Ashwini Gowda: ಬಿಗ್‌ಬಾಸ್ 12ರ ಸ್ಪರ್ಧಿ ನಟಿ ಅಶ್ವಿನಿ ಗೌಡ ಪತಿ ಯಾರು? ಅವರ ಹಿನ್ನೆಲೆ ಏನು? ಮುಂದೆ ಓದಿ..
1/9Ashwini Gowda: ಈಗಿನ ಸಮಯದಲ್ಲಿ ಲವ್, ಮದುವೆ, ಬ್ರೇಕಪ್ ಎಲ್ಲವೂ ಸಮಾನ್ಯವಾಗಿ ಹೋಗಿದೆ. ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರೂ ಜೀವನ ಪೂರ್ತಿ ಜೊತೆಯಲ್ಲಿರುವುದು ಅನುಮಾನ.
2/9ಬಿಗ್‌ಬಾಸ್ 12 ಸ್ಪರ್ಧಿಯಾಗಿರುವ ಅಶ್ವಿನಿ ಗೌಡ, ಹುಟ್ಟಿನಿಂದಲೇ ಅರ್ಗಭ ಶ್ರೀಮಂತೆ, ರಾಜಕೀಯ ಹಿನ್ನೆಲೆ ಹಾಗೂ ನಟನೆಯ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಛಾಪು ಮೂಡಿಸಿದವರು.
3/9ಬಿಗ್‌ಬಾಸ್ 12 ಮನೆಗೆ ಹೋಗುವ ಮುನ್ನ ಅಶ್ವಿನಿ ಗೌಡ, ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಇದರಲ್ಲಿ ಅವರು ತಮ್ಮ ವೈಯಕ್ತಿಕ ಜೀವನದ ಕುರಿತು ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದರು.
4/9ಸಂದರ್ಶನದಲ್ಲಿ ಮಾತನಾಡುತ್ತಾ ಅಶ್ವಿನಿ ಗೌಡ, ತಮ್ಮ ದಾಂಪತ್ಯ ಮುರಿದು ಬೀಳುವುದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದರು. ತಮ್ಮ ಪತಿಯ ಕುರಿತೂ ಕೂಡ ಅವರು ಕೆಲವೊಂದು ಇನ್ಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದರು.
5/9"ನಾನು ನನ್ನ ಪತಿ ಜಗಳವಾಡಿಕೊಂಡು ದೂರವಾಗಿದ್ದು ಅಲ್ಲ, ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾದ್ವಿ, ಇಬ್ಬರು ನಡುವೆ ಜಗಳ ಮನಸ್ಥಾಪ ಇರಲಿಲ್ಲ ಆದ್ರೂ, ನಮ್ಮಿಬ್ಬರ ನಡುವೆ ಹೊಂದಾಣಿಕೆ ಆಗಿಲ್ಲ" ಎಂದಿದ್ದಾರೆ.
6/9"ನಾವಿಬ್ಬರು ಒಬ್ಬರ್ನೊಬ್ಬರು ಪರಸ್ಪರ ಗೌರವಿಸುತ್ತೇವೆ, ನನ್ನ ಮಗನಿಗೂ ಕೂಡ ನನಗಿಂತ ಅವರ ಅಪ್ಪ ಅಂದ್ರೆ ತುಂಬಾ ಇಷ್ಟ, ನನ್ನೊಟ್ಟಿಗೆ ಇರುವುದಕ್ಕಿಂತ ನನ್ನ ಮಗನಿಗೆ ಅವನ ಅಪ್ಪನೊಂದಿಗೆ ಇರುವುದೆಂದರೇನೆ ಇಷ್ಟ".
7/9"ಇಬ್ಬರಿಗೂ ಒಂದಾಣಿಕೆ ಆಗೊಲ್ಲ ಎಂದಾಗ ಮನೆಯಲ್ಲಿ ಪೋಷಕರ ಜೊತೆ ಮಾತನಾಡಿ ಇಬ್ಬರು ದೂರ ಆದ್ವೀ ಆದರೆ, ಇಂದಿಗೂ ಕೂಡ ನನ್ನ ಅತ್ತೆ ಮಾವನ ಜೊತೆ ಇಂದಿಗೂ ತುಂಬಾ ಚೆನ್ನಾಗಿದ್ದೇನೆ" ಎಂದಿದ್ದಾರೆ.
8/9ಅಷ್ಟಕ್ಕೂ ಅಶ್ವಿನಿ ಗೌಡ ತುಂಬಾ ಸಣ್ಣ ವಯಸ್ಸಿನಲ್ಲಿ ಮದುವೆಯಾಗಿದ್ದರಂತೆ. ಆದರೆ, ಮದುವೆ ಎಂಬುದು ತನಗೆ ಎಂದಿಗೂ ನೋವನ್ನುಂಟು ಮಾಡಿಲ್ಲ, ಮದುವೆ ನನಗೆ ಯಾವುದೇ ಕಹಿ ಅನುಭವವನ್ನು ನೀಡಿಲ್ಲ ಎಂದು ಅಶ್ವಿನಿ ಗೌಡ ಹೇಳಿಕೊಂಡಿದ್ದಾರೆ.
9/9ಇಲ್ಲಿಯವರೆಗೂ ಅಶ್ವಿನಿ ಗೌಡ ಅವರ ಪತಿ ಯಾರೆಂಬುದು ಯಾರಿಗೂ ತಿಳಿದಿಲ್ಲ. ಅಧಿಕೃತವಾಗಿ ಅವರು ಕೂಡ ಎಲ್ಲಿಯೂ ಕೂಡ ತಮ್ಮ ಪತಿಯ ಹೆಸರನ್ನೇ ಆಗಲಿ, ಅವರ ಹಿನ್ನೆಲೆ ಕುರಿತಾಗಲೀ ಎಲ್ಲಿಯೂ ಮಾತನಾಡಿಲ್ಲ.