ಈ ಒಂದು ತರಕಾರಿ ಸಾಕು ಮಧುಮೇಹಿಗಳ ಶುಗರ್ ನಾರ್ಮಲ್ ಮಾಡಲು ! ತಿನ್ನುವ ವಿಧಾನ ಮಾತ್ರ ಹೀಗೆಯೇ ಇರಬೇಕು
ಔಷಧಿಗಳ ಮೂಲಕ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯ. ಆದರೂ ಔಷಧಿಗಳಿಲ್ಲದೆ ಆಹಾರಕ್ರಮವನ್ನು ಬದಲಾಯಿಸುವ ಮೂಲಕವೂ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಮಧುಮೇಹ ಇರುವ ರೋಗಿಗಳು ಸೋರೆಕಾಯಿ ಸೇವಿಸುತ್ತಾ ಬಂದರೆ ರಕ್ತದಲ್ಲಿನ ಸಕ್ಕರೆ ಕಡಿಮೆಯಾಗುತ್ತದೆ. ಸೋರೆಕಾಯಿ ಬ್ಲಡ್ ಶುಗರ್ ಹೆಚ್ಚಾಗದಂತೆ ತಡೆಯುತ್ತದೆ ಎನ್ನುವುದು ಅಧ್ಯಯನದಿಂದಲೂ ಸಾಬೀತಾಗಿದೆ.
ಸೋರೆಕಾಯಿಯನ್ನು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿ 92 ಪ್ರತಿಶತದಷ್ಟು ನೀರು ಮತ್ತು 8 ಪ್ರತಿಶತ ಫೈಬರ್ ಅಡಗಿದೆ. ಇದರಲ್ಲಿರುವ ಸಕ್ಕರೆ ಮತ್ತು ಗ್ಲೂಕೋಸ್ ಅಂಶ ತುಂಬಾ ಕಡಿಮೆಯಾಗಿರುವುದರಿಂದ ಇದನ್ನು ಮಧುಮೇಹಿಗಳಿಗೆ ಉತ್ತಮವೆಂದು ಪರಿಗಣಿಸಲಾಗಿದೆ.
ಇನ್ಸುಲಿನ್ ಹಾರ್ಮೋನ್ ನಿಯಮಿತವಾಗಿ ಸ್ರವಿಸದಿರುವುದು ಅಥವಾ ಇನ್ಸುಲಿನ್ ಸರಿಯಾಗಿ ಕೆಲಸ ಮಾಡದಿರುವುದು ಮಧುಮೇಹಕ್ಕೆ ಕಾರಣವಾಗಿದೆ.ಹೀಗಿರುವಾಗ ಸೋರೆಕಾಯಿ ಇನ್ಸುಲಿನ್ ಕೊರತೆಯನ್ನು ನೀಗಿಸುತ್ತದೆ.
ಸೋರೆಕಾಯಿಯನ್ನು ಬೇಯಿಸಿ ತಿನ್ನುವುದಕ್ಕಿಂತ ಅದರ ಜ್ಯೂಸ್ ಮಾಡಿ ಕುಡಿಯುವುದು ಉತ್ತಮ ಆಯ್ಕೆ, ಸೋರೆಕಾಯಿ ಜ್ಯೂಸ್ ಕುಡಿಯುವ ಮೂಲಕ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. (ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)