Actress on Marrige : ಬಾಲಿವುಡ್ ಸೇರಿದಂತೆ ಭಾರತೀಯ ಸಿನಿರಂಗದಲ್ಲಿ ಮದುವೆ, ಡಿವೋರ್ಸ್, ಡೇಟಿಂಗ್ ತುಂಬಾ ಕಾಮನ್ ಆಗಿದೆ. ಅನೇಕ ಜೋಡಿಗಳು ಮದುವೆಯಾಗುತ್ತಾರೆ, ಇದರ ನಡುವೆ ಅನೇಕ ಜೋಡಿಗಳು ಬೇರ್ಪಡುತ್ತವೆ. ಇನ್ನೂ ಕೆಲವು ಜೋಡಿಗಳು ಸುಖ ಜೀವನ ನಡೆಸುತ್ತಿದ್ದಾರೆ.. ಈ ಪೈಕಿ ಈ 47 ರ ಹರೆಯದ ನಟಿ ಇನ್ನೂ ಸಿಂಗಲ್ ಆಗಿದ್ದು.. ಇದೀಗ ಮದುವೆ ಬಗ್ಗೆ ಮಾತನಾಡಿದ್ದಾರೆ..
1/7ನಟಿ ದಿವ್ಯಾ ದತ್ತಾ.. ಅನೇಕ ಬಾಲಿವುಡ್ ತಾರೆಯರು ಬಹಳ ಸಂಭ್ರಮದಿಂದ ಮದುವೆಯಾಗುತ್ತಿದ್ದರೆ, ಈ ಚೆಲುವೆ ಮಾತ್ರ ಇಂದಿಗೂ ಸ್ವಾತಂತ್ರ್ಯ ಮತ್ತು ಒಂಟಿತನದ ಹಾದಿಯನ್ನು ಆರಿಸಿಕೊಂಡಿದ್ದಾರೆ.
2/7ಇದೀಗ ಅವರು ಮದುವೆ ಕುರಿತ ತಮ್ಮ ಆಲೋಚನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 'ಹಿಂದಿ ರಶ್' ಗೆ ನೀಡಿದ ಸಂದರ್ಶನದಲ್ಲಿ ದಿವ್ಯಾ, ಒಳ್ಳೆಯ ಸಂಗಾತಿ ಸಿಕ್ಕರೆ ಮದುವೆಯಾಗುತ್ತೇನೆ ಎಂದಿದ್ದಾರೆ ದಿವ್ಯಾ.
3/7ಅಲ್ಲದೆ, ಮದುವೆ ಇಲ್ಲದಿದ್ದರೂ ನನ್ನ ಜೀವನ ಸುಂದರವಾಗಿ ಸಾಗುತ್ತದೆ. ಡಿವೋರ್ಸ್ ಪಡೆದು ನಕರ ಅನುಭವಿಸುವುದಕ್ಕಿಂತ ಒಂಟಿಯಾಗಿ ಉಳಿದು ಸುಂದರ ಜೀವನ ಕಟ್ಟಿಕೊಳ್ಳುವುದು ಉತ್ತಮ ಅಂತ.. ನಟಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
4/7ದಿವ್ಯಾ ಅವರು ಮದುವೆಯಾಗಲು ಬಯಸುವುದಿಲ್ಲವಂತೆ.. ಆದರೆ ತಮ್ಮ ಜೊತೆ ಜೀವನದುದ್ದಕ್ಕೂ ಪ್ರಯಾಣಿಸಬಹುದಾದ ಸಂಗಾತಿಯನ್ನು ಬಯಸುತ್ತಿರುವುದಾಗಿ ತಿಳಿಸಿದ್ದಾರೆ. ಇದು ನಡೆಯದಿದ್ದರೂ, ತಾವು ಒಂಟಿಯಾಗಿ ಸಂತೋಷವಾಗಿದ್ದೇನೆ ಅಂತ ಹೇಳಿಕೊಂಡಿದ್ದಾರೆ.
5/7ಇನ್ನು ದಿವ್ಯಾ ಅವರ ಸಿನಿಮಾಗಳ ಬಗ್ಗೆ ಮಾತನಾಡುವುದಾದರೆ, ಅವರು ಕೊನೆಯದಾಗಿ 'ಛಾವಾ' ಎಂಬ ಐತಿಹಾಸಿಕ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್ ಖನ್ನಾ ಜೊತೆ ಛಾವಾದಲ್ಲಿ ಕೆಲಸ ಮಾಡಿದ್ದರು.
6/7ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ ಛಾವಾ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಕಂಡಿತು. ಈ ಚಿತ್ರವು ವಿಶ್ವಾದ್ಯಂತ 807.88 ಕೋಟಿ ರೂ.ಗಳನ್ನು ಗಳಿಸಿತು. ಈ ಚಿತ್ರವು ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.
7/7ಪ್ರಸ್ತುತ ದಿವ್ಯಾ 'ನಾಸ್ತಿಕ್' ಎಂಬ ಚಿತ್ರದಲ್ಲಿ ಅರ್ಜುನ್ ರಾಂಪಾಲ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಶೈಲೇಶ್ ವರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಇಹಾನಾ ಧಿಲ್ಲೋನ್ ಮತ್ತು ಹರ್ಷಾಲಿ ಮಲ್ಹೋತ್ರಾ ಕೂಡ ನಟಿಸಿದ್ದಾರೆ.