ಕುಂಬಾರನ ಕಲಾಕೃತಿಗಳನ್ನು ಒಮ್ಮೆ ನೋಡಿ; ಮಣ್ಣಿನ ದೀಪಗಳಿಂದ ಆಚರಿಸಿ ದೀಪಾವಳಿ
ಚೀನೀ ದೀಪಗಳ ಬದಲಿಗೆ, ಸ್ಟೈಲಿಶ್ ದೀಪಗಳು, ಲ್ಯಾಂಟರ್ನ್‌ಗಳು, ದೇಶದ 10 ವಿವಿಧ ರಾಜ್ಯಗಳ ಕುಂಬಾರರಿಂದ ತಯಾರಿಸಿದ ಮಣ್ಣಿನ ದೀಪಗಳು ಜನರನ್ನು ಮನಸೂರೆಗೊಳಿಸುತ್ತಿವೆ.
'ದೀಪಾವಳಿ' ಹೆಸರೇ ಸೂಚಿಸುವಂತೆ ಬೆಳಕಿನ ಹಬ್ಬವಾಗಿದೆ. ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಉಳಿದಿವೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನರ ಶಾಪಿಂಗ್ ಕೂಡ ಪ್ರಾರಂಭವಾಗಿದೆ. ದೀಪಾವಳಿ ಬೆಳಕಿನ ಜೊತೆಗೆ ಸಾಕಷ್ಟು ಸಡಗರ ಸಂಭ್ರಮವನ್ನು ಹೊತ್ತು ತರುವ ಹಬ್ಬ.
ಎಲ್ಲಿನೋಡಿದರೂ ಬೆಳಕು. ಈ ಬಾರಿ ದೆಹಲಿಯವರಿಗೆ ದೀಪಾವಳಿಯನ್ನು ಹೆಚ್ಚು ಸುಂದರವಾಗಿ ಮತ್ತು ಪರಿಸರ ಸ್ನೇಹಿ ರೀತಿಯಲ್ಲಿ ಆಚರಿಸಲು ಆಯ್ಕೆಗಳ ಕೊರತೆಯಿಲ್ಲ. ಚೀನೀ ದೀಪಗಳ ಬದಲಿಗೆ, ಸ್ಟೈಲಿಶ್ ದೀಪಗಳು, ಲ್ಯಾಂಟರ್ನ್‌ಗಳು, ದೇಶದ 10 ವಿವಿಧ ರಾಜ್ಯಗಳ ಕುಂಬಾರರಿಂದ ತಯಾರಿಸಿದ ಮಣ್ಣಿನ ದೀಪಗಳು ಜನರನ್ನು ಮನಸೂರೆಗೊಳಿಸುತ್ತಿವೆ.
1/5
ದೆಹಲಿ ಬ್ಲೂ ಪಾಟರಿ ಕ್ಲಬ್

2/5
ಸುಂದರ ದೀಪಗಳು

3/5
ಚೀನೀ ದೀಪಗಳ ಬದಲಿಗೆ ಮಣ್ಣಿನ ದೀಪಗಳು

4/5
ವೈವಿಧ್ಯಮಯ ದೀಪಗಳು
