Blood Sugar Control Vegetables :ಕೆಲವು ತರಕಾರಿಗಳನ್ನು ಮಧುಮೇಹಿಗಳು ತಿನ್ನಬಾರದು ಎಂದು ಹೇಳಲಾಗುತ್ತದೆ. ಆದರೆ ಕೆಲವು ತರಕಾರಿಗಳೇ ಮಧುಮೇಹಕ್ಕೆ ಮದ್ದು ಎನ್ನುವುದು ಕೂಡಾ ಸತ್ಯ.
1/6ಪಾಲಕ್ ಪನೀರ್: ಪಾಲಕ್ ಕಬ್ಬಿಣ ಮತ್ತು ನಾರಿನಂಶವನ್ನು ಹೊಂದಿರುವ ತರಕಾರಿ. ಪನೀರ್ ದೇಹಕ್ಕೆ ಅಗತ್ಯವಾದ ಪ್ರೋಟೀನ್ ನೀಡುವ ಪದಾರ್ಥ. ಇವೆರಡನ್ನು ಒಟ್ಟಿಗೆ ಹಾಕಿ ಅಂದರೆ ಪಾಲಕ್ ಪನ್ನೀರ್ ಮಾಡಿ ಸೇವಿಸಿದರೆ ಮಧುಮೇಹ ತಡೆಯಲು ರಾಮಬಾಣ.
2/6ಸೋರೆಕಾಯಿ : ಸೋರೆಕಾಯಿ ತಿನ್ನಲು ಅಷ್ಟೇನೂ ರುಚಿ ಇಲ್ಲ ನಿಜ. ಆದರೆ ಇದು ಆರೋಗ್ಯ ಸಂಜೀವಿನಿ. ಅದರಲ್ಲಿಯೂ ಬ್ಲಡ್ ಶುಗರ್ ಇರುವವರಿಗೆ ಅಮೃತ ಇದ್ದ ಹಾಗೆ. ಇದು ಸಾಕಷ್ಟು ನೀರು ಮತ್ತು ನಾರಿನಾಂಶವನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.
3/6ಬೆಂಡೆಕಾಯಿ : ಫೈಬರ್ ಸಮೃದ್ಧವಾಗಿರುವ ಮತ್ತೊಂದು ತರಕಾರಿ ಎಂದರೆ ಬೆಂಡೆಕಾಯಿ. ಇದರಲ್ಲಿರುವ ಪೋಷಕಾಂಶಗಳು ಬ್ಲಡ್ ಶುಗರ್ ನಿಯಂತ್ರಿಸಲು ಸಹಾಯ ಮಾಡುತ್ತವೆ.
4/6ಮೆಂತ್ಯೆ ಸೊಪ್ಪು : ಮೆಂತ್ಯೆ ಸೊಪ್ಪು ಮಧುಮೇಹ ನಿಯಂತ್ರಿಸಲು ಸಹಾಯ ಮಾಡುವ ತರಕಾರಿ. ಇದು ಸ್ವಲ್ಪ ಕಹಿ ರುಚಿಯನ್ನು ಹೊಂದಿರುತ್ತದೆ. ಹಾಗಾಗಿ ಆ ಕಹಿ ಹೋಗಲಿ ಎನ್ನುವ ಕಾರಣಕ್ಕೆ ಇದರ ಪಲ್ಯ ಮಾಡುವಾಗ ಒಂದು ಆಲೂಗಡ್ಡೆ ಬಳಸಬಹುದು.
5/6ಕ್ಯಾರೆಟ್ ಮತ್ತು ಬಟಾಣಿ :ವಿಟಮಿನ್ ಗಳಿಂದ ಸಮೃದ್ಧವಾಗಿರುವ ಕ್ಯಾರೆಟ್ ಮತ್ತು ಬಟಾಣಿ ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ. ಇವೆರಡನ್ನು ಇತರ ತರಕಾರಿಗಳೊಂದಿಗೆ ಬೆರೆಸಿಯೂ ಸೇವಿಸಬಹುದು.
6/6ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ದೃಢೀಕರಿಸುವುದಿಲ್ಲ.