ಧನಶ್ರೀ ವರ್ಮಾ-ಯುಜ್ವೇಂದ್ರ ಚಾಹಲ್‌ನಿಂದ ತಮನ್ನಾ ಭಾಟಿಯಾ-ವಿಜಯ್ ವರ್ಮಾವರೆಗೆ ಹಲವು ಜೋಡಿಗಳು 2025ರಲ್ಲಿ ಬೇರ್ಪಟ್ಟಿವೆ. ಕೆಲವರು ವಿಚ್ಛೇದನದ ಮೂಲಕ ತಮ್ಮ ಸಂಗಾತಿಗಳಿಂದ ಬೇರ್ಪಟ್ಟರೆ, ಇನ್ನು ಕೆಲವರು ಕಾರಣವಿಲ್ಲದೇ ಪರಸ್ಪರ ದೂರವಾಗಿದ್ದಾರೆ.
Celebrity divorce breakups in 2025: ಬಾಲಿವುಡ್‌ನಿಂದ ಹಿಡಿದು ಟಿವಿ ಜಗತ್ತಿನವರೆಗೆ ಅನೇಕ ಜೋಡಿಗಳು 2025ರಲ್ಲಿ ಬೇರ್ಪಟ್ಟವು. ಕೆಲವರು ವಿಚ್ಛೇದನ ಪಡೆದರೆ, ಇನ್ನು ಕೆಲವರು ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. ಕೆಲವರು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ, ಇನ್ನೂ ಕೆಲವರು ಹಲವು ವಿವಾದಗಳನ್ನ ಎದುರಿಸಿದ ನಂತರ ಬೇರ್ಪಟ್ಟಿದ್ದಾರೆ. ಭರವಸೆ ಹುಟ್ಟುಹಾಕಿದ್ದ ಅನೇಕ ಸಂಬಂಧಗಳು ಮುರಿದುಬಿದ್ದಿವೆ. ಈ ವರ್ಷ ತಮ್ಮ ಸಂಗಾತಿಗಳಿಂದ ಬೇರ್ಪಟ್ಟ ಸೆಲೆಬ್ರಿಟಿಗಳ ಬಗ್ಗೆ ಇಲ್ಲಿದೆ ಮಾಹಿತಿ...
1/6ಧನಶ್ರೀ ವರ್ಮಾ ಮತ್ತು ಯುಜ್ವೇಂದ್ರ ಚಹಾಲ್: 2025ರ ಆರಂಭದಲ್ಲಿ ಧನಶ್ರೀ ವರ್ಮಾ ಮತ್ತು ಯುಜ್ವೇಂದ್ರ ಚಾಹಲ್ ಅವರ ಬ್ರೇಕ್‌ಅಪ್ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಹರಡಿದಾಗ ಭಾರತ ಮಾತ್ರವಲ್ಲದೇ, ಇಡೀ ವಿಶ್ವದಾದ್ಯಂತ ಸಖತ್ ಸುದ್ದಿಯಾದರು. ತಿಂಗಳ ಕಾಲ ಬೇರ್ಪಟ್ಟ ನಂತರ ಈ ದಂಪತಿ ಫೆಬ್ರವರಿ 2025ರಲ್ಲಿ ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಜೋಡಿಯ ಬ್ರೇಕ್‌ಅಪ್ ಸುದ್ದಿ ಭಾರೀ ಸಂಚಲವನ್ನೇ ಮೂಡಿಸಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಕೂಡ ಆಗಿತ್ತು. ಈ ಜೋಡಿಯ ಡಿವೋರ್ಸ್ ಸುದ್ದಿ ಕೇಳಿ ಇಬ್ಬರ ಅಭಿಮಾನಿಗಳಿಗೂ ದೊಡ್ಡ ಶಾಕ್ ಉಂಟಾಗಿತ್ತು.
2/6ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ: ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಈ ವರ್ಷ ಚಿತ್ರರಂಗದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಜೋಡಿ. ಮನರಂಜನಾ ಉದ್ಯಮದ ಅತ್ಯಂತ ಪ್ರೀತಿಯ ಜೋಡಿಯಾಗಿತ್ತು. ಆದರೆ ಅವರು 2025ರ ಆರಂಭದಲ್ಲಿ ಪರಸ್ಪರ ಬೇರ್ಪಟ್ಟರು. ಒಟ್ಟಿಗೆ ಒಂದು ಚಿತ್ರದಲ್ಲಿ ಕೆಲಸ ಮಾಡಿದ ನಂತರ ಇವರು ಪಾರ್ಟಿಯಲ್ಲಿ ಹತ್ತಿರವಾದರು. ಈ ಜೋಡಿ 2023ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿತ್ತು. ಆದರೆ ಯಾವುದೋ ಕಾರಣಕ್ಕೆ ಈ ಜೋಡಿ ಬೇರ್ಪಡಲು ನಿರ್ಧಾರ ತೆಗೆದುಕೊಂಡಿತು.
3/6ಲತಾ ಸಬರ್ವಾಲ್ ಮತ್ತು ಸಂಜೀವ್ ಸೇಠ್: ಜನಪ್ರಿಯ ಟೆಲಿವಿಷನ್ ದಂಪತಿ ಲತಾ ಸಭರ್ವಾಲ್ ಮತ್ತು ಸಂಜೀವ್ ಸೇಠ್ ಜೂನ್ 2025ರಲ್ಲಿ ಬೇರ್ಪಡುವುದಾಗಿ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದರು. 16 ವರ್ಷಗಳ ದಾಂಪತ್ಯದ ನಂತರ ಈ ಜೋಡಿ ಪ್ರತ್ಯೇಕವಾಗಲು ನಿರ್ಧರಿಸಿದರು. ವಿಶೇಷ ಅಂದ್ರೆ "ಯೇ ರಿಶ್ತಾ ಕ್ಯಾ ಕೆಹ್ಲತಾ ಹೈ" ಧಾರಾವಾಹಿಯ ತೆರೆಯ ಮೇಲಿನ ಪತಿ-ಪತ್ನಿ 2010ರಲ್ಲಿ ನಿಜ ಜೀವನದಲ್ಲಿಯೂ ವಿವಾಹವಾಗಿದ್ದರು. ಆದರೆ ಈಗ ಬೇರ್ಪಟ್ಟಿದ್ದಾರೆ.
4/6ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂಧಾನ: ಖ್ಯಾತ ಗಾಯಕ ಪಲಾಶ್ ಮುಚ್ಚಲ್ ಮತ್ತು ಕ್ರಿಕೆಟರ್ ಸ್ಮೃತಿ ಮಂಧಾನ ಜೋಡಿ ಈ ವರ್ಷ ಮದುವೆಯಾಗಬೇಕಿತ್ತು. ಆದರೆ ಆರತಕ್ಷತೆಯ ಸಂಭ್ರಮದ ಕ್ಷಣಗಳನ್ನ ಹಂಚಿಕೊಂಡಿದ್ದ ಈ ಜೋಡಿಯ ಜೀವನದಲ್ಲಿ ದೊಡ್ಡ ಬೀರುಗಾಳಿಯೇ ಎದ್ದಿತ್ತು. ಮದುವೆ ಮುಂಚಿನ ಆಚರಣೆಗಳ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದ ಈ ಜೋಡಿ ಕಾರಾಣಾಂತರಗಳಿಂದ ಬೇರ್ಪಡಲು ನಿರ್ಧರಿಸಿದ್ದರು. ವರದಿಗಳ ಪ್ರಕಾರ, ಪಲಾಶ್ ವಂಚಿಸಿದ್ದಕ್ಕೆ ಸ್ಮೃತಿ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆಂದು ಹೇಳಿದ್ರೆ, ಕುಟುಂಬದ ಹಿರಿಯರ ಆರೋಗ್ಯದಲ್ಲಿ ಸಮಸ್ಯಯ ಕಾರಣ ನೀಡಿ ಈ ಜೋಡಿ ಬೇರ್ಪಟ್ಟಿದೆ ಎಂದು ಕೂಡ ಹೇಳಲಾಗಿದೆ.
5/6ಸೆಲೀನಾ ಜೇಟ್ಲಿ ಮತ್ತು ಪೀಟರ್ ಹಾಗ್: ಈ ವರ್ಷದ ಆರಂಭದಲ್ಲಿ ಪೀಟರ್ ಹಾಗ್ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಸೆಲೀನಾ ಜೇಟ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪೀಟರ್ ದೈಹಿಕ, ಲೈಂಗಿಕ, ಭಾವನಾತ್ಮಕ ಮತ್ತು ಮೌಖಿಕ ನಿಂದನೆ ಮಾಡಿದ್ದಾರೆಂದು ಸೆಲೀನಾ ಆರೋಪಿಸಿದ್ದರು. ವರದಿಗಳ ಪ್ರಕಾರ, ಅವರು ತಮ್ಮ ಪತಿಯ ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಅರ್ಜಿಯಲ್ಲಿ ಪೀಟರ್ ತಮ್ಮನ್ನ ಕೆಲಸ ಮಾಡದಂತೆ ತಡೆದಿದ್ದಾರೆಂದು ಸೆಲೀನಾ ಆರೋಪಿಸಿದ್ದಾರೆ.
6/6ಶುಭಾಂಗಿ ಅತ್ರೆ ಮತ್ತು ಪಿಯೂಷ್ ಪುರಿ: ಟೆಲಿವಿಷನ್ ನಟಿ ಶುಭಾಂಗಿ ಅತ್ರೆ ಮತ್ತು ಪಿಯೂಷ್ ಪೂರಿ ಫೆಬ್ರವರಿ 2025ರಲ್ಲಿ ವಿಚ್ಛೇದನವನ್ನ ಅಂತಿಮಗೊಳಿಸಿದ್ದರು. ಈ ದಂಪತಿ ಎರಡು ದಶಕಗಳಿಗೂ ಹೆಚ್ಚು ಕಾಲ ದಾಂಪತ್ಯ ಜೀವನ ನಡೆಸಿದ್ದರು. ದುಃಖಕರ ವಿಷಯವೆಂದರೆ ಡಿವೋರ್ಸ್ ಆದ ಕೇವಲ ಎರಡು ತಿಂಗಳ ನಂತರ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಪಿಯೂಷ್ ಪೂರಿ ನಿಧನರಾದರು.