8th Pay Commission: ಕೇಂದ್ರ ಸರ್ಕಾರಿ ನೌಕರರ ವೇತನ 157% ಏರಿಕೆ!

8th Pay Commission Latest News: ನೀವು ಸರ್ಕಾರಿ ಉದ್ಯೋಗಿಯಾಗಿದ್ದರೆ ಅಥವಾ ಪಿಂಚಣಿದಾರರರಾಗಿದ್ದಲ್ಲಿ ಈ ಸುದ್ದಿ ನಿಮಗೆ ಪ್ರಮುಖವಾಗಿದೆ. ವಾಸ್ತವವಾಗಿ, ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಮತ್ತು ಪಿಂಚಣಿದಾರರ ಪಿಂಚಣಿ ಹೆಚ್ಚಳವನ್ನು ನಿರ್ಧರಿಸುವಲ್ಲಿ ಫಿಟ್‌ಮೆಂಟ್ ಅಂಶವು ಪ್ರಮುಖ ಪಾತ್ರ ವಹಿಸುತ್ತದೆ. ಫಿಟ್‌ಮೆಂಟ್ ಅಂಶ ಹೆಚ್ಚಾದಲ್ಲಿ ನೌಕರರ ವೇತನ, ನಿವೃತ್ತಿದಾರರ ಪಿಂಚಣಿ ಕೂಡ ಹೆಚ್ಚಾಗುತ್ತದೆ. 

1 /6

8ನೇ ವೇತನ ಆಯೋಗದ ಅನುಷ್ಠಾನಕ್ಕಾಗಿ ಕಾತರದಿಂದ ಕಾಯುತ್ತಿರುವ ಲಕ್ಷಾಂತರ ಮಂದಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಗುಡ್ ನ್ಯೂಸ್ ಇದೆ. ಹೊಸ ವೇತನ ಆಯೋಗ ಜಾರಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರಿ ನೌಕರರ ವೇತನ ಹಾಗೂ ಪಿಂಚಣಿದಾರರ ಪಿಂಚಣಿಯಲ್ಲಿ ಗಮನಾರ್ಹವಾಗಿ ಹೆಚ್ಚಳವಾಗಲಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ೮ನೆವೇತನ ಆಯೋಗದಲ್ಲಿ ಸರ್ಕಾರಿ ನೌಕರರ ವೇತನವು 157% ವರೆಗೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗುತ್ತದೆ. ಹೊಸ ವೇತನ ಆಯೋಗದ ಅಡಿಯಲ್ಲಿ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 70 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡುತ್ತದೆ. 

2 /6

ಇತ್ತೀಚೆಗೆ ಕೇಂದ್ರದ ಮೋದಿ ಸರ್ಕಾರ 8ನೇ ವೇತನ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಿದ್ದು, ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು 18 ತಿಂಗಳೊಳಗೆ ತಮ್ಮ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, 2027 ರಲ್ಲಿ 8ನೇ ವೇತನ ಆಯೋಗವನ್ನು ಜಾರಿಗೆ ತರಬಹುದು ಎಂದು ಹೇಳಲಾಗುತ್ತಿದೆ. ಆದಾಗ್ಯೂ, 8ನೇ ವೇತನ ಆಯೋಗದ ಹೊಸ ವೇತನ, ಭತ್ಯೆ ನಿಯಮಗಳು ಜನವರಿ 2026 ರಿಂದ ನೌಕರರು ಮತ್ತು ಪಿಂಚಣಿದಾರರಿಗೆ ಲಭ್ಯವಿರುತ್ತದೆ.  

3 /6

ಕೇಂದ್ರ ಸರ್ಕಾರಿ ನೌಕರರ ವೇತನ  ಹಾಗೂ ಪಿಂಚಣಿದಾರರ ಪಿಂಚಣಿ ಪರಿಷ್ಕರಣೆಯಲ್ಲಿ ಫಿಟ್‌ಮೆಂಟ್ ಅಂಶವು ಪ್ರಮುಖ ಪಾತ್ರ ವಹಿಸುತ್ತದೆ. ಹೊಸ ಮೂಲ ವೇತನವನ್ನು ನಿರ್ಧರಿಸಲು ಪ್ರಸ್ತುತ ಮೂಲ ವೇತನವನ್ನು ಫಿಟ್‌ಮೆಂಟ್ ಅಂಶದಿಂದ ಗುಣಿಸಲಾಗುತ್ತದೆ. 8ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶ ಎಷ್ಟು ಇರಲಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಿಲ್ಲ. ಆದಾಗ್ಯೂ, ಹೊಸ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವನ್ನು 1.8 ಮತ್ತು 3.0 ರ ನಡುವೆ ಹೊಂದಿಸಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

4 /6

ವಿವಿಧ ಫಿಟ್‌ಮೆಂಟ್ ಅಂಶಗಳ ಆಧಾರದ ಮೇಲೆ ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ನಿವೃತ್ತರಿಗೆ ಪಿಂಚಣಿ ಎಷ್ಟು ಹೆಚ್ಚಾಗುತ್ತದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಒಂದೊಮ್ಮೆ,  ಫಿಟ್‌ಮೆಂಟ್ ಅಂಶವನ್ನು 1.8ಕ್ಕೆ ನಿಗದಿಪಡಿಸಿದರೆ, ಲೆವೆಲ್ 1 ಉದ್ಯೋಗಿಗಳ ಮೂಲ ವೇತನ 18,000 ರೂ.ಗಳಿಂದ 32,400 ರೂ.ಗೆ ಹೆಚ್ಚಾಗುತ್ತದೆ. ಅದೇ ರೀತಿ, ಲೆವೆಲ್ 2 ಉದ್ಯೋಗಿಗಳ ಮೂಲವೇತನ 19,900ರೂ.ನಿಂದ  35,820ರೂ.ಗಳಿಗೆ ಹಾಗೂ ಲೆವೆಲ್ 3 ಉದ್ಯೋಗಿಗಳ ವೇತನ 21,700ರೂ.ನಿಂದ  39,060ರೂ.ಗಳಿಗೆ ಹೆಚ್ಚಾಗುವ ಸಾಧ್ಯತೆಯಿದೆ.

5 /6

ಹೊಸ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವನ್ನು 2.46ಕ್ಕೆ ನಿಗದಿಪಡಿಸಿದರೆ, ಹಂತ 1 ಉದ್ಯೋಗಿಗಳ ವೇತನವು 44,280ರೂ.ಗೆ ಹೆಚ್ಚಾಗುತ್ತದೆ. ಹಂತ 2 ಉದ್ಯೋಗಿಗಳ ವೇತನವು 48,954ರೂ. ಹಾಗೂ ಹಂತ 3 ಉದ್ಯೋಗಿಗಳ ವೇತನವು 53,382ರೂ.ಗಳಿಗೆ ಏರಿಕೆಯಾಗಲಿದೆ. 

6 /6

8ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವನ್ನು 2.57 ಕ್ಕೆ ನಿಗದಿಪಡಿಸಿದರೆ ಕೇಂದ್ರ ಸರ್ಕಾರಿ ನೌಕರರ ವೇತನ ಶೇ. 157ರಷ್ಟು ಗಮನಾರ್ಹ ಏರಿಕೆ ಆಗಲಿದೆ. ಈ ವೇಳೆ ಲೆವೆಲ್ 1 ಉದ್ಯೋಗಿಗಳ ವೇತನ 46,260ರೂ., ಲೆವೆಲ್ 2 ಉದ್ಯೋಗಿಗಳ ವೇತನ 51,143ರೂ. ಹಾಗೂ ಲೆವೆಲ್ 3 ಉದ್ಯೋಗಿಗಳ 55,769ರೂ. ತಲುಪಲಿದೆ. ಇನ್ನು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ಪಿಂಚಣಿದಾರರೂ ಕೂಡ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ.