BBK 12 updates : ಬಿಗ್ ಬಾಸ್ ಸೀಸನ್ 12 ಫಿನಾಲೆಗೆ ದಿನಗಣನೆ ಪ್ರಾರಂಭವಾಗಿದೆ. ಈಗಾಗಲೇ ಫಿನಾಲೆಗೆ ಎಂಟ್ರಿ ಕೊಡಲು ಸ್ಪರ್ಧಿಗಳು ಟಾಸ್ಕ್ ಮೇಲೆ ಟಾಸ್ಕ್ ಎದುರಿಸುತ್ತಿದ್ದಾರೆ. ಇದೀಗ ಇಂದು ನಡೆದ ಟಾಸ್ಕ್ ವೇಳೆ ಅವಘಡ ನಡೆದಿದ್ದು, ಅಶ್ವಿನಿ ಗೌಡ ಜಾರಿ ಬಿದ್ದಿದ್ದಾರೆ. ಅವರ ಆರೋಗ್ಯ ಹೇಗಿದೆ..? ಬನ್ನಿ ನೋಡೋಣ..
1/7ಬಿಗ್ ಬಾಸ್ ಕನ್ನಡ 12 ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಹೇಗಾದರೂ ಮಾಡಿ ಫಿನಾಲೆಗೆ ಎಂಟ್ರಿ ಕೊಡ್ಬೇಕು ಅಂತ ಸ್ಪರ್ಧಿಗಳು ಟಾಸ್ಕ್ ಎದುರಿಸುತ್ತಿದ್ದಾರೆ.
2/7ಇಷ್ಟು ದಿನ ಆರಾಮಾಗಿ ಜಗಳ ಮಾಡಿಕೊಂಡಿದ್ದ ಸ್ಪರ್ಧಿಗಳು ಬಿಗ್ ಬಾಸ್ ನೀಡುತ್ತಿರುವ ಟಾಸ್ಕ್‌ಗಳಿಗೆ ಸುಸ್ತಾಗುತ್ತಿದ್ದಾರೆ. ಅಲ್ಲದೆ, ಗೆಲ್ಲಲ್ಲು ಹರಸಾಹಸ ಮಾಡುತ್ತಿದ್ದಾರೆ.
3/7ಇದರ ಬೆನ್ನಲ್ಲೇ ಇಂದು ಬಿಗ್ ಬಾಸ್ ಮನೆ ಮಂದಿಗೆ ಟಾಸ್ಕ್ ಒಂದನ್ನು ನೀಡಿತ್ತು. ಸ್ವಿಮ್ಮಿಂಗ್ ಪೂಲ್‌ನಲ್ಲಿ ಇಡಲಾಗಿದ್ದ ಕಬ್ಬಿಣದ ರಾಡ್‌ಗಳನ್ನು ತಂದು ಟವರ್ ನಿರ್ಮಾಣಮಾಡಿ ಹತ್ತಬೇಕು..
4/7ಈ ಕುರಿತ ಪ್ರೋಮೋ ಇದೀಗ ಬಿಡುಗಡೆಯಾಗಿದ್ದು, ಅದರಲ್ಲಿ ರಘು, ಧನುಷ್ಯ, ಅಶ್ವಿನಿ ಗೌಡ್ ಟಾಸ್ಕ್‌ನಲ್ಲಿ ನಿರತರಾಗಿದ್ದಾರೆ. ಟವರ್ ಬಿಲ್ಡ್ ಮಾಡುವ ವೇಳೆ ಒಂದು ಅಹಿತಕರ ಘಟನೆ ನಡೆದಿದೆ.
5/7ಪ್ರೋಮೋದಲ್ಲಿ ತೋರಿಸಿದಂತೆ, ಧನಷ್ ಒಂದು ಕಡೆ ಮತ್ತು ಅಶ್ವಿನಿ ಒಂದು ಕಡೆ ಆಟವಾಡುತ್ತಿದ್ದಾರೆ. ಈ ವೇಳೆ ಟವರ್ ಬಿಲ್ಡ್ ಮಾಡುವ ವೇಳೆ ಅಶ್ವಿನಿ ಗೌಡ ಕಾಲು ಜಾರಿ ಬಿದ್ದಿದ್ದಾರೆ.
6/7ಅಂದಹಾಗೆ ಈ ಪ್ರೋಮೋದಲ್ಲಿ ಇಬ್ಬರು ಕಾಲು ಜಾರಿ ಬಿದ್ದಾಗ, ಮನೆ ಮಂದಿ ಶಾಕ್‌ಗೆ ಒಳಗಾಗುವ ಧೃಶ್ಯವನ್ನು ಸಹ ತೋರಿಸಲಾಗಿದೆ. ಆದರೆ ಯಾರಿಗೆ ಏನಾಯ್ತು ಎಂಬುವುದನ್ನು ರಿವೀಲ್ ಮಾಡಿಲ್ಲ.
7/7ಆದರೆ, ಅಶ್ವಿನಿಯವರಿಗೆ ಪೆಟ್ಟು ತಗುಲಿರಬೇಕು ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದರೆ, ಇನ್ನೂ ಕೆಲವರು ಧನುಷ್‌ಗೆ ನೋವಾಗಿರಬೇಕು ಅಂತೀದಾರೆ ಆದರೆ, ಈ ಕುರಿತು ಬಿಗ್ ಬಾಸ್ ಕ್ಲಾರಿಟಿ ನೀಡಿಲ್ಲ.