BBK 11 : ಬಿಗ್‌ಬಾಸ್‌ ಪ್ರಾರಂಭದಲ್ಲೇ ʼನರಕʼಕ್ಕೆ ಹೋದ ನಟ ದರ್ಶನ್‌ ಅಭಿಮಾನಿ ಅನುಷಾ..! ಯಾರು ಈ ಸುಂದರಿ..?

Sun, 29 Sep 2024-8:32 pm,

ಅನುಷಾ ರೈ ಕನ್ನಡ ( Anusha Rai ) ಚಿತ್ರರಂಗದ ಬ್ಯೂಟಿಫುಲ್‌ ನಟಿಯರಲ್ಲಿ ಒಬ್ಬರು. 1999ರ ಮೇ 4ರಂದು ಬೆಂಗಳೂರಿನಲ್ಲಿ ಜನಿಸಿದರು.  

ಅನುಷಾ ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಇಂಜಿನಿರಿಂಗ್ ಮುಗಿಸಿದ್ದಾರೆ.   

2017ರಲ್ಲಿ ತೆರೆಕಂಡ `ಮಹಾನುಭಾವರು' ಚಿತ್ರದಲ್ಲಿ ನಟಿಸುವ ಮೂಲಕ ಅನುಷಾ ರೈ ಕನ್ನಡ ಚಿತ್ರರಂಗ ಪ್ರವೇಶಿಸಿದರು.   

ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ದಮಯಂತಿ, ರೈಡರ್, ಖಡಕ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.  

'ನಾಗಕನ್ನಿಕೆ', 'ರಾಜಕುಮಾರಿ' ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಅನುಷಾ ಚಿರಪರಿಚಿತರಾಗಿದ್ದಾರೆ.  

ʼರಾಜಕುಮಾರಿʼ ಧಾರಾವಾಹಿ ಮೂಲಕ ಅನುಷಾ ಮುನ್ನೆಲೆಗೆ ಬಂದರು.. ಇವರ ಅಭಿಮಾನಿಗಳು ಇವರನ್ನು ಪ್ರೀತಿಯಿಂದ ರಾಜಕುಮಾರಿ ಎಂದೇ ಕರೆಯುತ್ತಿದ್ದರು.  

ಸಧ್ಯ ಅನುಷಾ ರೈ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದಾರೆ.    

ನಟಿ ಅನುಷಾ ರೈ ನಟ ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ.. ಸಧ್ಯ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ (Bigg Boss Kannada Season 11) ಎಂಟ್ರಿಕೊಟ್ಟಿದ್ದು, ನಕರಕ್ಕೆ ಹೋಗಿದ್ದಾರೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link