Bigg Boss Dhruvanth : ಇಷ್ಟು ದಿನ ಸೈಲೆಂಟ್ ಆಗಿದ್ದ ಧ್ರುವಂತ್ ಇದೀಗ ಮನೆ ಮಂದಿ ಜೊತೆ ಕಿರಿಕ್ ಮಾಡುತ್ತ ಸುದ್ದಿಯಾಗುತ್ತಿದ್ದಾರೆ. ಗಿಲ್ಲಿ ಮತ್ತು ರಕ್ಷಿತಾ ಜೊತೆ ಸದಾ ಒಂದಲ್ಲ ಒಂದು ವಿಚಾರವಾಗಿ ಜಗಳ ಮಾಡುವ ನಟನ ನಿಜವಾದ ಹೆಸರೇ ಬೇರೆ ಇದೆ.. ಅಷ್ಟೇ ಅಲ್ಲ, ಬಹುತೇಕ ಜನರಿಗೆ ಇದು ಗೊತ್ತೆ ಇಲ್ಲ.. ಇನ್ನೊಂದು ಅಚ್ಚರಿ ವಿಚಾರ ಅಂದ್ರೆ ಇವರಿಗೆ ಮದುವೆ ಸಹ ಆಗಿತ್ತು..
1/5ಧ್ರುವಂತ್ ಮುದ್ದುಲಕ್ಷ್ಮೀ, ಮನಸಾರೆ ಸೇರಿದಂತೆ ಹಲವಾರು ಧಾರಾವಾಹಿಗಳ ಮೂಲಕ ಕನ್ನಡಿಗರಿಗೆ ಪರಿಚಯವಾದರು. ಇದೀಗ ಬಿಗ್ ಬಾಸ್ 12ರ ಸ್ಪರ್ಧಿಯಾಗಿ ಗಮನ ಸೆಳೆಯುತ್ತಿದ್ದಾರೆ. ತಮ್ಮ ವಿಭಿನ್ನ ವ್ಯಕ್ತಿತ್ವ ಮತ್ತು ಮಾತಿನ ಶೈಲಿಯ ಮೂಲಕ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
2/5ಹೌದು.. ಕಳೆದ ಬಾರಿ ಗಿಲ್ಲಿ ಮತ್ತು ರಕ್ಷಿತಾ ವಿರುದ್ಧ ಹರಿಹಾಯ್ದು ಧ್ರುವಂತ್ ಸುದ್ದಿಯಾಗಿದ್ದರು. ಅಲ್ಲದೆ, ಕಿಚ್ಚ ಸುದೀಪ್ ಅವರ ಬಗ್ಗೆ ಅಚ್ಚರಿ ಹೇಳಿಕೆ ಮೂಲಕ ವಿರೋಧಕ್ಕೆ ಕಾರಣವಾಗಿದ್ದರು. ವೀಕೆಂಡ್‌ನಲ್ಲಿ ಕಿಚ್ಚ ಕ್ಲಾಸ್ ಬೇರೆ ತಗೋಂಡಿದ್ರು. ಬಹುತೇಕ ಜನರಿಗೆ ಧ್ರುವಂತ ಆಗಿ ಗೊತ್ತಿರುವ ಇವರ ಹೆಸರೇ ಬೇರೆ ಇದೆ..
3/5ಧ್ರುವಂತ್ ನಿಜವಾದ ಹೆಸರು ಚರಿತ್ ಬಾಳಪ್ಪ.. ಇವರು ಕೊಡಗು ಮೂಲದವರು. ಪ್ರಸ್ತುತ ಬಿಗ್ ಬಾಸ್ ಕನ್ನಡ 12ನೇ ಸೀಸನ್ ಸ್ಪರ್ಧಿಯಾಗಿದ್ದಾರೆ. ಶೋ ಪ್ರಾರಂಭದಲ್ಲಿ ಧ್ರುವಂತ್‌ಗೆ ರಾಶಿಕಾ ಮದುವೆ ವಿಚಾರವಾಗಿ ಪ್ರಶ್ನೆ ಮಾಡಿದ್ದರು. ಆಗ ಅವರು ಸಿಂಗಲ್ ಅಂತ ಹೇಳಿಕೊಂಡಿದ್ದರು.
4/5ಅಲ್ಲದೆ, ನಾನು ಸಿಂಗಲ್ ಕಿಂಗ್, ಮೊದಲಿಗೆ ನನಗೂ ಎಲ್ಲಾ ಆಸೆಗಳು ಇದ್ವು ಆದ್ರೆ, ನಾನು ಮೋಸ ಹೋದೆ ಅಂತ ತಮ್ಮ ಲವ್ ಬ್ರೇಕಪ್ ಬಗ್ಗೆ ಹೇಳಿಕೊಂಡಿದ್ದರು. ಆದರೆ, ಇದೇ ಧ್ರುವಂತ್ ಮೇಲೆ ಕಳೆದ ಕೆಲವು ವರ್ಷಗಳ ಹಿಂದೆ ಮಹಿಳೆಯೊಬ್ಬರು ಕಿರುಕುಳದ ಆರೋಪ ಮಾಡಿ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
5/5ಅಷ್ಟೇ ಅಲ್ಲದೆ, ವಿವಾಹಿತನಾಗಿದ್ದರೂ ಸಹ ಕಿರುತೆರೆ ನಟಿಯೊಬ್ಬರ ಮೇಲೆ ದೌರ್ಜನ್ಯವೆಸಗಿದ್ದ ಆರೋಪದ ಮೇಲೆ ಧ್ರುವಂತ್ ಬಂಧನವಾಗಿತ್ತು. ಮಾಹಿತಿ ಪ್ರಕಾರ, ನಟಿ ಮಂಜುಶ್ರಿಯವರನ್ನು ಮದುವೆಯಾಗಿದ್ದು, 2022ರಲ್ಲಿ ಡಿವೋರ್ಸ್ ಪಡೆದಿದ್ದರು ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ಇದೀಗ ಈ ವಿಚಾರಗಳು ಸಖತ್ ಸದ್ದು ಮಾಡುತ್ತಿದ್ದು ಯಾವುದು ನಿಜ.. ಯಾವುದು ಸುಳ್ಳು ಅಂತ ಸ್ವತಃ ನಟ ಸ್ಪಷ್ಟಪಡಿಸಬೇಕಿದೆ..