ಬಾಬಾ ವಂಗಾ ಭವಿಷ್ಯ 2026: ಹೊಸ ವರ್ಷದಲ್ಲಿ 5 ರಾಶಿಯವರಿಗೆ ಭಾಗ್ಯೋದಯ, ಖ್ಯಾತಿ, ಯಶಸ್ಸು, ಕೋಟ್ಯಾಧಿಪತಿ ಯೋಗ

Written ByYashaswini V
Published: Nov 03, 2025, 07:46 AM IST|Updated: Nov 03, 2025, 07:46 AM IST

Baba Vanga Predictions: Lucky Zodiac Signs Of 2026 | ಬಾಬಾ ವಂಗಾ ಭವಿಷ್ಯ 2026: ಹೊಸ ವರ್ಷದಲ್ಲಿ 5 ರಾಶಿಯವರಿಗೆ ಭಾಗ್ಯೋದಯ, ಖ್ಯಾತಿ, ಯಶಸ್ಸು, ಕೋಟ್ಯಾಧಿಪತಿ ಯೋಗ 
 

Baba Vanga Prediction 2026: ನಿಖರ ಭವಿಷ್ಯವಾಣಿಗೆ ಹೆಸರುವಾಸಿ ಆಗಿರುವ ಬಾಬಾ ವಂಗಾ ಪ್ರಕಾರ, 2026ರ ವರ್ಷವು ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಸವಾಲಿನದ್ದಾಗಿರುತ್ತದೆ. ಆದರೆ ಇದೇ ವೇಳೆ ಹೊಸ ವರ್ಷವು 5 ರಾಶಿಯವರ ಬಾಳಿನಲ್ಲಿ ಹೊಸ ಹರ್ಷ, ಕೀರ್ತಿ,ಅಪಾರ ಧನಸಂಪತ್ತನ್ನು ಹೊತ್ತು ತರಲಿದೆ ಎನ್ನಲಾಗುತ್ತಿದೆ. 

Baba Vanga Prediction1/6

ಬಾಬಾ ವಂಗಾ ಭವಿಷ್ಯವಾಣಿ 2026

ಪ್ರಪಂಚದಾದ್ಯಂತ ನಿಖರ ಭವಿಷ್ಯವಾಣಿಗೆ ಹೆಸರುವಾಸಿ ಆಗಿರುವ ಬಾಬಾ ವಂಗಾ 2026ರ ಬಗ್ಗೆಯೂ ಭವಿಷ್ಯ ನುಡಿದಿದ್ದು ಇಡೀ ವಿಶ್ವದಲ್ಲಿ ಮೂರನೇ ಮಹಾಯುದ್ಧದ ಭೀತಿ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಪ್ರಕೃತಿ ವಿಕೋಪಗಳಾದ ಭೂಕಂಪ, ಜ್ವಾಲಾಮುಖಿಯಂತಹ ಘಟನೆಗಳು ಜರುಗುವ ಬಗ್ಗೆಯೂ ತಿಳಿಸಿದ್ದಾರೆ. ದ್ವಾದಶ ರಾಶಿಗಳ ಬಗ್ಗೆಯೂ ಭವಿಷ್ಯ ನುಡಿದಿರುವ ಬಾಬಾ ವಂಗಾ 2026ರಲ್ಲಿ ಐದು ರಾಶಿಯವರಿಗೆ ಈ ವರ್ಷ ಲಕ್ ಚೇಂಜ್ ಮಾಡಲಿದೆ ಎಂದಿದ್ದಾರೆ. ಆ ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ...

Baba Vanga Prediction2/6

ಮೇಷ ರಾಶಿ

ಬಾಬಾ ವಂಗಾ ಭವಿಷ್ಯವಾಣಿ 2026ರ ಪ್ರಕಾರ, ಹೊಸ ವರ್ಷವೂ ಈ ರಾಶಿಯವರಿಗೆ ಹೊಸ ಆರಂಭಗಳಿಗೆ ನಾಂದಿ ಹಾಡಲಿದೆ. ಉದ್ಯೋಗ ರಂಗದಲ್ಲಿ ಇಷ್ಟು ವರ್ಷಗಳ ಕಠಿಣ ಪರಿಶ್ರಮಕ್ಕೆ ಮನ್ನಣೆ ದೊರೆಯಲಿದ್ದು ಬಡ್ತಿ ಸಾಧ್ಯತೆಯೂ ಇದೆ. ವ್ಯಾಪಾರ-ವ್ಯವಹಾರದಲ್ಲಿ ಹೊಸ ಆಲೋಚನೆಗಳಿಂದ ಮುಂದುವರೆದರೆ ಯಶಸ್ಸು ಕೈ ಹಿಡಿಯಲಿದೆ. ಅಪಾರ ಹಣದ ಹರಿವಿನಿಂದ ಕೋಟ್ಯಾಧಿಪತಿ ಯೋಗವೂ ಇದೆ.

Baba Vanga Prediction3/6

ವೃಷಭ ರಾಶಿ

ಬಾಬಾ ವಂಗಾ ಪ್ರಕಾರ, 2026ರಲ್ಲಿ ಈ ರಾಶಿಯವರಿಗೆ ವೃತ್ತಿ ರಂಗದಲ್ಲಿ ಭಾರೀ ಪ್ರಯೋಜನವಾಗಲಿದೆ. ವ್ಯವಹಾರದಲ್ಲಿ ದೊಡ್ಡ ಆಫರ್ ದೊರೆಯಲಿದ್ದು ಹಣಕಾಸಿನ ಭಾಗವು ಸುಧಾರಿಸಲಿದೆ. ಭೂಮಿ ಖರೀದಿಸುವ ನಿಮ್ಮ ಕನಸು ನನಸಾಗುವ ಸುವರ್ಣ ಕಾಲ. ಕುಟುಂಬದಲ್ಲಿ ಸುಖ, ಶಾಂತಿ ನೆಲೆಸಲಿದೆ. ಆದಾಗ್ಯೂ ಈ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. 

Baba Vanga Prediction4/6

ಮಿಥುನ ರಾಶಿ

2026ರ ವರ್ಷವೂ ಈ ರಾಶಿಯ ನಿರುದ್ಯೋಗಿಗಳಿಗೆ ಭಾಗ್ಯೋದಯದ ಸಮಯ. ಈ ವೇಳೆ ಪಾಲುದಾರಿಕೆ ವ್ಯವಹಾರಗಳಲ್ಲಿ ಭಾರೀ ಲಾಭವನ್ನು ನಿರೀಕ್ಷಿಸಬಹುದು. ಡಿಜಿಟಲ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಆದಾಯದ ಮೂಲಗಳು ಹೆಚ್ಚಾಗಲಿವೆ. ಈ ಅವರಧಿಯಲ್ಲಿ ವ್ಯವಹಾರ ಸಂಬಂಧಿತ ವಿದೇಶ ಪ್ರಯಾಣ ಸಾಧ್ಯತೆ ಬಗ್ಗೆ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. 

Baba Vanga Prediction5/6

ಸಿಂಹ ರಾಶಿ

ಬಾಬಾ ವಂಗಾ ಭವಿಷ್ಯವಾಣಿ 2026ರಲ್ಲಿ ಈ ರಾಶಿಯ ಉದ್ಯೋಗಸ್ಥರಿಗೆ ಬಡ್ತಿ, ವೇತನ ಹೆಚ್ಚಳದಿಂದ ಹಣಕಾಸಿನ ಸ್ಥಿತಿಯಲ್ಲಿ ಗಮನಾರ್ಹ ಪ್ರಗತಿ ಕಂಡು ಬರಲಿದೆ. ವ್ಯವಹಾರದಲ್ಲಿ ಭರ್ಜರಿ ಆದಾಯವನ್ನು ಗಳಿಸುವ ಇವರಿಗೆ ಕೋಟ್ಯಾಧಿಪತಿ ಯೋಗವೂ ಇದೆ. ಆತ್ಮವಿಶ್ವಾಸ ಹೆಚ್ಚಾಗಲಿದ್ದು ಕೆಲಸ, ಕಾರ್ಯಗಳಲ್ಲಿ ಯಶಸ್ಸು, ಕೀರ್ತಿ ಗಳಿಸುವಿರಿ. ಅವಿವಾಹಿತರಿಗೆ ವಿವಾಹ ಯೋಗವೂ ಇದೆ. 

Baba Vanga Prediction6/6

ಕುಂಭ ರಾಶಿ

ಈ ರಾಶಿಯ ನವೀನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ 2026ರಲ್ಲಿ ಅದೃಷ್ಟದ ಸಮಯ. ವ್ಯವಹಾರದಲ್ಲಿ ನವೀನತೆಯು ನಿಮ್ಮನ್ನು ಹೊಸ ಎತ್ತರಕ್ಕೆ ಕರೆದೊಯ್ಯಲಿದೆ. ಧನಾಗಮನದಿಂದ ಶ್ರೀಮಂತರಾಗುವ ಯೋಗವೂ ಇದ್ದು ಸಮಾಜದಲ್ಲಿ ನಿಮ್ಮ ಕೀರ್ತಿ, ಗೌರವಗಳು ಹೆಚ್ಚಾಗಲಿವೆ. ಕುಟುಂಬದಲ್ಲಿ ಸಂಬಂಧಗಳು ಸುಧಾರಿಸಲಿದ್ದು, ಸಂತಸದ ವಾತಾವರಣ ಇರಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.