ಮಾರ್ಚ್ 2024ರ ವೇಳೆಗೆ 10 ಸಾವಿರ ಜನೌಷಧಿ ಕೇಂದ್ರಗಳನ್ನು ತೆರೆಯಲಿರುವ ಸರ್ಕಾರ

ಕಡಿಮೆ ವೆಚ್ಚದಲ್ಲಿ ವ್ಯಾಪಾರ ಮಾಡಲು ಬಯಸುವುದಾದರೆ, ಸರ್ಕಾರ ಉತ್ತಮ ಅವಕಾಶ ನೀಡುತ್ತದೆ. ಈ ವ್ಯವಹಾರದಲ್ಲಿ ಸಾಕಷ್ಟು ಲಾಭ ಗಳಿಸುವ ಅವಕಾಶವಿದೆ. 

ನವದೆಹಲಿ : ಕಡಿಮೆ ವೆಚ್ಚದಲ್ಲಿ ವ್ಯಾಪಾರ ಮಾಡಲು ಬಯಸುವುದಾದರೆ, ಸರ್ಕಾರ ಉತ್ತಮ ಅವಕಾಶ ನೀಡುತ್ತದೆ. ಈ ವ್ಯವಹಾರದಲ್ಲಿ ಸಾಕಷ್ಟು ಲಾಭ ಗಳಿಸುವ ಅವಕಾಶವಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು  ತೆರೆಯಲು ಜನರನ್ನು ಪ್ರೋತ್ಸಾಹಿಸುತ್ತಿದೆ. ಮಾರ್ಚ್ 2024 ರ ವೇಳೆಗೆ ಪ್ರಧಾನ್ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10,000 ಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. ನೀವು ಸಹ ಕಡಿಮೆ ವೆಚ್ಚದಲ್ಲಿ ಹೆಚ್ಚು ಸಂಪಾದನೆ ಮಾಡಲು ಬಯಸುವುದಾದರೆ, ಇಲ್ಲಿದೆ ಉತ್ತಮ ಅವಕಾಶ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಪರಾಗ್ಪುರದಲ್ಲಿ,  ಭಾರತೀಯ ಜನೌಷಧಿ ಕೇಂದ್ರವನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ 2024 ರ ಮಾರ್ಚ್ ವೇಳೆಗೆ ಪ್ರಧಾನ್ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10,000 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದಾರೆ. ವಿಶೇಷವೆಂದರೆ, ಜೂನ್ 11, 2021 ರ ಹೊತ್ತಿಗೆ ಜನಶಾಧಿ ಕೇಂದ್ರಗಳ ಸಂಖ್ಯೆ 7,836 ಕ್ಕೆ ಏರಿದೆ.  

2 /5

ಜನೌಷಧಿ ಕೇಂದ್ರವು ಸಾಮಾನ್ಯ ಜನರಿಗೆ ಕಡಿಮೆ ವೆಚ್ಚದಲ್ಲಿ ಔಷಧಿಗಳನ್ನು ಒದಗಿಸುವ ಯೋಜನೆಯಾಗಿದೆ. ಈ ಮೂಲಕ ಕೇಂದ್ರ ಸರ್ಕಾರವು ಜನರಿಗೆ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಒದಗಿಸುತ್ತದೆ. ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ದೇಶದ ವಿವಿಧ ಭಾಗಗಳಲ್ಲಿ 'ಪ್ರಧಾನ್ ಮಂತ್ರಿ ಜನೌಷಧಿಕೇಂದ್ರ' ತೆರೆಯಲು ಜನರನ್ನು ಪ್ರೋತ್ಸಾಹಿಸುತ್ತಿದೆ.   

3 /5

ಜನೌಷಧಿ ಕೇಂದ್ರದ ವ್ಯವಹಾರದಲ್ಲಿ ಗಳಿಕೆಗೆ ಉತ್ತಮ ಅವಕಾಶ ಇದೆ. ಔಷಧಿಗಳ ಮಾರಾಟದಲ್ಲಿ  ಶೇ 20 ರಷ್ಟು ಮಾರ್ಜಿನ್ ಅಂಗಡಿಯವರಿಗೆ ನೀಡಲಾಗುತ್ತದೆ. ಇದು ಮಾತ್ರವಲ್ಲ, ಅದರಲ್ಲಿ ನಾರ್ಮಲ್, ಮತ್ತು ಸ್ಪೆಶಲ್ ಇನ್ಸೆಂಟಿವ್ ಕೂಡಾ ಸಿಗುತ್ತದೆ. ನಾರ್ಮಲ್ ಇನ್ಸೆಂಟಿವ್ ನಲ್ಲಿ ಸರ್ಕಾರ, ಔಷಧಿ ಮತ್ತು ಅಂಗಡಿ ತೆರಯಲು ಹೂಡುವ ಹಣವನ್ನು ಸರ್ಕಾರ ವಾಪಸ್ ಮಾಡುತ್ತದೆ. 

4 /5

ಜನೌಷಧಿ ಕೇಂದ್ರವನ್ನು ತೆರೆಯಲು, ಅಂಗಡಿಯಲ್ಲಿನ ಪೀಠೋಪಕರಣಗಳಿಗಾಗಿ 1.5 ಲಕ್ಷ ರೂ ಖರ್ಚಾಗುತ್ತದೆ. ಇನ್ನು ಕಂಪ್ಯೂಟರ್ ಮತ್ತು ಫ್ರಿಜ್ ಗಾಗಿ 50 ಸಾವಿರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. 2 ಲಕ್ಷ ರೂ. ಪೂರ್ಣಗೊಳ್ಳುವವರೆಗೆ ಈ ಮೊತ್ತವನ್ನು ಮಾಸಿಕ ಆಧಾರದ ಮೇಲೆ ಗರಿಷ್ಠ 15,000 ರೂಗಂಳತೆ ನೀಡಲಾಗುತ್ತದೆ. 

5 /5

ಜನೌಷಧಿ ಕೇಂದ್ರವನ್ನು ತೆರೆಯಲು ಸರ್ಕಾರ ಮೂರು ವಿಭಾಗಗಳನ್ನು ರಚಿಸಿದೆ. ಮೊದಲ ವಿಭಾಗದಲ್ಲಿ, ಯಾವುದೇ ವ್ಯಕ್ತಿ, ನಿರುದ್ಯೋಗಿ ಫಾರ್ಮಸಿಸ್ಟ್ , ವೈದ್ಯ ಅಥವಾ ನೋಂದಾಯಿತ ವೈದ್ಯರು ಕೇಂದ್ರವನ್ನು ತೆರೆಯಲು ಅರ್ಹರಾಗಿದ್ದಾರೆ.  ಎರಡನೇಯ ವಿಭಾಗದಲ್ಲಿ ಟ್ರಸ್ಟ್ ಗಳು, ಎನ್‌ಜಿಒಗಳು, ಖಾಸಗಿ ಆಸ್ಪತ್ರೆಗಳು, ಸ್ವ-ಸಹಾಯ ಗುಂಪುಗಳು ಬರುತ್ತವೆ. ಇನ್ನು ಮೂರನೇ ವಿಭಾಗದಲ್ಲಿ, ರಾಜ್ಯ ಸರ್ಕಾರಗಳು ನಾಮನಿರ್ದೇಶನ ಮಾಡಿದ ಏಜೆನ್ಸಿಗಳಿಗೆ ಅವಕಾಶ ಸಿಗುತ್ತದೆ.