Madhuri Dixit controversy : ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ಒಂದು ಹಾಡು ದೇಶಾದ್ಯಂತ ಸಂಚಲನ ಮೂಡಿಸಿತು. ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ ಈ ಹಾಡನ್ನು ನಿಷೇಧಿಸಿತು. ಕೊನೆಗೆ, ಮಾಧುರಿ ನ್ಯಾಯಾಲಯದ ಮೊರೆ ಹೋಗಿ ಬಾಳಾಸಾಹೇಬರ ಸಹಾಯದಿಂದ ಪ್ರಕರಣದಿಂದ ಹೊರ ಬಂದರು..
1/8ಜನರ ನೆಚ್ಚಿನ ಹಳೆಯ ಹಾಡುಗಳು ಸಾಕಷ್ಟಿವೆ. ಆದರೆ, ಕೆಲವೊಂದಿಷ್ಟನ್ನು ಮಾತ್ರ ಇಂದಿಗೂ ಮರೆಯಲು ಆಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ, ಅನೇಕ ಹಳೆಯ ಹಾಡುಗಳನ್ನು ರೀಮೇಕ್ ಮಾಡಲಾಗುತ್ತದೆ. ಆದರೆ ಒಂದು ಹಾಡು ದೇಶಾದ್ಯಂತ ಸಂಚಲನ ಸೃಷ್ಟಿಸಿತು.
2/8ಆ ಸಮಯದಲ್ಲಿ ಈ ಹಾಡಿನ ಕಾರಣದಿಂದಾಗಿ ಇಡೀ ತಂಡವು ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಯಿತು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಅಲ್ಲದೆ, ಈ ಹಾಡನ್ನು ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ ನಿಷೇಧಿಸಿವೆ. ನೀವು ಯಾವ ಹಾಡಿನ ಬಗ್ಗೆ ಯೋಚಿಸುತ್ತಿದ್ದೀರಿ ಅಂತ ಗೊತ್ತಾಯ್ತಾ? ಈ ಹಾಡು 1993 ರ 'ಖಲ್ನಾಯಕ್' ಚಿತ್ರದದ್ದು.
3/8ಹೌದು.. ‘ಖಲ್ನಾಯಕ್’ ಸಿನಿಮಾದ ಚೋಲಿ ಕೆ ಪೀ ಕ್ಯಾ ಹೈ ಹಾಡು ಅಂದಿನ ಕಾಲದಲ್ಲಿ ಸೂಪರ್ ಹಿಟ್ ಆಗಿತ್ತು. ನಿರ್ದೇಶಕ ಸುಭಾಷ್ ಘಾಯ್ ಅವರ ಈ ಚಿತ್ರದಲ್ಲಿ ಮಾಧುರಿ ದೀಕ್ಷಿತ್, ಸಂಜಯ್ ದತ್ ಮತ್ತು ಜಾಕಿ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
4/8ಆ ಸಮಯದಲ್ಲಿ ಈ ಚಿತ್ರವು ಭಾರಿ ಹಿಟ್ ಆಗಿತ್ತು. 4 ಕೋಟಿ ರೂಪಾಯಿ ಬಜೆಟ್‌ನೊಂದಿಗೆ, ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 21 ಕೋಟಿ ರೂಪಾಯಿಗಳನ್ನು ಗಳಿಸಿತು. ಆದರೆ ಚಿತ್ರದ ಹಾಡು ಸಂಚಲನವನ್ನು ಸೃಷ್ಟಿಸಿತು.
5/8'ಚೋಲಿ ಕೆ ಪೀ ಕ್ಯಾ ಹೈ' ಹಾಡನ್ನು ಅಲ್ಕಾ ಯಾಜ್ಞಿಕ್ ಮತ್ತು ಇಲಾ ಅರುಣ್ ಹಾಡಿದ್ದಾರೆ. ಆದರೆ ಹಾಡಿನ ಸಾಹಿತ್ಯವನ್ನು ಜನರು ವ್ಯಾಪಕವಾಗಿ ಟೀಕಿಸಿದರು. ಅನೇಕರು ಆಕ್ಷೇಪ ವ್ಯಕ್ತಪಡಿಸಿದರು. ಈ ಹಾಡು ಅಶ್ಲೀಲವಾಗಿದ್ದು, ಮಹಿಳೆಯರಿಗೆ ಅವಮಾನಕರವಾಗಿದೆ ಎಂದು ಹಲವರು ದೂರಿದರು.
6/8ಅಷ್ಟೇ ಅಲ್ಲದೆ, ಈ ಹಾಡಿನ ವಿವಾದ ಎಷ್ಟರ ಮಟ್ಟಿಗೆ ತಾರಕಕ್ಕೇರಿತು ಎಂದರೆ ವಿಷಯ ನೇರವಾಗಿ ನ್ಯಾಯಾಲಯಕ್ಕೆ ಹೋಯಿತು. ಈ ಹಾಡನ್ನು ಚಿತ್ರದಿಂದ ತೆಗೆದುಹಾಕಬೇಕೆಂದು ಅನೇಕ ಜನರು ಸೆನ್ಸಾರ್ ಮಂಡಳಿಯನ್ನು ಒತ್ತಾಯಿಸಿದ್ದರು. ಮಾರಾಟವಾದ ಕ್ಯಾಸೆಟ್‌ಗಳನ್ನು ಹಿಂತಿರುಗಿಸಬೇಕೆಂದು ಒತ್ತಾಯಿಸಿದ್ದರು. ಆದರೆ ನ್ಯಾಯಾಲಯವು ಈ ಹಾಡಿನಲ್ಲಿ ಆಕ್ಷೇಪಾರ್ಹವಾದ ವಿಷಯ ಏನೂ ಇಲ್ಲ ಎಂದು ಹೇಳುವ ಮೂಲಕ ವಿಷಯವನ್ನು ಕೊನೆಗೊಳಿಸಿತು.
7/8ನ್ಯಾಯಾಲಯದ ತೀರ್ಪಿನ ನಂತರ ಶಿವಸೇನಾ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಮಾಧುರಿಯ ಸಹಾಯಕ್ಕೆ ಬಂದಿದ್ದರು ಎಂಬ ವಿಚಾರ ಬಹಿರಂಗವಾಯಿತು. "ಈ ಹಾಡಿನಲ್ಲಿ ಅಶ್ಲೀಲವಾದದ್ದೇನೂ ಇಲ್ಲ, ಆದ್ದರಿಂದ ಅದನ್ನು ವಿರೋಧಿಸುವುದನ್ನು ನಿಲ್ಲಿಸಿ" ಎಂದು ಅವರು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿದರಂತೆ.
8/8ಇಷ್ಟೆಲ್ಲಾ ಆದ ನಂತರವೂ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ ಆ ಹಾಡನ್ನು ಚಿತ್ರದಿಂದ ನಿಷೇಧಿಸುತ್ತಲೇ ಇದ್ದವು. ಪರಿಣಾಮವಾಗಿ, ಆ ಹಾಡನ್ನು ಟಿವಿ ಮತ್ತು ರೇಡಿಯೊದಲ್ಲಿ ಬಹಳ ದಿನಗಳ ಕಾಲ ಕೇಳಲು ಸಾಧ್ಯವಾಗಲಿಲ್ಲ.