ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಮತ್ತು ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಅವರು ಯುಕೆಯಲ್ಲಿ ಹೃದಯಾಘಾತದಿಂದ 53ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆಂದು ವರದಿಯಾಗಿದೆ.
ಬಾಲಿವುಡ್‌ನ ಖ್ಯಾತ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಹಾಗೂ ಉದ್ಯಮಿ ಸಂಜಯ್ ಕಪೂರ್ ನಿಧನರಾಗಿದ್ದಾರೆಂದು ವರದಿಯಾಗಿದೆ. ಈ ಸುದ್ದಿ ಹೊರಬಿದ್ದ ನಂತರ ಬಾಲಿವುಡ್‌ನ ನಟ-ನಟಿಯರು ಶಾಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಬಗ್ಗೆ ಕರಿಷ್ಮಾ ಕಪೂರ್ ಅವರಿಂದ ಯಾವುದೇ ರೀತಿ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ
ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಮತ್ತು ಉದ್ಯಮಿ ಸಂಜಯ್ ಕಪೂರ್ ಸಾವಿನ ಸುದ್ದಿ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ವರದಿಗಳ ಪ್ರಕಾರ, ಪೋಲೋ ಆಡುವಾಗ ಅವರು ನಿಧನರಾಗಿದ್ದಾರೆ ಎಂದು ಹೇಳಲಾಗಿದೆ. ಆಟವಾಡುತ್ತಿದ್ದಾಗ ಅವರಿಗೆ ಹಠಾತ್ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ ಅಂತಾ ವರದಿಯಾಗಿದೆ.
ತಮ್ಮ ಸಾವಿಗೂ ಕೆಲ ಗಂಟೆಗಳ ಮೊದಲು ಸಂಜಯ್ ಕಪೂರ್ ಅವರು ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದರು. ʼಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ದುರಂತದ ಸುದ್ದಿ ಕೇಳಿ ನನಗೆ ಆಘಾತವಾಯಿತು. ದುರಂತದಲ್ಲಿ ಮಡಿದವರಿಗೆ ನಾನು ಸಂತಾಪ ಸಲ್ಲಿಸುತ್ತೇನೆ. ಅವರ ಕುಟುಂಬಸ್ಥರಿಗೆ ಈ ಕಷ್ಟದ ಸಮಯದಲ್ಲಿ ದೇವರು ಶಕ್ತಿ ನೀಡಲಿʼ ಎಂದು ಸಂಜಯ್ ಟ್ವೀಟ್ ಮಾಡಿದ್ದರು. ಈ ಟ್ವಿಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಅವರು ಕೊನೆಯುಸಿರತೆಳೆದಿದ್ದಾರೆ. ಸಂಜಯ್ ನಿಧನದಿಂದ ಬಾಲಿವುಡ್ ಮತ್ತು ಉದ್ಯಮ ಕ್ಷೇತ್ರದಲ್ಲಿ ಶೋಕದ ಅಲೆ ಉಂಟಾಗಿದೆ. ಸಂಜಯ್ ಕಪೂರ್ ತಮ್ಮ 3ನೇ ಪತ್ನಿ ಪ್ರಿಯಾ ಸಚ್‌ದೇವರನ್ನು ಅಗಲಿದ್ದಾರೆ. Terrible news of the tragic Air India crash in Ahmedabad. My thoughts and prayers are with all the families affected. May they find strength in this difficult hour. ? #planecrash — Sunjay Kapur (@sunjaykapur) June 12, 2025
ನಟಿ ಕರಿಷ್ಮಾ ಕಪೂರ್ 2003ರಲ್ಲಿ ದೆಹಲಿಯ ಉದ್ಯಮಿ ಸಂಜಯ್ ಕಪೂರ್‌ರನ್ನು ವಿವಾಹವಾಗಿದ್ದರು. ಈ ಜೋಡಿ ಅದ್ಧೂರಿಯಾಗಿಯೇ ಮದುವೆಯಾಗಿತ್ತು. ಕರಿಷ್ಮಾ ಮತ್ತು ಅಭಿಷೇಕ್ ಬಚ್ಚನ್ ನಿಶ್ಚಿತಾರ್ಥ ಮುರಿದುಬಿದ್ದ ನಂತರ ಈ ಸಂಬಂಧ ಶುರುವಾಗಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಮದುವೆಯಾದ ಕೆಲವು ವರ್ಷಗಳ ನಂತರ ಇಬ್ಬರ ನಡುವಿನ ಜಗಳ ಶುರುವಾಗಿತ್ತು. ಈ ದಂಪತಿಗೆಮಗಳು ಸಮೈರಾ ಮತ್ತು ಮಗ ಕಿಯಾನ್ ಇದ್ದಾರೆ. ಸುಮಾರು 10 ವರ್ಷಗಳ ಈ ಜೋಡಿಯ ದಾಂಪತ್ಯ ಜೀವನವು 2016ರಲ್ಲಿ ವಿಚ್ಛೇದನದ ಮೂಲಕ ಅಂತ್ಯವಾಯಿತು. ನಂತರ ಸಂಜಯ್ ಅವರು ಪ್ರಿಯಾ ಸಚ್‌ದೇವ್‌ರನ್ನು ಪ್ರೀತಿಸಿ ಮದುವೆಯಾದರು. ಈ ದಂಪತಿಗೆ ಅಜಾರಿಯಾಸ್ ಎಂಬ ಮಗನಿದ್ದಾನೆ. ಇದಕ್ಕೂ ಮೊದಲು ಸಂಜಯ್ 1996ರಲ್ಲಿ ನಂದಿತಾ ಮಹತಾನಿಯನ್ನು ಮದುವೆಯಾಗಿದ್ದರು. 2000ರಲ್ಲಿ ಈ ಜೋಡಿ ಡಿವೋರ್ಸ್ ಮೂಲಕ ದೂರವಾಗಿತ್ತು.
ವರದಿಗಳ ಪ್ರಕಾರ ಸಂಜಯ್ ಕಪೂರ್ ಇಂಗ್ಲೆಂಡ್‌ನ ಗಾರ್ಡ್ಸ್ ಪೋಲೋ ಕ್ಲಬ್‌ನಲ್ಲಿ ಪೋಲೋ ಆಡುತ್ತಿದ್ದಾಗ ನಿಧನರಾಗಿದ್ದಾರೆ. ಆಟವಾಡುತ್ತಿದ್ದಾಗ ಸಂಜಯ್ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದರಂತೆ. ಕೂಡಲೇ ಅವರನ್ನ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಅದಾಗಲೇ ಅವರು ಮೃತಪಟ್ಟಿದ್ದಾರೆಂದು ಘೋಷಿಸಿದರು. ಕರಿಷ್ಮಾ ಕಪೂರ್ ಬಾಲಿವುಡ್‌ನ ನಟಿಯಾಗಿ ಗುರುತಿಸಿಕೊಂಡಿದ್ದರೆ, ಸಂಜಯ್ ಕಪೂರ್ ಪ್ರಸಿದ್ಧ ಉದ್ಯಮಿಯಾಗಿ ಹೆಸರು ಮಾಡಿದ್ದಾರೆ.
ಸೋನಾ ಕಾಮ್‌ಸ್ಟಾರ್ ಲಿಮಿಟೆಡ್‌ನ ಅಧ್ಯಕ್ಷರಾಗಿರುವ ಸಂಜಯ್ ಕಪೂರ್ ಇತ್ತೀಚೆಗಷ್ಟೇ ಭಾರತೀಯ ಕೈಗಾರಿಕಾ ಒಕ್ಕೂಟ(CII)ದ ಉತ್ತರ ಪ್ರದೇಶದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರಾಖಂಡ ಮತ್ತು ಚಂಡೀಗಢ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅವರು ಹಲವಾರು ಯೋಜನೆಗಳನ್ನು ರೂಪಿಸಿದ್ದರು.