Bigg Boss Kannada 12: ಗಿಲ್ಲಿ ಮೇಲೆ ಕೈ ಮಾಡಿದ ರಿಷಾಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಹೊರಹೋಗುವ ಬಗ್ಗೆ ಬಿಗ್‌ಬಾಸ್ ಮನೆಯವರ ನಿರ್ಧಾರ ಏನು
Bigg Boss Kannada 12: ಬಿಗ್‌ಬಾಸ್ ಮನೆಯಲ್ಲಿ ಕೂಗಾಟ ಮತ್ತು ಆಗಾಗ ಹೊಡೆದಾಟ ಆಗುವುದೇನು ಹೊಸದೇನಲ್ಲ. ಕೆಲವೊಮ್ಮೆ ಸಣ್ಣ ಪ್ರಮಾಣದಲ್ಲಿ ಶುರುವಾದ ಜಗಳಗಳೇ ದೊಡ್ಡ ಪ್ರಮಾಣಕ್ಕೆ ಹೋಗಿ, ಇದೇ ಕಾರಣಕ್ಕೆ ಕೆಲವು ಆಟಗಾರರು ದೊಡ್ಮನೆಯಿಂದ ಹೊರಗೆ ಹೋಗಿರುವುದನ್ನು ನಾವು ನೋಡಿದ್ದೇವೆ.
ಭಾರೀ ಪ್ರಮಾಣದಲ್ಲಿ ಈ ರೀತಿ ಆದಂತಹ ಜಗಳಗಳು ವಾರಾತ್ಯದಲ್ಲಿ ಕಿಚ್ಚ ಸುದೀಪ್ ಅವರ ಎದುರಿಗೆ ಯಾವ ರೀತಿ ನಿರ್ಣಯವಗುತ್ತವೆ ಎಂಬುವುದನ್ನು ನೋಡದಲು ಬಿಗ್‌ಬಾಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ.
ಇನ್ನು ಈ ಸೀಸನ್ ಕೂಡ ಈ ವಿಷಯದಿಂದ ಹೊರತಾಗಿಲ್ಲ. ಇತ್ತೀಚೆಗೆ ರಿಷಾ ಮತ್ತು ಗಿಲ್ಲಿ ನಡುವೆ ಬಾತ್ರೂಮ್ ಮತ್ತು ಬಟ್ಟೆ ಹಾಳು ಮಾಡಿದ್ದಕ್ಕೆ ನಡೆದ ಜಗಳ ವೀಕ್ಷಕರಿಂದ ಬಾರೀ ಚರ್ಚೆಗೀಡಾಗಿತ್ತು.
ಗಿಲ್ಲಿ ಮೇಲೆ ಕೈ ಮಾಡುವ ಮೂಲಕ ಬಿಗ್‌ಬಾಸ್ ರೂಲ್ಸ್ ಬ್ರೇಕ್ ಮಾಡಿದ ರಿಷಾ ಈಗ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ ಈ ಘಟನೆ ದೊಡ್ಮನೆ ವಾರಾತ್ಯದ ಎಪಿಸೋಡ್‌ನಲ್ಲಿ ಅಂದರೆ ಇಂದು ನಿರ್ಣಯವಾಗಲಿದೆ.
ಈ ಮೂಲಕ ಸುದೀಪ್ ಅವರು ಮನೆಯ ಸ್ಪರ್ಧಿಗಳಿಗೆ ರಿಷಾ ಸ್ಪರ್ಧಿಯಾಗಿ ಮುಂದುವರೆಯುವುದರ ನಿರ್ಧಾರವನ್ನು ತೆಗೆದುಕೊಳ್ಳಲು ಬಿಟ್ಟಿದ್ದಾರೆ. ಎಲ್ಲೊ ಕಾರ್ಡ್ ಕೊಟ್ಟು ವಾರ್ನಿಗ್ ಕೊಡುವುದಾ? ಅಥವಾ ರೆಡ್ ಕಾರ್ಡ್ ಕೊಟ್ಟು ಮನೆಯಿಂದ ಹೊರಹಾಕುವುದಾ? ಎಂದು ಕೇಳಿ ಇದಕ್ಕೆ ಮನೆಯವರ ಒಮ್ಮತವನ್ನು ಕೇಳಿದ್ದಾರೆ.
ಇದರನುಸಾರ ಯಾವ ನಿರ್ಧಾರಕ್ಕೆ ಜಾಸ್ತಿ ವೋಟ್ ಬರುತ್ತದೆಯೋ ಅದರ ಆಧಾರದ ಮೇಲೆ ರಿಷಾ ಅವರು ಬಿಗ್‌ಬಾಸ್‌ನಲ್ಲಿ ಮುಂದುವರೆಯುತ್ತಾರೋ ಇಲ್ಲವೋ ಎಂಬುವುದು ಇಂದಿನ(ಭಾನುವಾರ) ಎಪಿಸೋಡ್‌ನಲ್ಲಿ ತಿಳಿಯುಯಲಿದೆ.