ಈ ಎಲೆಯನ್ನು ನೀರಿನಲ್ಲಿ ನೆನೆಸಿ ತಿಂದರೆ ಸಾಕು ಬಿಳಿ ಕೂದಲು ಬೇರು ಸಹಿತ ಕಪ್ಪಾಗಿ.. ಒಂದೇ ತಿಂಗಳಲ್ಲಿ ಸೊಂಟ ದಾಟಿ ಬೆಳೆಯುತ್ತೆ!

Betel Leaves benefits: ಬಿಳಿ ಕೂದಲು ಕಪ್ಪಾಗಿಸಲು ಕೆಲವು ಉತ್ತಮ ನೈಸರ್ಗಿಕ ಪರಿಹಾರಗಳಿವೆ. ಇದರಿಂದ ಕೂದಲು ಕಪ್ಪಾಗುವುದರ ಜೊತೆಗೆ ಉದ್ದ ದಪ್ಪವಾಗಿ ಬೆಳೆಯುತ್ತವೆ. 

1 /7

ವೀಳ್ಯದೆಲೆ ಊಟದ ಬಳಿಕ ತಿಂದರೆ ಜೀರ್ಣಕ್ರಿಯೆಗೆ ಮಾತ್ರವಲ್ಲದೆ ವಿವಿಧ ರೋಗಗಳನ್ನು ತಡೆಯಲು ಸಹಕಾರಿಯಾಗಿದೆ. ವಿಟಮಿನ್ ಎ, ಸಿ, ಬಿ1, ಬಿ2, ಪೊಟ್ಯಾಸಿಯಮ್, ಥಯಾಮಿನ್, ನಿಯಾಸಿನ್ ಮತ್ತು ರೈಬೋಫ್ಲಾವಿನ್ ನಂತಹ ಪೋಷಕಾಂಶಗಳು ವೀಳ್ಯದ ಎಲೆಗಳಲ್ಲಿ ಕಂಡುಬರುತ್ತವೆ.

2 /7

ವೀಳ್ಯದೆಲೆ ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತವೆ. ವೀಳ್ಯದ ಎಲೆಗಳನ್ನು ಬಳಸುವುದರಿಂದ ನೆತ್ತಿಯ ತುರಿಕೆ ಪರಿಹರಿಸಬಹುದು. ಬಿಳಿ ಕೂದಲನ್ನು ಕಪ್ಪಾಗಿಸಲು ಸಹ ವೀಳ್ಯದೆಲೆ ಪ್ರಯೋಜನಕಾರಿಯಾಗಿದೆ. 

3 /7

ಒಂದು ಪಾತ್ರೆಯಲ್ಲಿ 15-20 ವೀಳ್ಯದೆಲೆಗಳನ್ನು ಕುದಿಸಿ. ನೀರನ್ನು ತಣ್ಣಗಾಗಿಸಿ. ಈ ನೀರಿನಿಂದ ಕೂದಲನ್ನು ತೊಳೆಯಬಹುದು. ಆಂಟಿಮೈಕ್ರೊಬಿಯಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ವೀಳ್ಯದೆಲೆ ಹೊಂದಿವೆ. ತಲೆಹೊಟ್ಟು ಸಮಸ್ಯೆಯನ್ನು ಪರಿಹರಿಸುತ್ತದೆ.

4 /7

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 5-6 ವೀಳ್ಯದೆಲೆಗಳನ್ನು ಅಗಿದು ತಿನ್ನಬಹುದು. 10-15 ವೀಳ್ಯದೆಲೆಗಳನ್ನು ನೀರಿನಲ್ಲಿ ನೆನೆಸಿಟ್ಟು, ಕುದಿಸಿ ಕುಡಿಯಬಹುದು. ಇದು ಕೂದಲು ಉದುರುವಿಕೆಯನ್ನು ನಿಯಂತ್ರಿಸುವುದಲ್ಲದೆ ಬಿಳಿ ಕೂದಲನ್ನು ಸಹ ತಡೆಯುತ್ತದೆ.

5 /7

ಬಿಳಿ ಕೂದಲನ್ನು ಕಪ್ಪಾಗಿಸಲು ವೀಳ್ಯದೆಲೆ ಮತ್ತು ತುಪ್ಪದ ಹೇರ್ ಪ್ಯಾಕ್ ಬಳಸಬಹುದು. 15-20 ವೀಳ್ಯದೆಲೆಗಳನ್ನು ಪೇಸ್ಟ್ ಮಾಡಿ. ಅದಕ್ಕೆ 1 ಚಮಚ ತುಪ್ಪ ಸೇರಿಸಿ. ಕೂದಲು ತೊಳೆಯುವ ಕನಿಷ್ಠ 1 ಗಂಟೆ ಮೊದಲು ಹಚ್ಚಿ ನಂತರ ಕೂದಲನ್ನು ತೊಳೆಯಿರಿ.

6 /7

10 ರಿಂದ 15 ವೀಳ್ಯದೆಲೆಗಳನ್ನು ತೆಂಗಿನಕಾಯಿ ಅಥವಾ ಸಾಸಿವೆ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕುದಿಸಬೇಕು. ವೀಳ್ಯದ ಎಲೆಗಳು ಕಪ್ಪು ಬಣ್ಣಕ್ಕೆ ತಿರುಗಿದಾಗ ಗ್ಯಾಸ್‌ ಆಫ್‌ ಮಾಡಿ. ಈ ಎಣ್ಣೆಯನ್ನು ಶೋಧಿಸಿ ಕೂದಲಿನ ಉದ್ದಕ್ಕೂ ಚೆನ್ನಾಗಿ ಹಚ್ಚಿ.  ರಾತ್ರಿಯಿಡೀ ಬಿಟ್ಟು ಬೆಳಗೆದ್ದು ತಲೆಸ್ನಾನ ಮಾಡಿ. 

7 /7

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.