Amrutdhare serial: ಅಮೃತಧಾರೆ ಧಾರಾವಾಹಿಯಲ್ಲೀಗ ರೋಚಕ ಟ್ವಿಸ್ಟ್. ಭೂಮಿಗೆ ಕೊನೆಗೂ ತನ್ನ ಇನ್ನೊಂದು ಮಗು ಸತ್ತಿಲ್ಲ ಎಂಬ ಸತ್ಯ ಗೊತ್ತಾಗೇಬಿಡ್ತು.
1/5Amrutdhare serial: ಅಮೃತಧಾರೆ ಧಾರಾವಾಹಿಯಲ್ಲೀಗ ರೋಚಕ ಟ್ವಿಸ್ಟ್ ನಾವು ನೋಡಬಹುದು. ಅಪ್ಪುವಿನ ಮೇಲೆ ಜೆಡಿ ಕೆಟ್ಟಕಣ್ಣು ಬಿದ್ದಿದ್ದೆ ತಡ ಭೂಮಿಗೆ ನಡುಕ ಶುರುವಾಗಿದೆ. ಅಪ್ಪುವನ್ನು ಸೇಫ್ ಆಗಿ ಜೆಡಿಯಿಂದ ಕರೆದುಕೊಂಡು ಬಂದರೂ ಆಕೆಗೆ ಮುಂದೆನಾದರೂ ಮತ್ತೆ ತಮ್ಮ ಕುಟುಂಬದ ಮೇಲೆ ಏನಾದರೂ ಮಾಡುತ್ತಾನೆ ಎಂಬ ಭಯದಿಂದ ಮನೆ ಬಿಟ್ಟು ಬೇರೆ ದೇಶಕ್ಕೆ ಹೋಗಲು ನಿರ್ಧರಿಸಿದ್ದಾಳೆ ಭೂಮಿ.
2/5ಇತ್ತ ಅಪ್ಪು ಕೂಡ ಇದನ್ನೇ ತಲೆಯಲ್ಲಿ ಇಟ್ಟುಕೊಂಡು "ಹೌದಮ್ಮ ಮನೆ ಬಿಟ್ಟು ಹೋಗೋಣ ಎಂದು ಹೇಳುತ್ತಾನೆ. ಮಗನ ಮಾತನ್ನು ಕೇಳಿದ್ದೇ ತಡ ಮನೆ ಬಿಟ್ಟು ಹೋಗುವ ನಿರ್ಧಾರವನ್ನು ಭೂಮಿ ತೆಗೆದುಕೊಳ್ಳುತ್ತಾನೆ.
3/5ಈ ವಿಷಯ ಗೌತಮ್ ಗೊತ್ತಾಗಿದ್ದೇ ತಡ ಮನೆ ಬಿಟ್ಟು ಹೋಗುತ್ತಿರುವುದು ನಿಜಾನಾ ಎಂದು ಭೂಮಿಯನ್ನು ಕೇಳುತ್ತಾನೆ. ಸತ್ಯ ತಿಳಿದ ಗೌತಮ್‌ಗೆ ಭರಸಿಡಿಲೇ ಬಡಿದಂತಾಗುತ್ತದೆ. ಅಷ್ಟೇ ಅಲ್ಲ ಈ ವಿಷಯ ತಿಳಿದ ನಂತರ ಗೌತಮ್ ಮಗಳು ಮಿಂಚುಗೂ ಕೂಡ ಭೂಮಿ ಮನೆ ಬಿಟ್ಟು ಹೋಗುತ್ತಿರುವುದು ಇಷ್ಟವಾಗುವುದಿಲ್ಲ. ಆಕೆಯೂ ಕೂಡ ಅವರು ಹೋಗುವುದನ್ನು ತಡೆಯುವಂತೆ ದೇವರಲ್ಲಿ ಬೇಡಿಕೊಳ್ಳುತ್ತಾಳೆ.
4/5ಇತ್ತ ಮಲ್ಲಿಗೂ ಈ ವಿಚಾರ ತಿಳಿದು ಭೂಮಿಯ ನಿರ್ಧಾರವನ್ನು ಹೇಗಾದರೂ ಮಾಡಿ ನಿಲ್ಲಿಸಬೇಕೆಂದು ಆನಂದ್ ಬಳಿ ಹೋಗುತ್ತಾಳೆ. ಆನಂದ್ ಭೂಮಿ ವಿಚಾರ ಹೇಳುತ್ತಲೇ ಮತ್ತೊಂದು ಶಾಕಿಂಗ್ ವಿಚಾರ ಗೊತ್ತಾಗುತ್ತದೆ. ಅದೇನೆಂದರೆ ಭೂಮಿಯ ಎರಡನೇ ಮಗಳು ಬದುಕಿರುವುದು.
5/5ಗೌತಮ್ ಮಾವನಿಂದ ಈ ವಿಚಾರ ಗೊತ್ತಾಗಿದ್ದೇ ತಡ ಮಲ್ಲಿ ಓಡೋಡಿ ಹೋಗಿ ಭೂಮಿಗೆ ಈ ವಿಚಾರವನ್ನು ಹೇಳುತ್ತಾಳೆ. ಭೂಮಿಗೆ ತನ್ನ ಮಗು ಸತ್ತಿಲ್ಲ, ಬದುಕಿದೆ ಎಂಬುವುದು ಗೊತ್ತಾಗುತ್ತದೆ. ಈಗ ಸತ್ಯ ತಿಳಿದ ಭೂಮಿಕಾ ಮುಂದೆ ಏನು ಮಾಡುತ್ತಾಳೆ ಎಂಬುವುದೇ ಈಗ ಪ್ರೇಕ್ಷಕರಿಗೆ ಮೂಡಿರುವ ಪ್ರಶ್ನೆಯಾಗಿದೆ.