Barley Water For Blood Sugar: ಮಧುಮೇಹ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ. ಈ ರೋಗವು ಚಿಕ್ಕವರಾಗಲಿ ಅಥವಾ ಹಿರಿಯರಾಗಲಿ ಎಲ್ಲರನ್ನೂ ಬಾಧಿಸುತ್ತಿದೆ. ಆದರೆ ಈ ಶುಗರ್ ಇರುವವರು ತಮ್ಮ ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ವಿಶೇಷವಾಗಿ ಸಿಹಿ ಆಹಾರಗಳನ್ನು ತಪ್ಪಿಸಬೇಕು. ಅಲ್ಲದೆ, ಜೀವನಶೈಲಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಕೊಳ್ಳಬೇಕು..
ಮಧೂಮೇಹಿಗಳು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಾರ್ಲಿ ನೀರು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಹೌದು ಮಧುಮೇಹಿಗಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾರ್ಲಿ ಧಾನ್ಯಗಳನ್ನು ಕುದಿಸಿ ಆ ನೀರನ್ನು ಕುಡಿದರೆ ಅವರ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವುದಿಲ್ಲ ಎಂದು ಹೇಳಲಾಗುತ್ತದೆ..
ಬಾರ್ಲಿಯು 'ಬೀಟಾ ಗ್ಲುಕನ್' ಎಂಬ ಸುಲಭವಾಗಿ ಜೀರ್ಣವಾಗುವ ಫೈಬರ್ ಅನ್ನು ಹೊಂದಿರುತ್ತದೆ. ಈ ನಾರು ರಕ್ತದಲ್ಲಿ ಹೆಚ್ಚುವರಿ ಸಕ್ಕರೆಯನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದು ಸಿಹಿತಿಂಡಿಗಳನ್ನು ತಿನ್ನುವ ಬಯಕೆಯನ್ನು ಸಹ ಕಡಿಮೆ ಮಾಡುತ್ತದೆ. ಬಾರ್ಲಿಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ಮಧುಮೇಹ ರೋಗಿಗಳಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಮತ್ತು ಸಂಧಿವಾತದಂತಹ ಕಾಯಿಲೆಗಳನ್ನು ಸಹ ತಡೆಯುತ್ತದೆ.
ಬಾರ್ಲಿ ನೀರಿನಲ್ಲಿರುವ ಫೈಬರ್ ಮತ್ತು ಇತರ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆ, ವಾಯು ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಧುಮೇಹ ರೋಗಿಗಳಲ್ಲಿ ಹೃದಯ ಕಾಯಿಲೆ ತುಂಬಾ ಸಾಮಾನ್ಯವಾಗಿದೆ.
ಬಾರ್ಲಿ ನೀರು ಕುಡಿಯುವುದರಿಂದ ಹೃದಯ ಕಾಯಿಲೆ ಬರುವುದಿಲ್ಲ. ಈ ಪಾನೀಯವು ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.
ಬಾರ್ಲಿ ನೀರು ಕ್ಯಾನ್ಸರ್ ಅಪಾಯವನ್ನು ಸಹ ತಡೆಯುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಇವು ಕ್ಯಾನ್ಸರ್ ಮತ್ತು ಹೃದಯ ಸಮಸ್ಯೆಗಳು ನರಗಳ ಸಮಸ್ಯೆಗಳನ್ನು ತಡೆಯುತ್ತವೆ. ಮಧುಮೇಹದಲ್ಲಿ ತೂಕ ನಿಯಂತ್ರಣ ಬಹಳ ಮುಖ್ಯ. ಬಾರ್ಲಿ ನೀರು ತೂಕ ಇಳಿಸುತ್ತದೆ. ಈ ಪಾನೀಯದಲ್ಲಿ ಕ್ಯಾಲೋರಿಗಳು ಕಡಿಮೆ. ಇದು ಚಯಾಪಚಯ ಕ್ರಿಯೆಯನ್ನೂ ಸುಧಾರಿಸುತ್ತದೆ.
ಮೊದಲು ಬಾರ್ಲಿ ಧಾನ್ಯಗಳನ್ನು ಚೆನ್ನಾಗಿ ತೊಳೆದು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ, ಸ್ವಲ್ಪ ನೀರು ಸುರಿದು 10 ನಿಮಿಷಗಳ ಕಾಲ ಒಲೆಯ ಮೇಲೆ ಬೇಯಿಸಿ. ಈ ಬಾರ್ಲಿ ನೀರಿನೊಂದಿಗೆ ನಿಂಬೆ ರಸವನ್ನು ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ನೀವು ಇದನ್ನು ಪ್ರತಿದಿನ ಕುಡಿದರೆ, ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶಗಳು ಕಾಣುತ್ತವೆ ಎಂದು ತಜ್ಞರು ಹೇಳುತ್ತಾರೆ.