ಕೇವಲ 3 ಓವರ್, ಬರೋಬ್ಬರಿ 256 ರನ್... ಕ್ರಿಕೆಟ್ ಇತಿಹಾಸವೇ ಕಂಡುಕೇಳರಿಯದ ದಾಖಲೆಯಿದು! ಈ ನಿಬ್ಬೆರಗಾಗಿಸುವ ದಾಖಲೆ ಬರೆದವರು ಯಾರು ಗೊತ್ತಾ?
ಕ್ರಿಕೆಟ್ ಲೋಕದಲ್ಲಿ ಪ್ರತಿದಿನ ಒಂದಲ್ಲ ಒಂದು ದಾಖಲೆಗಳು ಸೃಷ್ಟಿಯಾಗುತ್ತವೆ. ಆದರೆ ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್ ಸರ್ ಡಾನ್ ಬ್ರಾಡ್ಮನ್ ಅವರ ಒಂದು ದಾಖಲೆಯನ್ನು ಇದುವರೆಗೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ.
1931ರಲ್ಲಿ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಕೇವಲ 22 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಬ್ಲ್ಯಾಕ್‌ಹೀತ್ XI ಮತ್ತು ಲಿಥ್ಗೋ XI ನಡುವಿನ ಪಂದ್ಯದಲ್ಲಿ, ಬ್ರಾಡ್‌ಮನ್ ಈ ಇನ್ನಿಂಗ್ಸ್ ಆಡಿದ್ದು, ಎದುರಾಳಿ ತಂಡವನ್ನು ಬಗ್ಗುಬಡಿದಿದ್ದರು. ಈ ಪಂದ್ಯದಲ್ಲಿ, ಅವರ ತಂಡವು ಒಟ್ಟು 357 ರನ್ ಗಳಿಸಿತು. ಅದರಲ್ಲಿ ಬ್ರಾಡ್ಮನ್ ಒಬ್ಬರೇ 256 ರನ್‌ಗಳ ಕೊಡುಗೆ ನೀಡಿದ್ದರು.
ಇನ್ನು ಬ್ಲ್ಯಾಕ್‌ಹೀತ್ ಎದುರು ಲಿಥ್‌ಗೋ ಇಲೆವೆನ್ ತಂಡ ಕೇವಲ 228 ರನ್ ಗಳಿಸಲಷ್ಟೇ ಶಕ್ತವಾಗಿ 129 ರನ್‌ಗಳ ಬೃಹತ್ ಅಂತರದಿಂದ ಸೋಲನುಭವಿಸಿತು.
ಡಾನ್ ಬ್ರಾಡ್ಮನ್ ಕೇವಲ 3 ಓವರ್ಗಳಲ್ಲಿ ಶತಕ ಪೂರೈಸಿದ್ದರು. ಈ ವಿಶೇಷ ದಾಖಲೆಯನ್ನು ಊಹಿಸಲೂ ಸಾಧ್ಯವಿಲ್ಲ. ಅಷ್ಟಕ್ಕೂ ಇದು ಸಾಧ್ಯವಾಗಿದ್ದು ಹೇಗೆ ಎಂಬುದನ್ನು ಮುಂದೆ ತಿಳಿದುಕೊಳ್ಳೋಣ.
ಇದರ ಹಿಂದಿನ ಕಾರಣ ಓವರ್‌ನಲ್ಲಿ ಬೌಲ್ ಮಾಡಿದ ಚೆಂಡುಗಳ ಸಂಖ್ಯೆ. ಆ ಸಮಯದಲ್ಲಿ ಒಂದು ಓವರ್‌ನಲ್ಲಿ 8 ಎಸೆತಗಳನ್ನು ಆಡಲಾಯಿತು. ಡಾನ್ ಬ್ರಾಡ್ಮನ್ ಮೊದಲ ಓವರ್‌ನಲ್ಲಿ 33 ರನ್, ಎರಡನೇ ಓವರ್‌ನಲ್ಲಿ 40 ರನ್ ಮತ್ತು ಮೂರನೇ ಓವರ್‌ನಲ್ಲಿ 27 ರನ್ ಗಳಿಸುವ ಮೂಲಕ ತಮ್ಮ ಶತಕವನ್ನು ಪೂರ್ಣಗೊಳಿಸಿದರು.
ಪಂದ್ಯದ ನಂತರ ಮಾತನಾಡಿದ್ದ ಬ್ರಾಡ್‌ಮನ್, "ನಾನು ಮೊದಲ ಓವರ್‌ನಲ್ಲಿ 33 ರನ್ ಗಳಿಸಿದೆ. 3 ಸಿಕ್ಸರ್, 3 ಬೌಂಡರಿ ಮತ್ತು ಒಮ್ಮೆ ಎರಡು ರನ್ ಗಳಿಸಿದೆ, ನಂತರ ಕೊನೆಯ ಎಸೆತದಲ್ಲಿ 1 ರನ್ ತೆಗೆದುಕೊಂಡು ಸ್ಟ್ರೈಕ್ ಉಳಿಸಿದೆ. ಎರಡನೇ ಓವರ್‌ನಲ್ಲಿ 40 ರನ್ ಗಳಿಸಿದೆ. ಅದರಲ್ಲಿ ನಾಲ್ಕು ಸಿಕ್ಸರ್ ಮತ್ತು 4 ಬೌಂಡರಿಗಳು ಸೇರಿತ್ತು. ಇದರಿಂದಾಗಿ, ವೆಂಡೆಲ್‌ಗೆ ಸ್ಟ್ರೈಕ್‌ಗೆ ಬರಲು ಅವಕಾಶ ಸಿಕ್ಕಿತು. ಅವರು ಮುಂದಿನ ಓವರ್‌ನಲ್ಲಿ 1 ರನ್ ನೀಡುವ ಮೂಲಕ ಸ್ಟ್ರೈಕ್ ನೀಡಿದರು. ಸ್ಟ್ರೈಕ್ ಪಡೆದ ನಂತರ ನಾನು 2 ಸಿಕ್ಸರ್ ಬಾರಿಸಿ 1 ರನ್ ತೆಗೆದುಕೊಂಡೆ. 5 ನೇ ಎಸೆತದಲ್ಲಿ ನನಗೆ ಮತ್ತೊಮ್ಮೆ ಸ್ಟ್ರೈಕ್ ನೀಡಿದರು. ಆಗ ಎರಡು ಬೌಂಡರಿ ಮತ್ತು 1 ಸಿಕ್ಸರ್ನೊಂದಿಗೆ ಓವರ್ ಅನ್ನು ಮುಗಿಸಿದೆ" ಎಂದಿದ್ದಾರೆ.
ಅಂದಹಾಗೆ ಈ ಇನ್ನಿಂಗ್ಸ್‌ನಲ್ಲಿ ಡಾನ್ ಬ್ರಾಡ್ಮನ್ ಅವರು 3 ಓವರ್‌ಗಳಲ್ಲಿ 14 ಸಿಕ್ಸರ್ ಮತ್ತು 29 ಸಿಕ್ಸರ್ ಸೇರಿ ಬರೋಬ್ಬರಿ 256 ರನ್‌ಗಳ ಕೊಡುಗೆ ನೀಡಿದ್ದಾರೆ.