ಏರಿಕೆಯಾದ ಮೂಲ ವೇತನ, ಎಲ್ಲಾ ಭತ್ಯೆ, ಅರಿಯರ್ಸ್ ಸೇರಿ ಇನ್ನೆರಡು ದಿನಗಳಲ್ಲಿ ಸರ್ಕಾರಿ ನೌಕರರ ಕೈ ಸೇರುವ ಮೊತ್ತ ಇದು !
ತುಟ್ಟಿಭತ್ಯೆಯು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನದ ಒಂದು ಭಾಗವಾಗಿದೆ. ಹಾಗಾಗಿ ಡಿಎ ಹೆಚ್ಚಾದರೆ ಉದ್ಯೋಗಿಗಳ ಟೇಕ್ ಹೋಮ್ ವೇತನವೂ ಹೆಚ್ಚಾಗುತ್ತದೆ. ಹಾಗಿದ್ದರೆ ಮಾರ್ಚ್‌ನಲ್ಲಿ ಉದ್ಯೋಗಿಗಳ ವೇತನ ಎಷ್ಟು ಹೆಚ್ಚಾಗುತ್ತದೆ ಎನ್ನುವ ಲೆಕ್ಕಾಚಾರ ಇಲ್ಲಿದೆ.
ಕೇಂದ್ರ ಸರ್ಕಾರಿ ನೌಕರ ತಿಂಗಳಿಗೆ 47,500 ರೂ. ಮೂಲ ವೇತನವನ್ನು ಪಡೆಯುತ್ತಾರೆ ಎಂದಿಟ್ಟುಕೊಳ್ಳೋಣ. ಶೇಕಡಾ 46 ರ ಪ್ರಕಾರ ತುಟ್ಟಿಭತ್ಯೆ 21,022 ರೂ. ಈಗ ಡಿಎ ಶೇ. 50 ರಷ್ಟಾಗಿದ್ದು ತುಟ್ಟಿಭತ್ಯೆ ಕೂಡಾ 22,850 ರೂ.ಗೆ ಏರಿಕೆಯಾಗುತ್ತದೆ. ಅಂದರೆ ಏರಿಕೆ ಕಂಡ ತುಟ್ಟಿಭತ್ಯೆ 1,818 ರೂ.
ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆ ಸಿಗುತ್ತದೆ. ಇದು ಅವರು ವಾಸಿಸುವ ಸ್ಥಳವನ್ನು ಅವಲಂಬಿಸಿರುತ್ತದೆ. ಏಳನೇ ವೇತನ ಆಯೋಗದ ಶಿಫಾರಸಿನ ಪ್ರಕಾರ X, Y ಮತ್ತು Z ನಗರಗಳಿಗೆ ಮನೆ ಬಾಡಿಗೆ ಭತ್ಯೆಯನ್ನು ನೀಡಲಾಗುತ್ತದೆ. ಈಗ ಡಿಎ ಶೇ 50 ತಲುಪಿದಾಗ ಮನೆ ಬಾಡಿಗೆ ಭತ್ಯೆಯನ್ನು ಕೂಡಾ ಪರಿಷ್ಕರಿಸಲಾಗಿದೆ.
ಮೂಲ ವೇತನವಾಗಿ 45700 ರೂಪಾಯಿ ಪಡೆಯುವ ಕೇಂದ್ರ ಸರ್ಕಾರಿ ನೌಕರ, Y ವರ್ಗದ ನಗರದಲ್ಲಿ ವಾಸಿಸುತ್ತಿದ್ದಾರೆ ಎಂದು ಭಾವಿಸೋಣ. ಇದುವರೆಗೆ ಅವರ ಎಚ್‌ಆರ್‌ಎ 8226 ರೂ.ಆಗಿದ್ದು, ಡಿಎ 50 ಪ್ರತಿಶತ ತಲುಪಿದಾಗ, ಆ ನೌಕರ ಪಡೆಯುವ HRA ಶೇಕಡಾ 20 ಕ್ಕೆ ಹೆಚ್ಚಾಗುತ್ತದೆ. ಅಂದರೆ ಅವರ HRAಯನ್ನು 9,140 ರೂಪಾಯಿಗಳಿಗೆ ಪರಿಷ್ಕರಿಸಲಾಗುವುದು. ಅಂದರೆ ತಿಂಗಳಿಗೆ 914 ರೂಪಾಯಿ ಲಾಭ ಸಿಗಲಿದೆ.
ಈ ಮೂಲಕ ಇನ್ನೆರಡು ದಿನಗಳಲ್ಲಿ ಅಂದರೆ ಮಾರ್ಚ್ 30 ರಂದು ಸರ್ಕಾರಿ ನೌಕರರ ಕೈ ಸೇರು ವ ಮೂಲ ವೇತನದಲ್ಲಿಯೇ ಹೆಚ್ಚಳ ಕಂಡು ಬರಲಿದೆ. ಅಲ್ಲದೆ ಎಲ್ಲಾ ಭತ್ಯೆಗಳಲ್ಲಿಯೂ ಏರಿಕೆಯಾಲಿದೆ. ಒಂದು ಅರ್ಥದಲ್ಲಿ ಈ ಬಾರಿ ಬಂಪರ್ ಮೊತ್ತವೇ ಸರ್ಕಾರಿ ನೌಕರರ ಖಾತೆ ಸೇರಲಿದೆ.