ಬುಧಾದಿತ್ಯ ಯೋಗದಿಂದ ಈ ನಾಲ್ಕು ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಆಕಸ್ಮಿಕ ಧನಲಾಭ!!

Budhaditya Yoga 2025: ಬುಧ ಮತ್ತು ಸೂರ್ಯ ಮೇಷ ರಾಶಿಯಲ್ಲಿ ಸಂಚಾರ ಪ್ರಾರಂಭಿಸಿದಾಗ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತದೆ. ಈ ರಾಜಯೋಗವು 5 ರಾಶಿಯವರ ಜನರ ಕಷ್ಟಗಳನ್ನು ನಿವಾರಿಸುತ್ತದೆ. 

Budhaditya Yoga 2025: ನವಗ್ರಹಗಳಲ್ಲಿ ಸೂರ್ಯನನ್ನು ಗ್ರಹಗಳ ರಾಜನೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಬುಧವನ್ನು ಗ್ರಹಗಳ ರಾಜಕುಮಾರನೆಂದು ಕರೆಯಲಾಗುತ್ತದೆ. ಬುಧ ಮತ್ತು ಸೂರ್ಯ ಒಂದೇ ರಾಶಿಯಲ್ಲಿದ್ದಾಗ ಪ್ರಬಲವಾದ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ಒಬ್ಬರ ಜಾತಕದಲ್ಲಿ ಬುಧ ಗ್ರಹ ಸರಿಯಾದ ಸ್ಥಾನದಲ್ಲಿದ್ದರೆ ಆರ್ಥಿಕ ಸಮಸ್ಯೆಗಳು ಅವರಿಂದ ದೂರವಾಗುತ್ತವೆ. ಅಂತವರು ಕೆಲಸ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಬಹುದು. ಜ್ಯೋತಿಷ್ಯದಲ್ಲಿ ಬುಧನಂತೆಯೇ ಸೂರ್ಯನನ್ನು ಸಹ ಶುಭ ಗ್ರಹವೆಂದು ಪರಿಗಣಿಸಲಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿಯ ಜಾತಕದಲ್ಲಿ ಸೂರ್ಯನು ಸರಿಯಾದ ಸ್ಥಾನದಲ್ಲಿದ್ದರೆ ಸಂಪತ್ತು ಮತ್ತು ಅಧಿಕಾರ ಅವರಿಗೆ ದೊರೆಯಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /6

ಮೇ 7ರಂದು ಬುಧ ಗ್ರಹವು ಮೇಷ ರಾಶಿಗೆ ಪ್ರವೇಶಿಸುತ್ತದೆ. ಪ್ರಸ್ತುತ ಸೂರ್ಯನು ಮೇಷ ರಾಶಿಯಲ್ಲಿ ಸಾಗುತ್ತಿದ್ದಾನೆ. ಬುಧ ಮತ್ತು ಸೂರ್ಯ ಮೇಷ ರಾಶಿಯಲ್ಲಿ ಸಂಚಾರ ಪ್ರಾರಂಭಿಸಿದಾಗ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತದೆ. ಈ ರಾಜಯೋಗವು 5 ರಾಶಿಯವರ ಜನರ ಕಷ್ಟಗಳನ್ನು ನಿವಾರಿಸುತ್ತದೆ. ಈ ಬುಧಾದಿತ್ಯ ಯೋಗದಿಂದ ಯಾವ ರಾಶಿಯವರು ಅದೃಷ್ಟಶಾಲಿಯಾಗಲಿದ್ದಾರೆಂದು ತಿಳಿಯಿರಿ.

2 /6

ಕರ್ಕಾಟಕ ರಾಶಿಯ ಹತ್ತನೇ ಮನೆಯಲ್ಲಿ ಬುಧಾದಿತ್ಯ ರಾಜಯೋಗವು ರೂಪುಗೊಳ್ಳಲಿದೆ. ಆದ್ದರಿಂದ ಈ ರಾಶಿಯ ಜನರು ಸಮಾಜದಲ್ಲಿ ಅಪಾರ ಗೌರವ ಮತ್ತು ಖ್ಯಾತಿ ಗಳಿಸುತ್ತಾರೆ. ಈ ಯೋಗವು ಕರ್ಕಾಟಕ ರಾಶಿಯವರಿಗೆ ಆರ್ಥಿಕ ತೊಂದರೆಗಳಿಂದ ತಡೆಯುತ್ತದೆ. ನಿಮ್ಮ ಮಾನಸಿಕ ತೊಂದರೆಗಳು ನಿವಾರಣೆಯಾಗಲಿವೆ. ಸಾಲದ ಸಮಸ್ಯೆ ಬಗೆಹರಿಯುತ್ತದೆ ಮತ್ತು ಜೀವನದಲ್ಲಿ ಶಾಂತಿ ಮರಳುತ್ತದೆ. ದೀರ್ಘಕಾಲದ ಆಸೆಗಳು ಈಡೇರಲಿವೆ. ನೀವು ಉದ್ಯೋದಲ್ಲಿ ಬಡ್ತಿ ಪಡೆಯಬಹುದು. ಈ ಅವಧಿಯಲ್ಲಿ ನೀವು ಸಂತೋಷ ಮತ್ತು ಶಾಂತಿಯಿಂದ ಜೀವನ ನಡೆಸಲು ಸಾಧ್ಯವಾಗಲಿದೆ.

3 /6

ಈ ರಾಜಯೋಗವು ಸಿಂಹ ರಾಶಿಯ ಒಂಬತ್ತನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಆದ್ದರಿಂದ ಈ ರಾಶಿಯ ಜನರು ಕೆಲಸದಲ್ಲಿ ಉತ್ತಮ ಸಾಧನೆ ಮಾಡಬಹುದು. ನಿಮ್ಮ ಜೀವನದಲ್ಲಿನ ಅನೇಕ ಕಷ್ಟಗಳು ಮಾಯವಾಗಲಿವೆ. ಅದೃಷ್ಟದ ಸಹಾಯದಿಂದ ನೀವು ಆರ್ಥಿಕವಾಗಿ ಪ್ರಗತಿ ಕಾಣಲಿದ್ದೀರಿ. ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸು ಕಾಣುತ್ತೀರಿ. ನಿಮ್ಮ ಮಕ್ಕಳ ಮೂಲಕ ಕೆಲವು ಒಳ್ಳೆಯ ಸುದ್ದಿಗಳು ಸಿಗಲಿವೆ. ವ್ಯವಹಾರದಲ್ಲಿ ನೀವು ಅನಿರೀಕ್ಷಿತ ಲಾಭ ಗಳಿಸಬಹುದು.

4 /6

ತುಲಾ ರಾಶಿಯವರ ಏಳನೇ ಮನೆಯಲ್ಲಿ ರಾಜಯೋಗವು ರೂಪುಗೊಳ್ಳುತ್ತದೆ. ಈ ಅವಧಿಯಲ್ಲಿ ತುಲಾ ರಾಶಿಯವರು ಸಂತೋಷದ ದಾಂಪತ್ಯ ಜೀವನ ನಡೆಸಲಿದ್ದಾರೆ. ನಿಮ್ಮ ಸಂಗಾತಿಯೊಂದಿಗಿನ ಸಮಸ್ಯೆಗಳು ಬಗೆಹರಿಯುತ್ತವೆ. ಕಳೆದುಹೋದ ಪೂರ್ವಜರ ಆಸ್ತಿಯನ್ನ ಮರಳಿ ಪಡೆಯಬಹುದು. ನಿಮ್ಮ ಸಾಲದ ಸಮಸ್ಯೆಗಳು ಬಗೆಹರಿಯಲಿವೆ. ಈ ರಾಶಿಯ ಜನರು ಜೀವನದಲ್ಲಿ ಅನೇಕ ಸಾಧನೆ ಮಾಡಲಿದ್ದಾರೆ. ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಸಾಧನೆ ಮಾಡಲು ಅವಕಾಶ ಸಿಗಲಿದೆ. ಈ ರಾಶಿಯ ಜನರು ವೃತ್ತಿಪರ ಕ್ಷೇತ್ರದಲ್ಲಿ ಬೆಳೆಯಲು ಹೊಸ ಅವಕಾಶ ಪಡೆಯಲಿದ್ದಾರೆ.

5 /6

ಧನು ರಾಶಿಯ ಐದನೇ ಮನೆಯಲ್ಲಿ ಬುಧಾದಿತ್ಯ ರಾಜಯೋಗವು ರೂಪುಗೊಳ್ಳಲಿದೆ. ನೀವು ರಿಯಲ್‌ ಎಸ್ಟೇಟ್, ಶಿಕ್ಷಣ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಭಾರೀ ಲಾಭ ಗಳಿಸುತ್ತೀರಿ. ಒಳ್ಳೆಯ ಹೆಸರು ಮತ್ತು ಖ್ಯಾತಿ ಗಳಿಸಲು ಸಾಧ್ಯವಾಗಲಿದೆ. ನೀವು ಜೀವನದಲ್ಲಿ ಸಂತೋಷ ಮತ್ತು ಶಾಂತಿ ಕಂಡುಕೊಳ್ಳುತ್ತೀರಿ. ಶತ್ರುಗಳು ಮಿತ್ರರಾಗುವ ಸಾಧ್ಯತೆ ಹೆಚ್ಚಿರಲಿದೆ. ದಾಂಪತ್ಯ ಜೀವನದಲ್ಲಿ ತಿಳುವಳಿಕೆ ಹೆಚ್ಚಾಗಲಿದೆ. ಮದುವೆಯಾಗಲು ಬಯಸುವವರಿಗೆ ಸೂಕ್ತ ವಧು-ವರ ಸಿಗಲಿದ್ದಾರೆ.

6 /6

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)