Budh Gochar 2025 Effects : ಗ್ರಹಗಳ ರಾಜಕುಮಾರ ಬುಧ ಗೋಚಾರದಿಂದ ಯಾವ 5 ರಾಶಿಯವರಿಗೆ ಶುಭ ಫಲ ಸಿಗಲಿದೆ ತಿಳಿಯೋಣ.
1/7ಬುಧ ಸಂಚಾರದಿಂದ ಕೆಲವು ರಾಶಿಗೆ ಸೇರಿದ ಜನರು ಅದೃಷ್ಟ ಪಡೆಯಲಿದ್ದಾರೆ. ಇದು ಕೆಲವು ರಾಶಿಗಳಿಗೆ ರಾಜಯೋಗ ತರುತ್ತದೆ. ಮನೆ, ವಾಹನ ಖರೀದಿ ಯೋಗ ಬರಲಿದೆ.
2/7ವೃಶ್ಚಿಕ ರಾಶಿ: ವೃತ್ತಿ ಮತ್ತು ವ್ಯವಹಾರದಲ್ಲಿ ಸಾಕಷ್ಟು ಲಾಭ ಗಳಿಸುವಿರಿ. ಕೆಲಸಗಳಿಗೆ ಸಂಬಂಧಿಸಿದಂತೆ ಬಹಳಷ್ಟು ವೃದ್ದಿಯನ್ನು ಹೊಂದುವಿರಿ. ಮನೆ ಮತ್ತು ವಾಹನವನ್ನು ಖರೀದಿಸುವ ಯೋಗವಿದೆ.
3/7ಮೀನ ರಾಶಿ: ಆದಾಯದ ಮೂಲಗಳು ಸ್ಥಿರವಾಗಿರುತ್ತವೆ. ಪ್ರತಿ ಹೆಜ್ಜೆಯಲ್ಲಿಯೂ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ವ್ಯವಹಾರದಲ್ಲಿ ಹೊಸ ಬದಲಾವಣೆಗಳನ್ನು ಕಾಣುವಿರಿ. ಹಣ ಉಳಿತಾಯ ಸಾಧ್ಯವಾಗುತ್ತದೆ.
4/7ತುಲಾ ರಾಶಿ: ಬ್ಯಾಂಕ್ ಬ್ಯಾಲೆನ್ಸ್ ಬಹಳಷ್ಟು ಹೆಚ್ಚಾಗಲಿದೆ. ಕೆಲಸದಲ್ಲಿ ಬಡ್ತಿ ದೊರಕಬಹುದು. ವ್ಯಾಪಾರ ಚಟುವಟಿಕೆಗಳಿಂದ ಲಾಭದಲ್ಲಿ ಹೆಚ್ಚಳವಾಗಬಹುದು. ಉತ್ತಮ ಅವಕಾಶಗಳು ಸಿಗುತ್ತವೆ. ಧನ ಸಂಪತ್ತಿನಲ್ಲಿ ಬಹಳಷ್ಟು ವೃದ್ದಿಯಾಗುವ ಸಾಧ್ಯತೆ ಇದೆ.
5/7ಮಕರ ರಾಶಿ: ಕುಟುಂಬ ಜೀವನವು ತೃಪ್ತಿಕರವಾಗಿರುತ್ತದೆ. ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ವೃತ್ತಿಜೀವನದಲ್ಲಿ ಪ್ರಗತಿಯ ಸಾಧ್ಯತೆಯಿದೆ. ಹೊಸ ಕೆಲಸದಲ್ಲಿ ಯಶಸ್ಸನ್ನು ಕಾಣುವಿರಿ. ಹಣಕಾಸಿನ ವಿಚಾರದಲ್ಲಿ ಪ್ರಗತಿ ಇರಲಿದೆ.
6/7ಕುಂಭ ರಾಶಿ: ಸಹೋದರ ಸಹೋದರಿಯರಿಂದ ಬೆಂಬಲ ಸಿಗುತ್ತದೆ. ವೃತ್ತಿಜೀವನದಲ್ಲಿ ಪ್ರಗತಿ ಇರುತ್ತದೆ. ವಿಶೇಷವಾಗಿ ನೀವು ಉನ್ನತ ಶಿಕ್ಷಣ ಅಥವಾ ವಿದೇಶದಲ್ಲಿ ಅಧ್ಯಯನ ಮಾಡಲು ಯೋಜಿಸುತ್ತಿದ್ದರೆ ಯಶಸ್ಸನ್ನು ಸಾಧಿಸುವಿರಿ.
7/7ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. Z Kannada News ಇದನ್ನು ಖಚಿತಪಡಿಸುವುದಿಲ್ಲ.