ಭಾರತದ ಪರ T20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್ಸ್‌ಗಳು: ಇವರೇ ಟಾಪ್‌ 5 ಆಟಗಾರರು

Written ByPuttaraj K Alur
Published: Sep 07, 2025, 11:51 AM IST|Updated: Sep 07, 2025, 11:51 AM IST

Asia Cup 2025: ಬಹುನಿರೀಕ್ಷಿತ ಏಷ್ಯಾಕಪ್ T20 ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಯುಎಇ ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಸೆಪ್ಟೆಂಬರ್‌ 10ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ಟೀಂ ಇಂಡಿಯಾ ಯುಎಇ ತಂಡವನ್ನ ಎದುರಿಸಲಿದೆ. ಸೂರ್ಯಕುಮಾರ್‌ ನಾಯಕತ್ವದ ಭಾರತ ತಂಡವು ಈಗಾಗಲೇ ಏಷ್ಯಾಕಪ್‌ ಟೂರ್ನಿಗೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ಕೆಲವು ಬೌಲರ್‌ಗಳು ಹೊಸ ದಾಖಲೆಗಳನ್ನ ಸೃಷ್ಟಿಸಲಿದ್ದಾರೆ. ಭಾರತದ T20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಟಾಪ್‌ ಬೌಲರ್‌ಗಳು ಯಾರು? ಅನ್ನೋದರ ಮಾಹಿತಿ ಇಲ್ಲಿದೆ ನೋಡಿ... 

1/5

ಭಾರತದ ಪರ T20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್ಸ್‌ಗಳ ಪೈಕಿ ಸ್ಟಾರ್ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮೊದಲ ಸ್ಥಾನದಲ್ಲಿದ್ದಾರೆ. 63 ಪಂದ್ಯಗಳನ್ನ ಆಡಿರುವ ಅರ್ಷದಿಪ್‌ 18.30ರ ಸರಾಸರಿಯೊಂದಿಗೆ 8.29 ಎಕಾನಮಿಯಲ್ಲಿ 99 ವಿಕೆಟ್‌ ಪಡೆದುಕೊಂಡಿದ್ದಾರೆ.

2/5

ಇನ್ನು 2ನೇ ಸ್ಥಾನದಲ್ಲಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಇದ್ದಾರೆ. ಇವರು 80 ಪಂದ್ಯಗಳ ಪೈಕಿ 79 ಇನ್ನಿಂಗ್ಸ್‌ ಆಡಿದ್ದು, 25.09ರ ಸರಾಸರಿಯೊಂದಿಗೆ 8.19 ಎಕಾನಮಿಯಲ್ಲಿ ಒಟ್ಟು 96 ವಿಕೆಟ್‌ಗಳನ್ನ ಕಬಳಿಸಿದ್ದಾರೆ.

3/5

3ನೇ ಸ್ಥಾನದಲ್ಲಿ ಟೀಂ ಇಂಡಿಯಾದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಇದ್ದಾರೆ. 114 ಪಂದ್ಯಗಳ ಪೈಕಿ 102 ಇನ್ನಿಂಗ್ಸ್‌ ಆಡಿರುವ ಹಾರ್ದಿಕ್‌ 26.43ರ ಸರಾಸರಿಯೊಂದಿಗೆ 8.20 ಎಕಾನಮಿಯಲ್ಲಿ 94 ವಿಕೆಟ್‌ಗಳನ್ನ ಪಡೆದುಕೊಂಡಿದ್ದಾರೆ. ‌

4/5

4ನೇ ಸ್ಥಾನದಲ್ಲಿ ಸ್ವಿಂಗ್ ಮಾಸ್ಟರ್ ಖ್ಯಾತಿಯ ಭುವನೇಶ್ವರ್‌ ಕುಮಾರ್‌ ಇದ್ದಾರೆ. 87 ಪಂದ್ಯಗಳ ಪೈಕಿ 86 ಇನ್ನಿಂಗ್ಸ್‌ ಆಡಿರುವ ಭುವನೇಶ್ವರ್‌, 23.10ರ ಸರಾಸರಿಯೊಂದಿಗೆ 6.96 ಎಕಾನಮಿಯಲ್ಲಿ 90 ವಿಕೆಟ್‌ಗಳನ್ನ ಗಳಿಸಿದ್ದಾರೆ.

5/5

ಇನ್ನೂ ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್‌ ಬುಮ್ರಾ 5ನೇ ಸ್ಥಾನದಲ್ಲಿದ್ದಾರೆ. ಬುಮ್ರಾ 70 ಪಂದ್ಯಗಳ ಪೈಕಿ 69 ಇನ್ನಿಂಗ್ಸ್‌ ಆಡಿದ್ದು, 17.74ರ ಸರಾಸರಿಯೊಂದಿಗೆ 6.27 ಎಕಾನಮಿಯಲ್ಲಿ 89 ವಿಕೆಟ್‌ಗಳನ್ನ ಕಬಳಿಸಿದ್ದಾರೆ.