ಕೊಲೆಸ್ಟ್ರಾಲ್ ಕರಗಿಸಲು ಇರುವ ಸುಲಭ, ಅಗ್ಗದ ಮತ್ತು ನೈಸರ್ಗಿಕ ಪರಿಹಾರವೆಂದರೆ ಈ ತರಕಾರಿ.
1/8ಹೆಚ್ಚಿನ ಕೊಲೆಸ್ಟ್ರಾಲ್ ಹೃದಯಾಘಾತ, ಪಾರ್ಶ್ವವಾಯು ಮತ್ತು ರಕ್ತದೊತ್ತಡದಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಕೊಲೆಸ್ಟ್ರಾಲ್ ಕರಗಿಸಲು ಇರುವ ಸುಲಭ, ಅಗ್ಗದ ಮತ್ತು ನೈಸರ್ಗಿಕ ಪರಿಹಾರವೆಂದರೆ ಈ ತರಕಾರಿ.
2/8ಹೌದು ಸೋರೆಕಾಯಿ ಕಂಡರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಸೋರೆಕಾಯಿಯಲ್ಲಿ ಸಂಜೀವಿನಿ ಅಂಶ ಇದೆ ಎಂದರೆ ತಪ್ಪಲ್ಲ.
3/8ಇದು ಕರಗುವ ಫೈಬರ್‌ನಲ್ಲಿ ಸಮೃದ್ಧವಾಗಿದೆ. ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಲು ಸೋರೆಕಾಯಿ ಸಹಾಯ ಮಾಡುತ್ತದೆ. ಇದು ಕರುಳಿನಲ್ಲಿ ಕೊಲೆಸ್ಟ್ರಾಲ್ ಹೀರಿಕೊಳ್ಳುವುದನ್ನು ತಡೆಯುತ್ತದೆ.
4/8ಸೋರೆಕಾಯಿ ಕೊಬ್ಬಿನ ಅಂಶವನ್ನು ಹೊಂದಿರುವುದಿಲ್ಲ. ಇದನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ತೂಕವನ್ನು ನಿಯಂತ್ರಣದಲ್ಲಿರುತ್ತದೆ. ತೂಕ ಹೆಚ್ಚಾಗಲು ಕಾರಣವಾಗುವ ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಿಸುತ್ತದೆ.
5/8ಇದರಲ್ಲಿರುವ ಪೊಟ್ಯಾಸಿಯಮ್ ಹೆಚ್ಚುತ್ತಿರುವ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ವಿಟಮಿನ್ ಸಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ರಕ್ತನಾಳಗಳ ಗೋಡೆಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
6/8ಸೋರೆಕಾಯಿ ದೇಹದಿಂದ ವಿಷವನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ಇದು ಯಕೃತ್ತು ಮತ್ತು ಹೃದಯ ಎರಡರ ಆರೋಗ್ಯವನ್ನೂ ಕಾಪಾಡುತ್ತದೆ. ಆರೋಗ್ಯಕರ ಯಕೃತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸುತ್ತದೆ.
7/8ತಜ್ಞರ ಪ್ರಕಾರ, ದಿನಕ್ಕೆ 100 ರಿಂದ 200 ಗ್ರಾಂ ಬೇಯಿಸಿದ ಸೋರೆಕಾಯಿಯನ್ನು ತಿಂದರೆ ಸಾಕು. ಪಲ್ಯ, ಸೂಪ್ ಅಥವಾ ಜ್ಯೂಸ್ ಮೂಲಕ ಇದನ್ನು ಸೇವಿಸಬಹುದು. ನೆನಪಿರಲಿ ಇದನ್ನು ಯಾವುದೇ ಕಾರಣಕ್ಕೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು.
8/8ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.