ನಿತ್ಯಾ ತೇಜಸ್‌ ಪ್ರೀತಿಗೆ ಸೇತುವೆಯಾದ ಕರ್ಣ! ಕಿಡ್ನಾಪ್‌ ಹಿಂದಿನ ಕೈವಾಡ ತನ್ನ ಅಪ್ಪನದೇ ಎಂಬ ಸತ್ಯ ಗೊತ್ತಾಗೋ ಸಮಯ ಬಂದೇ ಬಿಡ್ತು?

Published: Oct 31, 2025, 01:19 PM IST|Updated: Oct 31, 2025, 01:19 PM IST

Big Twist in Karna Serial: ಕರ್ಣನ ಜೀವನದಲ್ಲಿ ದೊಡ್ಡ ಟ್ವಿಸ್ಟ್‌, ತೇಜಸ್‌ ಕಿಡ್ನ್ಯಾಪ್‌ ಹಿಂದಿರುವುದು ತನ್ನ ಅಪ್ಪನೇ ಎಂಬ ಸತ್ಯ ಗೊತ್ತಾಗೋ ಸಮಯ ಬಂದೇ ಬಿಡ್ತು.
 

1/5

Big Twist in Karna Serial: ಕರ್ಣ ಧಾರಾವಾಹಿ ದಿನಕ್ಕೊಂದು ಹೊಸ ಟ್ವಿಸ್ಟ್‌ ಪಡೆಯುತ್ತಿದೆ. ನಿತ್ಯಾಳ ಜೀವನವನ್ನು  ಕರ್ಣನ ಜೀವನದಲ್ಲಿ ಈಗ ಹೊಸ ತಿರುವು ಬರಲಿದೆಯೆನ್ನಿಸುತ್ತದೆ. ನಿತ್ಯಾ ಮತ್ತು ತೇಜಸ್‌ ಅವರ ಪ್ರೇಮಕ್ಕೆ ಸೇತುವೆಯಾದ ಕರ್ಣ, ಇಬ್ಬರ ಬದುಕಿನ ಭಾಗವಾಗಿ ಬದಲಾಗಿದ್ದಾನೆ. ಆದರೆ ಈ ಪ್ರೀತಿ ಕಥೆಯ ಹಿಂದೆ ಅಡಗಿರುವ ಸತ್ಯ ಕರ್ಣನ ಬದುಕನ್ನೇ ತಲೆಕೆಳಗಾಗಿಸುವಂತಿದೆ.  

2/5

ಈ ಭಾಗದಲ್ಲಿ ಕರ್ಣನ ತಾಯಿ ಒಂದು ದೊಡ್ಡ ಸತ್ಯವನ್ನು ಬಯಲಿಗೆಳೆಯುತ್ತಾಳೆ. ನಿತ್ಯಾಳನ್ನು ಮದುವೆಯಾಗಬೇಕಿದ್ದ ತೇಜಸ್‌ನ ಕಿಡ್ನಾಪ್‌ ಹಿಂದೆ ಯಾರಿರಬಹುದು ಎಂಬ ಸತ್ಯ ಹೊರಬರುವುದರಲ್ಲಿದೆ.   

3/5

ತೇಜಸ್‌ನ ಅಪಹರಣದ ಹಿಂದೆ ಇರುವುದು ಬೇರೆ ಯಾರೂ ಅಲ್ಲ — ಕರ್ಣನ ಅಪ್ಪ ಎಂಬ ಸುದ್ದಿ ಕರ್ಣನಿಗೆ ತಿಳಿಯುವ ಸಮಯ ಬಂದೇಬಿಡ್ತು! ಕೊನೆಗೂ ಕರ್ಣನ ತಾಯಿ ನಿತ್ಯಾಳ ಮದುವೆ ಮುರಿದುಹೋಗಲು ಯಾರು ಕಾರಣ ಎಂಬ ಸತ್ಯ ಹೊರಬರಲಿದೆ.  

4/5

ಇನ್ನು ಕಿಡ್ನ್ಯಾಪ್‌ ಆದ ತೇಜಸ್‌ ಚಿಕ್ಕಮಗಳೂರಿನಲ್ಲಿ ಇರುವುದು ಕರ್ಣನಿಗೆ ಗೊತ್ತಾಗಿದೆ, ಆತನನ್ನು ಮರಳಿ ಕರೆದುಕೊಂಡು ಬರಲು ಕರ್ಣ ನಿತ್ಯಾಳೊಂದಿಗೆ ಆತನಿರುವಲ್ಲಿಗೆ ಹೊರಟುನಿಂತಿದ್ದಾನೆ.   

5/5

ತಂದೆಯ ಈ ಮಸಲತ್ತು ತಿಳಿದ ನಂತರ ಕರ್ಣ ಏನು ಮಾಡುತ್ತಾನೆ ಎಂಬುವುದೇ ಈಗ ಎಲ್ಲರಲ್ಲೂ ಮೂಡಿರುವ ಪ್ರಶ್ನೆ