ಬಿಗ್ ಬಾಸ್ ಶೋ ನಿಜವಾದ ಮಾಲೀಕರು ಇವರೇ ನೋಡಿ.. ಒಂದೇ ಒಂದು ಸೀಸನ್‌ಗೆ ಕೋಟಿ ಕೋಟಿ ಹಣ ಗಳಿಸುವ ಒಡೆಯ!

Published: Sep 08, 2025, 11:20 PM IST|Updated: Sep 08, 2025, 11:20 PM IST

Bigg Boss real owner : ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್. ಕನ್ನಡದ ಬಿಗ್ ಬಾಸ್ ಸೀಸನ್ 12 ಇದೆ ಸೆಪ್ಟೆಂಬರ್‌ ರಿಂದ ಪ್ರಾಂಭವಾಗುತ್ತಿದೆ. 

Bigg Boss real owner1/9

ಬಿಗ್ ಬಾಸ್ ನಿಜವಾದ ಮಾಲೀಕರು

ಬಿಗ್ ಬಾಸ್ ಜನಪ್ರಿಯ ರಿಯಾಲಿಟಿ ಶೋ ಮಾತ್ರವಲ್ಲ ಕೋಟ್ಯಾಂತರ ಆದಾಯ ಸಂಪಾದಿಸುವ ಟಿವಿ ಕಾರ್ಯಕ್ರಮವಾಗಿದೆ. ಬಿಗ್ ಬಾಸ್ ನಿಂದ ಬಂದ ಈ ಆದಾಯ ಯಾರ ಪಾಲಾಗುತ್ತದೆ. ಬಿಗ್ ಬಾಸ್ ಅಸಲಿ ಮಾಲೀಕರು ಯಾರು ಎಂಬ ಮಾಹಿತಿ ಇಲ್ಲಿದೆ. 

Bigg Boss real owner2/9

ಬಿಗ್ ಬಾಸ್ ನಿಜವಾದ ಮಾಲೀಕರು

ಬಿಗ್ ಬಾಸ್ ಭಾರತಕ್ಕೆ ಸೇರಿದ ರಿಯಾಲಿಟಿ ಶೋ ಅಲ್ಲ. ಬಿಗ್ ಬಾಸ್ ನಿಜವಾದ ಹಕ್ಕುಗಳು ನೆದರ್‌ಲ್ಯಾಂಡ್ಸ್‌ನ ಪ್ರಸಿದ್ಧ ಮಾಧ್ಯಮ ಸಂಸ್ಥೆ ಎಂಡೆಮೋಲ್ ಶೈನ್ (Endemol Shine Group) ಗೆ ಸೇರಿದೆ.

Bigg Boss real owner3/9

ಬಿಗ್ ಬಾಸ್ ನಿಜವಾದ ಮಾಲೀಕರು

ಎಂಡೆಮೋಲ್ ಶೈನ್ ಕಂಪನಿ ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಬಿಗ್‌ ಬಾಸ್ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. ಇದು ಆಯಾ ಪ್ರಾಂತ್ಯಕ್ಕೆ ತಕ್ಕಂತೆ ಹೆಸರುಗಳನ್ನು ಇಟ್ಟಿದೆ. ಭಾರತದಲ್ಲಿ ಬಿಗ್ ಬಾಸ್ ಎಂದು ಹೆಸರಿಸಲಾಗಿದೆ.

Bigg Boss real owner4/9

ಬಿಗ್ ಬಾಸ್ ನಿಜವಾದ ಮಾಲೀಕರು

ಬಿಗ್‌ ಬಾಸ್ ಮೂಲವು ನೆದರ್‌ಲ್ಯಾಂಡ್ಸ್‌ನ ಬಿಗ್ ಬ್ರದರ್ ಶೋ ಆಗಿದೆ. ಬಿಗ್ ಬಾಸ್ ಶೋ ಮೊದಲು 2006ರಲ್ಲಿ ಭಾರತದಲ್ಲಿ ಪ್ರಾರಂಭವಾಯಿತು. ನಟ ಅರ್ಷದ್ ವಾರ್ಸಿ ಹೋಸ್ಟ್‌ ಮಾಡಿದ್ದರು. ನಂತರ ಶಿಲ್ಪಾ ಶೆಟ್ಟಿ ಎರಡನೇ ಸೀಸನ್‌ನ ಹೋಸ್ಟ್‌ ಮಾಡಿದ್ದರು. ಮೂರನೇ ಸೀಸನ್‌ನಲ್ಲಿ ಅಮಿತಾಬ್ ಬಚ್ಚನ್ ಹೋಸ್ಟ್‌ ಮಾಡಿದ್ದರು.

Bigg Boss real owner5/9

ಬಿಗ್ ಬಾಸ್ ನಿಜವಾದ ಮಾಲೀಕರು

ನಾಲ್ಕನೇ ಸೀಸನ್‌ನಿಂದ ಸಲ್ಮಾನ್ ಖಾನ್ ಹೋಸ್ಟ್‌ ಮಾಡಲು ಆರಂಭಿಸಿದರು. 2011ರಿಂದ ಅವರು ನಿರಂತರವಾಗಿ ಸಲ್ಮಾನ್ ಖಾನ್ ಬಿಗ್ ಬಾಸ್ ಶೋ ಹೋಸ್ಟ್‌ ಮಾಡುತ್ತಿದ್ದಾರೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಅವರೇ ಎಲ್ಲಾ ಸೀಸನ್‌ಗಳನ್ನು ನಿರೂಪಣೆ ಮಾಡಿದ್ದಾರೆ. 

Bigg Boss real owner6/9

ಬಿಗ್ ಬಾಸ್ ನಿಜವಾದ ಮಾಲೀಕರು

ಬಿಗ್‌ ಬಾಸ್ ನ ಒಂದು ಸೀಸನ್ ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತದೆ ಎನ್ನುವುದು ಖಚಿತ. ಆದರೆ ಆದಾಯ ಇಷ್ಟೇ ಎನ್ನುವುದಕ್ಕೆ ನಿಖರವಾದ ಅಂಕಿ ಅಂಶ ಲಭ್ಯವಿಲ್ಲ. ಜಾಹೀರಾತು ಸ್ಲಾಟ್‌ಗಳ ಮಾರಾಟದಿಂದ ಕೋಟಿ ಕೋಟಿ ಹಣ ಬಿಗ್‌ ಬಾಸ್‌ ಗಳಿಸುತ್ತದೆ.  

Bigg Boss real owner7/9

ಬಿಗ್ ಬಾಸ್ ನಿಜವಾದ ಮಾಲೀಕರು

ಶೋನ ಪ್ರಸಾರ ಹಕ್ಕುಗಳನ್ನು ಬೇರೆ ದೇಶಗಳಲ್ಲಿ ಮಾರಾಟ ಮಾಡುವ ಮೂಲಕವು ಹಣ ಸಂಪಾದಿಸಲಾಗುತ್ತದೆ. ಇದರೊಂದಿಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ ಪ್ರಸಾರ ಹಕ್ಕು, ಪ್ರಾಯೋಜಕತ್ವ, ಬ್ರ್ಯಾಂಡ್ ಸಹಭಾಗಿತ್ವ, ಆನ್‌ಲೈನ್ ಮತದಾನ ವ್ಯವಸ್ಥೆ ಆದಾಯದ ಮೂಲಗಳಾಗಿವೆ.

Bigg Boss real owner8/9

ಬಿಗ್ ಬಾಸ್ ನಿಜವಾದ ಮಾಲೀಕರು

ಬಿಗ್ ಬಾಸ್ ಕ್ಲಿಪ್‌ಗಳು, ರೀಲ್‌ಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಆಗುತ್ತವೆ. ಒಂದು ಸೀಸನ್ ಮುಗಿಯುವವರೆಗೂ ಪ್ರತಿ ವಾರದ ಎಪಿಸೋಡ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೋಟಿ ಕೋಟಿ ವೀಕ್ಷಣೆ ಪಡೆಯುತ್ತವೆ.

Bigg Boss real owner9/9

ಬಿಗ್ ಬಾಸ್ ನಿಜವಾದ ಮಾಲೀಕರು

ಸುದೀಪ್, ಸಲ್ಮಾನ್‌ ಖಾನ್‌, ನಾಗಾರ್ಜು ಬಿಗ್‌ ಬಾಸ್‌ ಶೋಗೆ ಮುಖವಾಗಿದ್ದರೂ ಬಿಗ್ ಬಾಸ್‌ನ ನಿಜವಾದ ಮಾಲೀಕರು ನೆದರ್‌ಲ್ಯಾಂಡ್ಸ್‌ನ ಎಂಡೆಮೋಲ್ ಶೈನ್ ಮೀಡಿಯಾ ಗ್ರೂಪ್ ಆಗಿದೆ.