Baba vanga 2025 predictions: ಬಾಬಾ ವಂಗಾ ಪ್ರಕಾರ 2026ರಿಂದ ಇಡೀ ಪ್ರಪಂಚವೇ ಮಾನವ ಇತಿಹಾಸದ ಹಾದಿಯನ್ನ ಬದಲಾಯಿಸಬಹುದಾದ ಪ್ರಮುಖ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆಯಂತೆ. 2026ರ ಹೊಸ ವರ್ಷದಲ್ಲಿ ಭಾರತ ಸೇರಿದಂತೆ ಜಗತ್ತಿನಲ್ಲಿ ನಡೆಯಬಹುದಾದ ಅನೇಕ ಪ್ರಮುಖ ಘಟನೆಗಳ ಬಗ್ಗೆ ಬಾಬಾ ವಂಗಾ ಭವಿಷ್ಯಗಳನ್ನ ನುಡಿದಿದ್ದಾರೆ. ಬಲ್ಗೇರಿಯನ್ ಖ್ಯಾತ ಪ್ರವಾದಿ ಬಾಬಾ ವಂಗಾ ಹೊಸ ವರ್ಷದ ಬಗ್ಗೆ ಕೆಲವು ಆಘಾತಕಾರಿ ಭವಿಷ್ಯವಾಣಿಗಳನ್ನ ನುಡಿದಿದ್ದಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದ್ದಾರೆ.
1/5ಹಸಿವು ಕಣ್ಮರೆಯಾಗಲಿದೆ: ಬಲ್ಗೇರಿಯನ್ ಖ್ಯಾತ ಪ್ರವಾದಿ ಬಾಬಾ ವಂಗಾರ ಪ್ರಕಾರ, ದೀರ್ಘಕಾಲದ ಹಸಿವಿನ ಸಮಸ್ಯೆ 2026ರ ವೇಳೆಗೆ ಕ್ರಮೇಣ ಕಣ್ಮರೆಯಾಗಲು ಪ್ರಾರಂಭವಾಗುತ್ತದೆ. ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗಳು ಆಹಾರ ಬಿಕ್ಕಟ್ಟನ್ನು ನಿವಾರಿಸುತ್ತದೆ. ಭಾರತವೂ ಸೇರಿದಂತೆ ಪ್ರತಿಯೊಂದು ದೇಶವೂ ಸಾಕಷ್ಟು ಆಹಾರವನ್ನ ಹೊಂದಿರುತ್ತದಂತೆ.
2/5ದೊಡ್ಡ ಜಾಗತಿಕ ಸಂಘರ್ಷ: 2026ರ ಸಮಯದಲ್ಲಿ ಬಾಬಾ ವಂಗಾ ಅವರು, ಒಂದು ದೊಡ್ಡ ಜಾಗತಿಕ ಸಂಘರ್ಷದ ಬಗ್ಗೆ ಭವಿಷ್ಯ ನುಡಿದ್ದಿದ್ದಾರೆ. ಈ ಸಂಘರ್ಷವು ಸೀಮಿತ ಪ್ರದೇಶಗಳಲ್ಲಿ ಪ್ರಾರಂಭವಾಗುತ್ತದೆ. ಆದರೆ ಇದರ ಪರಿಣಾಮಗಳು ಇಡೀ ಪ್ರಪಂಚದ ಮೇಲೆ ವಿನಾಶಕಾರಿ ಆರ್ಥಿಕ ಪರಿಣಾಮವನ್ನ ಬೀರಬಹುದು ಎಂದು ಊಹಿಸಲಾಗಿದೆ.
3/5ಚೀನಾ vs ಅಮೆರಿಕ: ಬಾಬಾ ವಂಗಾ ಅವರ ಪ್ರಕಾರ, ಮುಂಬರುವ ವರ್ಷಗಳಲ್ಲಿ ಚೀನಾ ಆರ್ಥಿಕ ಮತ್ತು ಮಿಲಿಟರಿ ರಂಗಗಳಲ್ಲಿ ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕವನ್ನ ಮೀರಿಸುತ್ತದಂತೆ. ಈ ಬದಲಾವಣೆಯು ಜಾಗತಿಕ ಅಧಿಕಾರದ ಸಮತೋಲನವನ್ನ ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದು ಹೇಳಲಾಗಿದೆ.
4/5ಭಾರತದಲ್ಲಿ ನೈಸರ್ಗಿಕ ವಿಕೋಪ: ಭಾರತದ ಭವಿಷ್ಯದ ಬಗ್ಗೆ ಬಾಬಾ ವಂಗಾ ಅವರು ಹಲವಾರು ಆತಂಕಕಾರಿ ಎಚ್ಚರಿಕೆಗಳನ್ನ ನೀಡಿದ್ದಾರೆ. ವಂಗಾರ ಪ್ರಕಾರ, ಮುಂಬರುವ ವರ್ಷಗಳಲ್ಲಿ ಭಾರತವು ನೈಸರ್ಗಿಕ ವಿಕೋಪಗಳನ್ನ ಎದುರಿಸಲಿದೆಯಂತೆ. ಅನೇಕ ರಾಜ್ಯಗಳಲ್ಲಿ ತೀವ್ರ ಪ್ರವಾಹ ಮತ್ತು ಭೂಕುಸಿತಗಳು, ದಾಖಲೆಯ ಉಷ್ಣತೆ ಮತ್ತು ಬರಗಾಲ, ತೀವ್ರ ನೀರಿನ ಕೊರತೆ, ಕೃಷಿ ಮತ್ತು ರಾಜಕೀಯ ಎರಡರ ಮೇಲೂ ಪರಿಣಾಮ ಬೀರುತ್ತದಂತೆ. ಈ ಎಚ್ಚರಿಕೆಯು ಪ್ರತಿಯೊಬ್ಬರೂ ಸಹ ಪರಿಸರ ಸಮತೋಲನ ಮತ್ತು ನೀರಿನ ಸಂರಕ್ಷಣೆಯ ಬಗ್ಗೆ ಜಾಗರೂಕರಾಗಿರಬೇಕು ಎಂಬುದನ್ನ ಸೂಚಿಸಿದೆ.
5/5(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)