ಹೊಸ ವರ್ಷದಲ್ಲಿ ಮಹತ್ವದ ಘೋಷಣೆ! ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಜಾಕ್ ಪಾಟ್!
ನ್ಯಾಷನಲ್ ಕೌನ್ಸಿಲ್ ಆಫ್ ಜಾಯಿಂಟ್ ಕನ್ಸಲ್ಟೇಟಿವ್ ಆರ್ಗನೈಸೇಷನ್ಸ್ (ಎನ್‌ಸಿ-ಜೆಸಿಎಂ) ಕಳೆದ ಜುಲೈ ಮತ್ತು ಆಗಸ್ಟ್‌ನಲ್ಲಿ ಎಂಟನೇ ವೇತನ ಆಯೋಗಕ್ಕೆ ತನ್ನ ಬೇಡಿಕೆಯನ್ನು ಸಲ್ಲಿಸಿತ್ತು. ಈ ತಿಂಗಳು ಸಭೆ ಕೂಡಾ ನಡೆಯಲಿದೆ. ಸಭೆಯ ನಂತರ ವೇತನ ಹೆಚ್ಚಳದ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳಲಿದೆ.
ಎನ್‌ಸಿ-ಜೆಸಿಎಂ ಸಭೆಯ ನಂತರ ಎಂಟನೇ ವೇತನ ಆಯೋಗ ಜಾರಿಯಾಗುವ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವುದು. ಅಂದರೆ ಸರ್ಕಾರಿ ನೌಕರರ ವೇತನ ಲೆಕ್ಕ ಹಾಕಲು ಬಳಸುವ ಫಿಟ್ ಮೆಂಟ್ ಫ್ಯಾಕ್ಟರ್ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಆಗ ಸಂಬಳ ಹೆಚ್ಚಾಗುತ್ತದೆ.
ಎನ್‌ಸಿ-ಜೆಸಿಎಂ ಸಭೆಯ ನಂತರ ಎಂಟನೇ ವೇತನ ಆಯೋಗ ಜಾರಿಯಾಗುವ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವುದು. ಅಂದರೆ ಸರ್ಕಾರಿ ನೌಕರರ ವೇತನ ಲೆಕ್ಕ ಹಾಕಲು ಬಳಸುವ ಫಿಟ್ ಮೆಂಟ್ ಫ್ಯಾಕ್ಟರ್ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಆಗ ಸಂಬಳ ಹೆಚ್ಚಾಗುತ್ತದೆ.
ಮುಂದಿನ ವರ್ಷದಿಂದ ಎಂಟನೇ ವೇತನ ಆಯೋಗವನ್ನು ಸರ್ಕಾರ ಘೋಷಿಸಿ ಜಾರಿಯಾದರೆ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ ಮತ್ತು ಪಿಂಚಣಿ ಶೇ.186ರಷ್ಟು ಹೆಚ್ಚಾಗುವ ನಿರೀಕ್ಷೆಯೂ ಇದೆ. ಇದರಿಂದ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೆಚ್ಚಿನ ಪರಿಹಾರ ದೊರೆಯಲಿದೆ.
ಎಂಟನೇ ವೇತನ ಆಯೋಗ ಜಾರಿಯಾದರೆ ಪಿಂಚಣಿದಾರರಿಗೆ ಯಾವ ರೀತಿ ಲಾಭವಾಗಲಿದೆ ಎಂಬುದನ್ನು ಗಮನಿಸಿದರೆ ಸರ್ಕಾರಿ ಪಿಂಚಣಿದಾರರಿಗೆ ಸಿಗುವ ಪಿಂಚಣಿಯೂ ಶೇ.186ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸ್ತುತ 9,000 ಇರುವ ಪಿಂಚಣಿ 25,740 ರೂಪಾಯಿಗೆ ಹೆಚ್ಚಾಗಬಹುದು.
ಆಯೋಗದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರಕಾರದಿಂದ ಇದುವರೆಗೆ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ ಎಂಬುದು ಗಮನಾರ್ಹ.