ಫೈನೆಲಿಸ್ಟ್‌ ಆಗ್ತಾರೆ ಅಂದುಕೊಂಡಿದ್ದ ಸ್ಪರ್ಧಿಯೇ ಔಟ್‌! ʻಬಿಗ್‌ಬಾಸ್‌ʼ ವಾರದ ಕೊನೆಯಲ್ಲಿ ಪ್ರೇಕ್ಷಕರಿಗೆ ಸಿಕ್ತು ಶಾಕಿಂಗ್‌ ಟ್ವಿಸ್ಟ್‌

Written ByDeepa A Reddy
Published: Nov 24, 2025, 07:46 AM IST|Updated: Nov 24, 2025, 07:46 AM IST

Bigg Boss Kannada Season 12: ಈ ವಾರ ಬಿಗ್‌ಬಾಸ್‌ ಮನೆಯಿಂದ ಸ್ಟ್ರಾಂಗ್‌ ಕಂಟೆಸ್ಟೆಂಟ್‌ ಔಟ್‌ ಆಗಿದ್ದಾರೆ. 
 

1/7

Bigg Boss Kannada Season 12: ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 12’ನೇ ಸೀಸನ್‌ ಆರಂಭವಾದಾಗಿನಿಂದ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುತ್ತಲೇ ಇದೆ. ಮನೆಯ ಸ್ಪರ್ಧಿಗಳು ಕೂಡ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.   

2/7

ಟಾಸ್ಕ್‌ಗಳ ಜೊತೆ ಜೊತೆಗೆ ಒಂದಿಷ್ಟು ಜಗಳ, ಒಂದಿಷ್ಟು ಪ್ರೀತಿಯ ಜೊತೆಗೆ ಮನೆಯ ಸ್ಪರ್ಧಿಗಳು ಅದ್ಬುತವಾಗಿ ಆಟವಾಡುತ್ತಾ, ಈಗಾಗಲೇ ಎಂಟು ವಾರಗಳು ಕಳೆದಿವೆ.   

3/7

‘ಬಿಗ್‌ ಬಾಸ್‌ ಕನ್ನಡ ಸೀಸನ್‌ 12’ ಎಂಟನೇ ವಾರ ಮುಗಿಸಿ ಒಂಬತ್ತನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಯಾರು ಎಲಿಮಿನೇಟ್‌ ಆಗಬಹುದು ಎನ್ನುವ ಚರ್ಚೆಯ ನಡುವೆ ಶಾಕಿಂಗ್‌ ಸ್ಪರ್ಧಿ ಒಬ್ಬರು ಬಿಗ್‌ ಬಾಸ್‌ ಮನೆಯಿಂದ ಹೊರಬಿದ್ದಿದ್ದಾರೆ.   

4/7

ರಿಷಾ ಗೌಡ 'ಬಿಗ್‌ ಬಾಸ್' ಮನೆಗೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ಬಿಗ್‌ಬಾಸ್‌ನಲ್ಲಿ ಮೂರು ವಾರಗಳ ಪಯಣ ಮುಗಿಸಿ ರಿಷಾ ಮನೆಯಿಂದ ಔಟ್‌ ಆಗಿದ್ದಾರೆ.   

5/7

ಈ ವಾರ ಜಾಹ್ನವಿ, ಧ್ರುವಂತ್‌,ಅಶ್ವಿನಿ ಗೌಡ,ಅಭಿಷೇಕ್‌,ಮಾಳು, ಸ್ಪಂದನಾ ಸೋಮಣ್ಣ, ರಿಷಾ ಗೌಡ,ಸೂರಜ್‌ ಸಿಂಗ್‌, ರಾಶಿಕಾ ಶೆಟ್ಟಿ,  ಅಶ್ವಿನಿ ಗೌಡ, ಈ ಎಲ್ಲಾ ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್‌ ಆಗಿದ್ದರು.   

6/7

ಈ ವಾರ ನಾಮಿನೇಟ್‌ ಆಗಿದ್ದ ಹತ್ತು ಸ್ಪರ್ಧಿಗಳ ಪೈಕಿ ರಿಷಾ ಗೌಡ ಇದೀಒಗ ಮನೆಯಿಂದ ಹೊರಬಂದಿದ್ದಾರೆ. ಎಲ್ಲಾ ಸ್ಪರ್ಧಿಗಳ ಪೈಕಿ ಕಡಿಮೆ ವೋಟ್ಸ್‌ ಪಡೆದ ರಿಷಾ ಮನೆಯಿಂದ ಔಟ್‌ ಆಗಿದ್ದಾರೆ.   

7/7

ಗಿಲ್ಲಿ ಮೇಲೆ ಕೈ ಮಾಡಿಕೊಂಡಿದ್ದ ಕಾರಣ ರಿಷಾ ಅವರ ಮೇಲೆ ಪ್ರೇಕ್ಷಕರಿಗೆ ನಿರಾಸೆ ಉಂಟಾಗಿತ್ತು. ಆದರೂ ಕೂಡ ರಿಷಾ ಕಳೆದ ವಾರ ಬಚಾವ್‌ ಆಗಿದ್ದರು. ಆದರೆ, ಈ ವಾರ ರಿಷಾ ಬಿಗ್‌ಬಾಸ್‌ ಮನೆಯಿಂದ ಹೊರ ಬೀಳುವಂತಾಗಿದೆ.