Fenugreek for Diabetes: ಮಜ್ಜಿಗೆಯಲ್ಲಿ ಮೆಂತ್ಯೆಯನ್ನು ಬೆರೆಸಿ ಸೇವಿಸುವುದರಿಂದ ಯಾವುದೇ ಔಷಧಿ ಇಲ್ಲದೆ ಮಧುಮೇಹವನ್ನು ನಿಯಂತ್ರಿಸಬಹುದು. ಹೇಗೆ? ತಿಳಿಯಲು ಮುಂದೆ ಓದಿ...
Fenugreek for Diabetes: ಅನೇಕ ಜನರು ಇತ್ತೀಚೆಗೆ ಶುಗರ್ ಅನ್ನು ನೈಸರ್ಗಿಕವಾಗಿ ಕಂಟ್ರೋಲ್‌ನಲ್ಲಿಡಲು ಬಯಸುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರೂ ಟಷ್ಟೇ ಔಷಧಿ ಸೇವಿಸಿದ ನಂತರವೂ ಕೂಡ ಹಲವರಿಗೆ ಶುಗರ್ ಕಂಟ್ರೋಲ್ ಮಾಡುವುದು ತುಂಬಾ ಕಷ್ಟ.
ಮಜ್ಜಿಗೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ನಮ್ಮೆಲ್ಲರಿಗೂ ಗೊತ್ತಿದೆ, ಅದೇ ರೀತಿ ಮೆಂತ್ಯೆ ಕೂಡ ನಮ್ಮ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು. ಈ ಎರಡು ಪದಾರ್ಥಗಳನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ಶುಗರ್ ಅನ್ನು ನೈಸರ್ಗಿಕವಾಗಿ ನಿಯಂತ್ರಣದಲ್ಲಿಡಬಹುದು.
ಮಜ್ಜಿಗೆಯಲ್ಲಿ ಮೆಂತ್ಯೆ ಅಥವಾ ಮೆಂತ್ಯೆ ಪುಡಿಯನ್ನು ಬೆರಸಿ ಕುಡಿಯುವುದರಿಂದ ಶುಗರ್ ಅನ್ನು ಕಂಟ್ರೋಲ್‌ನಲ್ಲಿಡುವುದು ಅಷ್ಟೇ ಅಲ್ಲದೆ ಜೀರ್ಣಕ್ರಿಯೆಯನ್ನು ಸುಧಾರಿಸಿ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
ಮೆಂತ್ಯೆ ಫೈಬರ್ ಅಂಶದಲ್ಲಿ ಸಮೃದ್ದವಾಗಿದ್ದು, ಇದು ರಕ್ತದಲ್ಲಿನ ಗ್ಲೋಕೋಸ್ ಅಂಶ ಕಡಿಮೆಯಾಗುವುದನ್ನು ತಪ್ಪಿಸಿ, ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮಜ್ಜಿಗೆ ಪ್ರೋಬಯಾಟಿಕ್ ಭರಿತವಾಗಿದ್ದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧವನ್ನು ತಡೆಯುತ್ತದೆ. ಇದು ತೂಕ ಇಳಿಕೆಗೆ ಸಹಾಯ ಮಾಡುವುದಷ್ಟೇ ಅಲ್ಲದೆ, ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಮಜ್ಜಿಗೆಯಲ್ಲಿ ಮೆಂತ್ಯೆಯನ್ನು ಬೆರಸಿ ಕುಡಿಯುವುದರಿಂದ ಮಧುಮೇಹವನ್ನು ಕಂಟ್ರೋಲ್‌ನಲ್ಲಿಡುವುದಷ್ಟೇ ಅಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹದಲ್ಲಿ ಕೊಲಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಮೆಂತ್ಯೆ ಹಾಗೂ ಮಜ್ಜಿಗೆಯನ್ನು ಬೆರಸಿ ಸೇವಿಸುವುದು ಸುರಕ್ಷಿತವಾಗಿದ್ದರೂ, ಒಂದು ವೇಳೆ ನೀವು ಮಧುಮೇಹಕ್ಕೆ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ವೈದ್ಯರನ್ನು ಸಲಹೆಯ ಮೇರೆಗೆ ಸೇವಿಸುವುದು ಉತ್ತಮ.
ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯೂ ಮೂಲಗಳ ಮಾಹಿತಿ ಹಾಗೂ ಸಾಮಾನ್ಯ ಮನೆಮದ್ದುಗಳನ್ನು ಆಧರಿಸಿದೆ, ಇದನ್ನು ZEE KANNADA NEWS ಖಚಿತ ಪಡಿಸುವುದಿಲ್ಲ. ಮೆನಮದ್ದುಗಲನ್ನು ಅನುಸರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.