ಕುಂಬಾರನ ಕಲಾಕೃತಿಗಳನ್ನು ಒಮ್ಮೆ ನೋಡಿ; ಮಣ್ಣಿನ ದೀಪಗಳಿಂದ ಆಚರಿಸಿ ದೀಪಾವಳಿ

ಚೀನೀ ದೀಪಗಳ ಬದಲಿಗೆ, ಸ್ಟೈಲಿಶ್ ದೀಪಗಳು, ಲ್ಯಾಂಟರ್ನ್‌ಗಳು, ದೇಶದ 10 ವಿವಿಧ ರಾಜ್ಯಗಳ ಕುಂಬಾರರಿಂದ ತಯಾರಿಸಿದ ಮಣ್ಣಿನ ದೀಪಗಳು ಜನರನ್ನು ಮನಸೂರೆಗೊಳಿಸುತ್ತಿವೆ.

Oct 19, 2019, 01:14 PM IST

'ದೀಪಾವಳಿ' ಹೆಸರೇ ಸೂಚಿಸುವಂತೆ ಬೆಳಕಿನ ಹಬ್ಬವಾಗಿದೆ. ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಉಳಿದಿವೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನರ ಶಾಪಿಂಗ್ ಕೂಡ ಪ್ರಾರಂಭವಾಗಿದೆ. ದೀಪಾವಳಿ ಬೆಳಕಿನ ಜೊತೆಗೆ ಸಾಕಷ್ಟು ಸಡಗರ ಸಂಭ್ರಮವನ್ನು ಹೊತ್ತು ತರುವ ಹಬ್ಬ. 

ಎಲ್ಲಿನೋಡಿದರೂ ಬೆಳಕು. ಈ ಬಾರಿ ದೆಹಲಿಯವರಿಗೆ ದೀಪಾವಳಿಯನ್ನು ಹೆಚ್ಚು ಸುಂದರವಾಗಿ ಮತ್ತು ಪರಿಸರ ಸ್ನೇಹಿ ರೀತಿಯಲ್ಲಿ ಆಚರಿಸಲು ಆಯ್ಕೆಗಳ ಕೊರತೆಯಿಲ್ಲ. ಚೀನೀ ದೀಪಗಳ ಬದಲಿಗೆ, ಸ್ಟೈಲಿಶ್ ದೀಪಗಳು, ಲ್ಯಾಂಟರ್ನ್‌ಗಳು, ದೇಶದ 10 ವಿವಿಧ ರಾಜ್ಯಗಳ ಕುಂಬಾರರಿಂದ ತಯಾರಿಸಿದ ಮಣ್ಣಿನ ದೀಪಗಳು ಜನರನ್ನು ಮನಸೂರೆಗೊಳಿಸುತ್ತಿವೆ.

1/5

ದೆಹಲಿ ಬ್ಲೂ ಪಾಟರಿ ಕ್ಲಬ್

ದೆಹಲಿಯ ದೆಹಲಿ ಬ್ಲೂ ಪಾಟರಿ ಕ್ಲಬ್ ಆಯೋಜಿಸಿರುವ ಟೆರ್ರಾ ಫೆಸ್ಟ್ ನಲ್ಲಿ ದೇಶದ ಮೂಲೆ ಮೂಲೆಯ ಕುಂಬಾರರು ಸುಂದರವಾದ ಮಣ್ಣಿನ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ.  

2/5

ಸುಂದರ ದೀಪಗಳು

ಇಲ್ಲಿ ಜನರನ್ನು ಮನಸೂರೆಗೊಳಿಸುವ ದೀಪಗಳು ತರಾವರಿ ದೀಪಗಳಿವೆ. ಇಲ್ಲಿ ನೀವು ದೇಶಾದ್ಯಂತದ ಕುಶಲಕರ್ಮಿಗಳ ಕೆಲಸವನ್ನು ನೋಡಬಹುದು. ದೀಪಗಳ ಸೌಂದರ್ಯವು ನಿಮ್ಮ ಹೃದಯವನ್ನು ಗೆಲ್ಲುತ್ತದೆ.

3/5

ಚೀನೀ ದೀಪಗಳ ಬದಲಿಗೆ ಮಣ್ಣಿನ ದೀಪಗಳು

ಚೀನಾದ ದೀಪಗಳನ್ನು ಬೈಪಾಸ್ ಮಾಡುವ ಮೂಲಕ ಪಿಂಗಾಣಿ, ದೀಪಗಳು ಮತ್ತು ಮಣ್ಣಿನ ಆರಾಧನಾ ತಟ್ಟೆಯಂತಹ ಆಯ್ಕೆಗಳೊಂದಿಗೆ ದೀಪಾವಳಿಯನ್ನು ಸಂಪೂರ್ಣವಾಗಿ ಪರಿಸರ ಸ್ನೇಹಿ ರೀತಿಯಲ್ಲಿ ಆಚರಿಸಲು ಈ ದೀಪಾವಳಿ ಜನರು ಮನಸ್ಸು ಮಾಡಿದ್ದಾರೆ.  

4/5

ವೈವಿಧ್ಯಮಯ ದೀಪಗಳು

ಮಣ್ಣಿನ ದೀಪಗಳಲ್ಲಿ ಇರುವ ವೈವಿಧ್ಯತೆಯು ಅವರ ಶಾಪಿಂಗ್ ಅನ್ನು ಸಹ ವಿಶೇಷವಾಗಿಸುತ್ತಿದೆ. ಈ ದೀಪಾವಳಿಗೆ ಜನರು ರಾಜಸ್ಥಾನದ ಸ್ಪರ್ಶ ನೀಡಲು ಬಯಸಿದರೆ, ಅವರು ರಾಜಸ್ಥಾನದ ಕುಶಲಕರ್ಮಿಗಳು ತಯಾರಿಸಿದ ಮಣ್ಣಿನ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

5/5

ಕುಶಲಕರ್ಮಿಗಳ ಕೆಲಸಕ್ಕೆ ಜನರ ಮೆಚ್ಚುಗೆ

ಟೆರ್ರಾ ಫೆಸ್ಟ್ ನಲ್ಲಿ ವೈವಿಧ್ಯಮಯ ಮಣ್ಣಿನ ದೀಪಗಳನ್ನು ಕಂಡ ಜನರು ಗುಜರಾತ್‌ನ ಮಧ್ಯಪ್ರದೇಶದ ಕುಶಲಕರ್ಮಿಗಳ ಕೆಲಸವನ್ನೂ ತುಂಬಾ ಇಷ್ಟಪಡುತ್ತಿದ್ದಾರೆ.