BBK 12: ಬಿಗ್‌ಬಾಸ್ ಮನೆಯಲ್ಲಿ ಈ ವಾರ ಇಬ್ಬರು ಪ್ರಮುಖ ಸ್ಪರ್ಧಿಗಳು ಔಟ್ ಆಗಿದ್ದಾರೆ...
1/11Bigg Boss 12 Elimination: ಕಳೆದ ವಾರ ಬಿಗ್ ಬಾಸ್ 12ರ ಓಪನಿಂಗ್ ಅದ್ಧೂರಿಯಾಗಿ ನಡೆದಿತ್ತು. ಮನೆಯೊಳಗೆ 19 ಮಂದಿ ಎಂಟ್ರಿ ಕೊಟ್ಟಿದ್ದರು. ಆದರೆ ಇದೀಗ ಮೊದಲ ವಾರವೇ ಬಿಗ್‌ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ನಡೆದಿದೆ.
2/11ಮೊದಲನೇ ವಾರವೇ ಬಿಗ್‌ಬಾಸ್ ಮನೆಯಲ್ಲಿ ಹೈ ಡ್ರಾಮಾ ಶುರುವಾಗಿದೆ, ಸ್ವಲ್ಪ ಮುನಿಸಿ, ಸ್ವಲ್ಪ ಜಗಳ, ಕೀಟಲೇ ಸೇರಿ ಸ್ಫರ್ಧಿಗಳು ಅಮೋಘವಾಗಿ ತಮ್ಮ ಆಟವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
3/11ಈ ಮಧ್ಯೆ ಬಿಗ್ ಬಾಸ್ ಮನೆಯಿಂದ ಇಬ್ಬರು ಸ್ಪರ್ಧಿಗಳು ಈ ವಾರ ಮನೆಯಿಂದ ಔಟ್ ಆಗಿದ್ದಾರೆ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ.
4/11ಮೊದಲನೇ ವಾರವೇ ಮನೆಗೆ 19ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಆರ್‌ಜೆ ಅಮಿತ್ ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತದೆ.
5/11ಆರ್‌ಜೆ ಅಮಿತ್, ಮನೆಯೊಳಗೆ ಎಂಟ್ರಿ ಕೊಡುವ ಮುನ್ನವೇ "ಬಿಗ್‌ಬಾಸ್ ಒಂದು ಕ್ರಿಂಜ್ ಶೋ" ಎನ್ನುವ ಮೂಲಕ ಪ್ರೇಕ್ಷಕರ ಕೋಪಕ್ಕೆ ಗುರಿಯಾಗಿದ್ದರು, ಅಮಿತ್‌ನ ಹೇಳಿಕೆಗೆ ಸುದೀಪ್ ಕೂಡ ಕೌಂಟರ್ ಕೊಟ್ಟಿದ್ದರು.
6/11ಆದರೆ, ಈ ವಾರ ಅಮಿತ್ ಬಿಗ್‌ಬಾಸ್ ಮನೆಯಿಂದ ಮೊದಲನೆಯದ್ದಾಗಿ ಎಲಿಮಿನೇಟ್ ಆಗಲಿದ್ದಾರೆ ಎಂದು ಪ್ರೇಕ್ಷಕರು ಅಭಿಪ್ರಾಯ ಪಡುತ್ತಿದ್ದಾರೆ.
7/11ಇನ್ನೂ ಈ ವಾರ ಒಂದೇ ಅಲ್ಲ ಎರಡೆರೆಡು ಎಲಿಮಿನೇಷನ್ ಬಿಗ್‌ಬಾಸ್ ಮನೆಯಲ್ಲಿ ನಡೆಯಲಿದ್ದು, ಈ ವಾರ ಎರಡನೇ ಸ್ಪರ್ಧಿಯಾಗಿ ಕರಿಬಸಪ್ಪ ಬಿಗ್‌ಬಾಸ್ ಮನೆಯಿಂದ ಹೊರಬರಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
8/11ಕರಿಬಸಪ್ಪ 15ನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಮೊದಲನೇ ವಾರವೇ ಕರಿಬಸಪ್ಪ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ ಎಂದು ಪ್ರೇಕ್ಷಕರು ಅಂದಾಜಿಸುತ್ತಿದ್ದಾರೆ.
9/11ಪ್ರತಿ ಸೀಸನ್‌ನಲ್ಲಿಯೂ ನಾಮಿನೇಷನ್ ಪ್ರಕ್ರಿಯೆಯನ್ನು ಸೋಮವಾರನೇ ಮಾಡಲಾಗುತ್ತಿತ್ತು, ಆದರೆ ಈ ವಾರ ಶುಕ್ರವಾರ ನಾಮಿನೇಷನ್ ಪ್ರಕ್ರಿಯೆಯನ್ನು ನಡೆಸಲಾಗತ್ತು.
10/11ನಾಮಿನೇಷನ್ ನಡೆಸಲಾಗಿತ್ತಾದರೂ ವೋಟಿಂಗ್ ಲೈನ್‌ಗಳು ಓಪನ್ ಆಗಿರಲಿಲ್ಲ, ಆದ್ದರಿಂದ ಈ ವಾರ ಬಿಗ್‌ಬಾಸ್ ಮನೆಯಲ್ಲಿ ಎಲಿಮಿನೇಷನ್ ಇರುವುದಿಲ್ಲ ಎಂದೂ ಕೂಡ ಅಂದಜಿಸಲಾಗಿತ್ತು.
11/11ಇನ್ನೂ, ಇಂದು ಕಿಚ್ಚನ ಪಂಚಾಯಿತಿಯಲ್ಲಿ ತೀರ್ಮಾನ ಹೊರ ಬೀಳಿಲಿದ್ದು, ಯಾರಿಗೆ ಗೇಟ್ ಪಾಸ್ ಸಿಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.