ಸಂಧುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಅನ್ನು ಕರಗಿಸುತ್ತದೆ ಈ ಹಣ್ಣು !ಕಿಡ್ನಿ ಸ್ಟೋನ್ ಕೂಡಾ ನೋವಿಲ್ಲದಂತೆ ಹೊರ ಹೋಗುವುದು

Written ByRanjitha R KUpdated byRanjitha R K
Published: Jun 10, 2025, 06:19 PM IST|Updated: Jun 10, 2025, 06:19 PM IST

ದೇಹದಲ್ಲಿ ಹೆಚ್ಚಿದ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು  ಈ ಹಣ್ಣು ಸಹಾಯ ಮಾಡುತ್ತದೆ. ಜೊತೆಗೆ ಕಿಡ್ನಿ ಸ್ಟೋನ್ ಕರಗಿಸುವಲ್ಲಿಯೂ ಇದು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ.   
 

Home Remedy for Uric acid and Kidney Stone 1/8

ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಿಸಬೇಕಾದರೆ ಮೊದಲು ನಾವು ಸೇವಿಸುವ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು.ಇದರ ಜೊತೆಗೆ   ಕೆಲವು ಮನೆಮದ್ದುಗಳ ಸಹಾಯದಿಂದ ಕೂಡಾ ಯೂರಿಕ್ ಆಸಿಡ್ ಸಮಸ್ಯೆಯನ್ನು ನಿಯಂತ್ರಿಸಬಹುದು. 

Home Remedy for Uric acid and Kidney Stone 2/8

ಸಂಧುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಅನ್ನು ಕರಗಿಸಿ, ಕಿಡ್ನಿ ಸ್ಟೋನ್ ಅನ್ನು ಕೂಡಾ ಪುಡಿ ಮಾಡುವ ಸಾಮರ್ಥ್ಯವಿರುವ ಹಣ್ಣು ಒಂದಿದೆ. 

Home Remedy for Uric acid and Kidney Stone 3/8

ಹೌದು, ನಾವಿಲ್ಲಿ ಹೇಳುತ್ತಿರುವುದು ನಿಂಬೆ ಹಣ್ಣಿನ ಬಗ್ಗೆ. ನಿಂಬೆ ಸೇವನೆಯಿಂದ ಯೂರಿಕ್ ಆಸಿಡ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಆದರೆ ಅದನ್ನು ಸೇವಿಸುವ ಸರಿಯಾದ ವಿಧಾನ ಗೊತ್ತಿರಬೇಕು. 

Home Remedy for Uric acid and Kidney Stone 4/8

ಬೆಳ್ಳುಳ್ಳಿ ಸೇವನೆಯು ಕೂಡಾ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.ಇದು ದೇಹದ pH ಮಟ್ಟವನ್ನು ಸಮತೋಲನಗೊಳಿಸುತ್ತದೆ ಮತ್ತು ದೇಹದಿಂದ ಹೆಚ್ಚುವರಿ ಯೂರಿಕ್ ಆಸಿಡ್ ಅನ್ನು ತೆಗೆದುಹಾಕುತ್ತದೆ.   

Home Remedy for Uric acid and Kidney Stone 5/8

ನಿಂಬೆ ರಸವು ವಿಟಮಿನ್-ಸಿ ಯಲ್ಲಿ ಸಮೃದ್ಧವಾಗಿದೆ. ಇದು ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಕೀಲು ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ . ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. 

Home Remedy for Uric acid and Kidney Stone 6/8

ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು, ನಿಂಬೆ ನೀರನ್ನು ಕುಡಿಯಬಹುದು. ಇದಕ್ಕಾಗಿ, ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ನಿಂಬೆಹಣ್ಣಿನ ರಸವನ್ನು ಹಿಂಡಿ ಕುಡಿಯಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ಸೇವಿಸುವುದರಿಂದ  ಯೂರಿಕ್ ಆಸಿಡ್ ಬೇಗನೆ ಕರಗುವುದು. 

Home Remedy for Uric acid and Kidney Stone 7/8

ಇನ್ನು ನಿಂಬೆ ಚಹಾವನ್ನು ಕೂಡಾ ಸೇವಿಸಬಹುದು. ಒಂದು ಕಪ್ ನೀರು ಮತ್ತು ಚಹಾ ಎಲೆಗಳನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಇದರ ನಂತರ, ಅದನ್ನು ಶೋಧಿಸಿ ಅದಕ್ಕೆ ಅರ್ಧ ಟೀ ಚಮಚ ನಿಂಬೆ ರಸವನ್ನು  ಬೆರೆಸಿ ಸೇವಿಸಿ.  ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಯೂರಿಕ್ ಆಸಿಡ್ ನಿಯಂತ್ರಿಸಲು ಸಹಾಯವಾಗುತ್ತದೆ.

Home Remedy for Uric acid and Kidney Stone 8/8

ಸೂಚನೆ  : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.