2/9

ಅಶ್ವಿನಿ ಗೌಡ ಕೇವಲ ಕನ್ನಡ ಪರ ಹೋರಾಟಗಾರ್ತಿ ಅಷ್ಟೇ ಅಲ್ಲದೆ 25 ಧಾರಾವಾಹಿ ಹಾಗೂ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.   

3/9

ಕಲೆಯತ್ತ ಮುಖ ಮಾಡಿದ್ದರೂ ಅಶ್ವಿನಿ ಗೌಡ ಅವರು ರಾಜಕೀಯ ಹಿನ್ನೆಲೆಯಲ್ಲಿ ಬೆಳೆದು ಬಂದವರು. ಹುಟ್ಟಿನಿಂದಲೇ ಶ್ರೀಮಂತಿಕೆಯಲ್ಲಿ ಬೆಳೆದವರು.   

4/9

ಯೂಟ್ಯೂಬ್‌ ಚಾನೆಲ್‌ ಒಂದಕ್ಕೆ ಸಂದರ್ಶನ ಕೊಟ್ಟಿದ್ದ ಅಶ್ವಿನಿ ಗೌಡ ತಮಗೆ 150 ಮನೆಗಳ ಬಾಡಿಗೆ ಬರುತ್ತದೆ ಎಂದು ಹೇಳಿದ್ದರು, ತಾತನ ಬಳಿ ಆಸ್ತಿ ಇತ್ತು ಅದನ್ನು ತಂದೆ ಮತ್ತಷ್ಟು ಅಭಿವೃದ್ದಿಪಡಿಸಿದರು ಎಂದು ಹೇಳಿಕೊಂಡಿದ್ದರು.   

5/9

ಇನ್ನೂ ಅಶ್ವಿನಿ ಗೌಡ ಅವರಿಗೆ ಮದುವೆಯಾದಾಗ ತುಂಬಾ ಚಿಕ್ಕ ವಯಸ್ಸಾಗಿತ್ತಂತೆ, 17 ವರ್ಷದವರಿದ್ದಾಗ ಅವರ ಮದುವೆ ನಡೆದಿತ್ತು ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ.   

6/9

ಇನ್ನೂ ಅವರ ವೈವಾಹಿಕ ಜೀವನದ ಬಗ್ಗೆ ಮಾತನಾಡಿರುವ ಅವರು "ನನ್ನ ಪತಿಯ ಹೆಸರನ್ನು ಹೇಳಲು ನಾನು ಇಚ್ಛಿಸುವುದಿಲ್ಲ, ಏಕೆಂದರೆ ನಾವಿಬ್ಬರು ಈಗ ಜೊತೆಗೆ ಇಲ್ಲ. ಆದರೂ ಕೂಡ ನನ್ನ ಅತ್ತೆ ಮಾವ ನನಗೆ ತುಂಬಾ ಸಹಾಯ ಮಾಡಿದ್ದಾರೆ".  

7/9

"ನಾನು ಯಾವುದೇ ಕೆಲಸ ಮಾಡಿದರೂ ಅದಕ್ಕೆ ನನ್ನ ಅತ್ತೆ ಮಾವ ಅದಕ್ಕೆ ಪ್ರೋತ್ಸಾಹ ನೀಡಿದ್ದಾರೆ, ಇಂದಿಗೂ ಕೂಡ ನಾನು ಅವರ ಮನೆಗೆ ಹೋಗುತ್ತೇನೆ, ನನ್ನ ಅತ್ತೆ ಮಾವನೊಂದಿಗೆ ನಾನು ಚೆನ್ನಾಗಿಯೇ ಇದ್ದೇನೆ" ಎಂದು ಅಶ್ವಿನಿ ಗೌಡ ಹೇಳಿಕೊಂಡಿದ್ದಾರೆ.   

8/9

ಜಗಳಗಳಿಂದಲೇ ಆಗಲಿ, ಅಥವಾ ಕೆಟ್ಟ ಚಟಗಳಿಂದಲೇ ಆಗಲಿ ಅಂತಹ ಯಾವುದೇ ಕಾರಣಗಳಿಂದ ನಾವು ದೂರವಾಗಿಲ್ಲ, ನಮ್ಮಿಬ್ಬರಿಗೂ ಹೊಂದಾಣಿಕೆ ಆಗಿಲ್ಲ."  

9/9

"ನಮ್ಮ ಕುಟುಂಬಕ್ಕೂ ಹಾಗೂ ನಮ್ಮ ಮಾಜಿ ಪತಿಯ ಕುಟುಂಬಕ್ಕೂ ನನ್ನ ಮಗನೇ ಸೇತುವೇ, ನನ್ನ ಜೊತೆಗಿಂತಲೂ ನನ್ನ ಮಗ ಅಪ್ಪನೊಂದಿಗೆ ತುಂಬಾ ಕ್ಲೋಸ್‌" ಎಂದು ಹೇಳಿಕೊಂಡಿದ್ದಾರೆ.