Rakshita Shetty remuneration: ಬಿಗ್ ಬಾಸ್ ಕನ್ನಡ ಸೀಸನ್ ೧೨ರಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ರಕ್ಷಿತಾ ಶೆಟ್ಟಿ ಕಳೆದ ದಿನ ಕಿಚ್ಚನಿಂದಲೇ ರೆಬೆಲ್ ಸ್ಟಾರ್ ಎನಿಸಿಕೊಂಡಿದ್ದಾರೆ.
1/7ಬಿಗ್ ಬಾಸ್ ಕನ್ನಡ ಸೀಸನ್ ೧೨ರಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ರಕ್ಷಿತಾ ಶೆಟ್ಟಿ ಕಳೆದ ದಿನ ಕಿಚ್ಚನಿಂದಲೇ ರೆಬೆಲ್ ಸ್ಟಾರ್ ಎನಿಸಿಕೊಂಡಿದ್ದಾರೆ.
2/7ಬಿಗ್ ಬಾಸ್ ಸೀಸನ್ ಆರಂಭಗೊಂಡ ದಿನಾನೇ ಎಂಟ್ರಿ ಕೊಟ್ಟಿದ್ದರೂ ಸರ್ಪ್ರೈಸ್ ಎಲಿಮಿನೇಶನ್ ಮೂಲಕ ಹೊರಬಂದಿದ್ದರು. ಆದರೆ ಆ ಬಳಿಕ ಜನರು ಆಕೆ ದೊಡ್ಮನೆಗೆ ಮರಳಬೇಕೆಂದು ಪಟ್ಟು ಹಿಡಿದಿದ್ದರು. ಅದರಂತೇ ರಕ್ಷಿತಾ ಒಂದು ವಾರದ ಬಳಿಕ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಆಕೆ ಎಂಟ್ರಿಯಾಗಿದ್ದೇ ಆಗಿದ್ದು ಫುಲ್ ಹೈಫ್ ಕ್ರಿಯೇಟ್ ಆಗಿದೆ.
3/7ರಕ್ಷಿತಾ ಶೆಟ್ಟಿ ತಾಯಿ ಮೂಲ ಮಂಗಳೂರಿನವರು. ರಕ್ಷಿತಾ ಶೆಟ್ಟಿ ಹುಟ್ಟಿದ್ದು ಪಡುಬಿದ್ರೆಯಲ್ಲಿ. ಆದರೆ, ಬೆಳೆದಿದ್ದು, ಓದಿದ್ದೆಲ್ಲಾ ಮುಂಬೈನಲ್ಲಿ. ಮನೆಯಲ್ಲಿ ರಕ್ಷಿತಾ ಶೆಟ್ಟಿ ಮಾತೃಭಾಷೆ ತುಳು ಆದ ಕಾರಣ ಅವರಿಗೆ ಕನ್ನಡ ಸರಿಯಾಗಿ ಬರಲ್ಲ. ಆದ್ರೆ ಕನ್ನಡದ ಬಗ್ಗೆ ಅಪಾರ ಅಭಿಮಾನ ಇರುವ ರಕ್ಷಿತಾ ಕಷ್ಟಪಟ್ಟು, ಇಷ್ಟಪಟ್ಟು ಕನ್ನಡ ಮಾತನಾಡುತ್ತಾರೆ. ಹಾಗೆಯೇ ವಿಡಿಯೋ ಕೂಡ ಮಾಡುತ್ತಾರೆ. ಬರೀ ಕನ್ನಡ ಅಲ್ಲ.. ತುಳು, ಹಿಂದಿ, ಇಂಗ್ಲೀಷ್‌ನಲ್ಲಿಯೂ ವ್ಲಾಗ್ಸ್, ರೀಲ್ಸ್ ಮಾಡುತ್ತಿರುತ್ತಾರೆ.
4/7ಅಂದಹಾಗೆ ರಕ್ಷಿತಾ ಶೆಟ್ಟಿ ವಿವಾ ಕಾಲೇಜಿನಲ್ಲಿ ಬಿಎಎಂಎಂಸಿ (ಬ್ಯಾಚುಲರ್ ಆಫ್ ಆರ್ಟ್ಸ್ ಮಾಸ್ ಮೀಡಿಯಾ ಕಮ್ಯೂನಿಕೇಷನ್) ಓದಿದ್ದಾರೆ. ಡಿಗ್ರಿ ಮುಗಿಸಿರುವ ರಕ್ಷಿತಾ ಶೆಟ್ಟಿಗೆ ಸ್ನಾತಕೋತ್ತರ ಪದವಿ ಪಡೆಯಲು ಇಂಟ್ರೆಸ್ಟ್ ಇಲ್ಲ. ಇನ್ನು ಕೊರೊನಾ ಟೈಮ್‌ನಲ್ಲಿ ಅಜ್ಜಿ ಮನೆ (ಮಂಗಳೂರು)ಗೆ ಬಂದಿದ್ದ ರಕ್ಷಿತಾ ಅಲ್ಲಿ ಸಾಮಾನ್ಯವಾಗಿ ಮಾಡಿದ ಒಂದು ರೀಲ್ ವೈರಲ್ ಆಗಿತ್ತು. ಹೀಗಾಗಿ ಅಲ್ಲಿಂದ ವಿಡಿಯೋ ಮಾಡುತ್ತಾ ಬಂದಿರುವ ಅವರು, ಸದ್ಯ ಫೇಮಸ್ ಆಗಿದ್ದಾರೆ. ಈಗ ಯೂಟ್ಯೂಬ್‌ನಲ್ಲಿ 272K subscribersನ್ನು ಹೊಂದಿದ್ದಾರೆ.
5/7ಯೂಟ್ಯೂಬ್ ವಿಡಿಯೋ ಮಾಡುತ್ತಿದ್ದ ಸಂದರ್ಭದಲ್ಲಿ ಅನೇಕ ಟೀಕೆ, ಟ್ರೋಲ್‌ಗಳಿಗೆ ಸಹ ಗುರಿಯಾಗಿದ್ದರು. ಆದರೆ ಅವೆಲ್ಲವನ್ನೂ ತಲೆಗೆ ಹಾಕಿಕೊಳ್ಳದ ರಕ್ಷಿತಾ, ತಮ್ಮ ಲೈಫ್‌ಸ್ಟೈಲ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದರು.
6/7ಇದೀಗ ಬಿಗ್ ಬಾಸ್ ಮನೆಗೆ ಒಂದು ವಾರದ ನಂತರ ಎಂಟ್ರಿ ಕೊಟ್ಟಿದ್ದರೂ ಸಹ ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್‌ನ್ನು ಹೊಂದಿರೋದು ಇವರೇ. ಘಟಾನುಘಟಿಗಳನ್ನೂ ಮೀರಿಸಿರುವ ರಕ್ಷಿತಾ ಇದೀಗ ಸಂಭಾವನೆ ವಿಚಾರದಲ್ಲೂ ಮುಂದಿದ್ದಾರೆ ಎಂದು ಹೇಳಲಾಗುತ್ತಿದೆ.
7/7ಆದರೆ ಕೆಲವೊಂದು ಮೂಲಗಳ ಪ್ರಕಾರ ಅವರ ಸಂಭಾವನೆ ವಾರಕ್ಕೆ 25 ಸಾವಿರ ಎಂದು ಹೇಳಲಾಗುತ್ತಿದೆಯಾದರೂ ಅದರ ಸ್ಪಷ್ಟತೆ ಇಲ್ಲ. ಇನ್ನು ರಕ್ಷಿತಾ ಅವರ ಯೂಟ್ಯೂಬ್ ಆದಾಯದ ಬಗ್ಗೆ ಮಾತನಾಡೋಣ. ಉದಾಹರಣೆಗೆ, ಒಬ್ಬ ಯೂಟ್ಯೂಬರ್ 3,00,000 ಚಂದಾದಾರರನ್ನು ಹೊಂದಿದ್ದರೆ ಜಾಹೀರಾತುಗಳಿಂದ ಮಾಸಿಕ ರೂ.88840 ರಿಂದ ರೂ. 534417 ವರೆಗೆ ಗಳಿಸಬಹುದು. ಇದರ ಹೊರತಾಗಿ ಕಂಟೆಂಟ್ ಲೈಸನ್ಸಿಂಗ್ ಮತ್ತು ಬ್ರ್ಯಾಂಡ್ ಡೀಲ್‌ಗಳಿಂದ ಒಂದು ವರ್ಷದಲ್ಲಿ $50,000 ಕ್ಕಿಂತ ಹೆಚ್ಚು ಗಳಿಸಬಹುದು. ಹೀಗಿರುವಾಗ ರಕ್ಷಿತಾ ಶೆಟ್ಟಿಯವರು 272K subscribersನ್ನು ಹೊಂದಿದ್ದಾರೆ. ಅವರ ಆದಾಯ ಇದರ ಆಸುಪಾಸಿನಲ್ಲೇ ಇರಬಹುದು ಎಂದು ಅಂದಾಜಿಸಬಹುದಾಗಿದೆ.