bigg boss kannada season 12 elimination: ಬಿಗ್ ಬಾಸ್ ಮನೆಯಲ್ಲಿ ದಿನಕ್ಕೊಂದು ಟ್ವಿಸ್ಟ್ ಎದುರಾಗುತ್ತಿದ್ದು, ಇದೇ ವೇಳೆ ಸ್ಪರ್ಧಿಗಳಿಗೆ ಎಲಿಮಿನೇಷನ್ ಶಾಕ್ ಕೂಡ ಕಾದಿದೆ ಎಂದು ಹೇಳಲಾಗುತ್ತಿದೆ..
ಬಿಗ್ ಬಾಸ್ ಮನೆಗೆ ಇತ್ತೀಚೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ನಡೆದಿದೆ.. ಹಳೆಯ ಸೀಸನ್ ಸ್ಪರ್ಧಿಗಳಾದ ಚೈತ್ರಾ ಹಾಗೂ ರಜತ್ ಮನೆ ಪ್ರವೇಶಿಸಿದ್ದಾರೆ.. ಇದರಿಂದ ಬಿಗ್‌ಬಾಸ್ ಕನ್ನಡ ಸೀಸನ್ 12 ರೋಚಕ ತಿರುವು ಪಡೆದುಕೊಂಡಿದೆ.. ಪೈಯರ್ ಬ್ರ್ಯಾಂಡ್ ಎಂದೇ ಪ್ರೇಕ್ಷಕರಿಂದ ಹೆಸರು ಪಡೆದಿದ್ದ ಚೈತ್ರಾ ಜೊತೆ ರಗಡ್ ರಜತ್ ಈ ಸೀಸನ್ ಸ್ಪರ್ಧಿಗಳಿಗೆ ಟಕ್ಕರ್ ನೀಡುತ್ತಿದ್ದಾರೆ..
ಮತ್ತೊಂದೆಡೆ ವೈಲ್ಡ್ ಕಾರ್ಡ್ ಬೆನ್ನಲ್ಲೇ ಬಿಗ್‌ಬಾಸ್ ಮನೆಗೆ ವಿಲನ್ ಎಂಟ್ರಿ ಕೂಡ ಆಗಿದೆ.. ಸದ್ಯ ಈ ವಿಲನ್ ಕೊಡುತ್ತಿರುವ ಟಾಸ್ಕ್‌ನಿಂದ ಸ್ಪರ್ಧಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.. ಮನೆಯ ಸ್ಪರ್ಧಿಗಳಿಗೆ ಸೀಕ್ರೆಟ್ ಟಾಸ್ಕ್ ಕೊಟ್ಟು ಕ್ಯಾಪ್ಟನ್ಸಿ ರೇಸ್‌ಗೆ ಅವಕಾಶ ಮಾಡಿಕೊಟ್ಟು, ಇದಕ್ಕಾಗಿ ಎರಡು ತಂಡಗಳನ್ನು ರಚಿಸಿ, ಸಾಕಷ್ಟು ಸವಾಲಿನ ಟಾಸ್ಕ್ ನೀಡಲಾಗಿತ್ತು.
ಅದರಲ್ಲಿ ರಜತ್ ಟ್ಯಾಟೋ ಹಾಕಿಸಿಕೊಂಡಿದ್ದಾರೆ.. ಕಾವ್ಯಾ ಕೂದಲಿಗೆ ಬಣ್ಣ ಹಚ್ಚಿಕೊಂಡಿದ್ದಾರೆ.. ಮಾಳು ತಲೆ ಬೋಳಿಸಿಕೊಂಡಿದ್ದಾರೆ.. ಎರಡೂ ತಂಡಗಳಿಗೂ ನೀಡುವ ಟಾಸ್ಕ್ ಆಧಾರದ ಮೇಲೆ ವಾರದ ಕ್ಯಾಪ್ಟನ್ ಆಯ್ಕೆಯಾಗಲಿದ್ದಾರೆ..
ಇದೆಲ್ಲವೂ ಒಂದು ಕಡೆಯಾದರೇ ಪ್ರತಿ ವಾರದಂತೆ ಈ ವಾರವೂ ಸ್ಪರ್ಧಿಗಳ ತಲೆ ಮೇಲೆ ಎಲಿಮಿನೇಷನ್ ಕತ್ತಿ ತೂಗುತ್ತಿದೆ.. ಟಾಸ್ಕ್‌ನಲ್ಲಿ ಹಿಂದುಳಿದವರಿಗೆ ಎಲಿಮಿನೇಷನ್ ಹಂತಕ್ಕೆ ಬರಲಿದ್ದು, ಸದ್ಯ ಪ್ರಬಲ ಸ್ಪರ್ಧಿಗಳಿಗೂ ಎಲಿಮಿನೇಷನ್ ಭಯ ಕಾಡುತ್ತಿದೆ ಎಂದರೇ ಅತಿಶಯೋಕ್ತಿಯಲ್ಲ.. ಆದರೆ ಈ ವಾರ ನೋ ಎಲಿಮಿನೇಷನ್ ಎಂದೂ ಸಹ ಸೋಷಿಯಲ್ ಮಿಡಿಯಾದಲ್ಲಿ ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಈ ವಾರ ಎಲಿಮಿನೇಷನ್ ಬದಲು ವೈಲ್ಡ್ ಕಾರ್ಡ್ ಎಂಟ್ರಿಯಿಂದ ಮನೆ ಪ್ರವೇಶಿಸಿರುವ ಚೈತ್ರಾ ಹಾಗೂ ರಜತ್ ಅವರು ಹೊರಬರಬಹುದು ಎನ್ನಲಾಗಿದೆ.. ಈ ಸೀಸನ್ ಸ್ಪರ್ಧಿಗಳಿಗೆ ಭಯ ಹುಟ್ಟಿಸುವ ಸಲುವಾಗಿ ಅವರನ್ನು ಮನೆಗೆ ಕಳುಹಿಸಲಾಗಿತ್ತು ಇಬ್ಬರೂ ಸ್ಪರ್ಧಿಗಳಲ್ಲ ಎಂಬ ಮಾತು ಕೇಳಿ ಬರುತ್ತಿದೆ.. ಹೀಗಾಗಿ ಅವರಿಬ್ಬರು ಈ ವಾರ ಹೊರಬರಬಹುದು ಎನ್ನಲಾಗಿದೆ.. ಏನಾಗುತ್ತೆ ಎನ್ನುವದನ್ನು ಕಾದುನೋಡಬೇಕಿದೆ..