ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ಯುಗಾದಿಗೂ ಮುನ್ನವೇ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿದ ಹಾಗಾಗಿದೆ.
DA Hike Latest news : ಈ ಹೆಚ್ಚಳದೊಂದಿಗೆ, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ 53% ರಿಂದ 55% ಕ್ಕೆ ಹೆಚ್ಚಾಗುತ್ತದೆ. 8ನೇ ವೇತನ ಆಯೋಗದ ಮೊದಲು ಹಣದುಬ್ಬರವನ್ನು ಕಡಿಮೆ ಮಾಡುವುದು ಮತ್ತು ಉದ್ಯೋಗಿಗಳ ವೇತನವನ್ನು ಸುಧಾರಿಸುವುದು ಈ ಹೆಚ್ಚಳದ ಉದ್ದೇಶವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ಯುಗಾದಿಗೂ ಮುನ್ನವೇ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿದ ಹಾಗಾಗಿದೆ.
ಕೇಂದ್ರ ಸರ್ಕಾರಿ ನೌಕರರ ಡಿಎ ಯನ್ನು ಶೇ.2 ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ತುಟ್ಟಿ ಭತ್ಯೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಹೆಚ್ಚಳದೊಂದಿಗೆ, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ 53% ರಿಂದ 55% ಕ್ಕೆ ಹೆಚ್ಚಾಗುತ್ತದೆ. 8ನೇ ವೇತನ ಆಯೋಗದ ಮೊದಲು ಹಣದುಬ್ಬರವನ್ನು ಕಡಿಮೆ ಮಾಡುವುದು ಮತ್ತು ಉದ್ಯೋಗಿಗಳ ವೇತನವನ್ನು ಸುಧಾರಿಸುವುದು ಈ ಹೆಚ್ಚಳದ ಉದ್ದೇಶವಾಗಿದೆ.
ಜುಲೈ 2024 ರಲ್ಲಿ, ಕೇಂದ್ರ ಸರ್ಕಾರವು ಡಿಎ ಹೆಚ್ಚಳವನ್ನು ಅನುಮೋದಿಸಿತ್ತು. ಕಳೆದ ಬಾರಿ ಡಿಎಯನ್ನು 50% ರಿಂದ 53% ಕ್ಕೆ ಹೆಚ್ಚಿಸಲಾಗಿತ್ತು. ವರದಿಯ ಪ್ರಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಶೇ. 2 ರಷ್ಟು ತುಟ್ಟಿ ಭತ್ಯೆ (DA) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ 7 ವರ್ಷಗಳ ಬಳಿಕ ಅತಿ ಕಡಿಮೆ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಹಾಗೆ ಆಗಿದೆ.
ತುಟ್ಟಿಭತ್ಯೆ (DA) ಎಂಬುದು ಸರ್ಕಾರಿ ನೌಕರರಿಗೆ ಹಣದುಬ್ಬರವನ್ನು ಸರಿದೂಗಿಸಲು ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ಅವರ ವೇತನ ಉಳಿಯುವಂತೆ ನೋಡಿಕೊಳ್ಳಲು ನೀಡಲಾಗುವ ಆರ್ಥಿಕ ಪ್ರಯೋಜನವಾಗಿದೆ. ಆದರೆ ಮೂಲ ವೇತನವನ್ನು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗ ನಿರ್ಧರಿಸುತ್ತದೆ.
ಪಿಂಚಣಿದಾರರಿಗೂ ಈ ಹೆಚ್ಚಳದ ಪ್ರಯೋಜನ ದೊರೆಯುತ್ತದೆ. ಏಕೆಂದರೆ ಅವರ ಪಿಂಚಣಿಗೆ ಡಿಎ ಅನ್ವಯಿಸುವುದರಿಂದ ವೃದ್ಧಾಪ್ಯದಲ್ಲಿ ಆರ್ಥಿಕ ನೆರವು ದೊರೆಯುತ್ತದೆ. ಇದರ ಇನ್ನೊಂದು ಅಂಶದ ಪ್ರಕಾರ ಡಿಎ ಹೆಚ್ಚಳವು ಸರ್ಕಾರಿ ಖಜಾನೆಯ ಮೇಲೆ ಹೆಚ್ಚುವರಿ ಹೊರೆಯನ್ನು ಹೆಚ್ಚಿಸುತ್ತದೆ. ಇದು ಸರ್ಕಾರದ ಹಣಕಾಸು ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.