ಇದೀಗ ಸರ್ಕಾರಿ ನೌಕರರ ನೀರಿಕ್ಷೆ ಕೊನೆಯಾಗಿದೆ. ಹೋಳಿಗೂ ಮುನ್ನ ಅಂದರೆ ಇನ್ನೆರಡು ದಿನಗಳಲ್ಲಿ ಸರ್ಕಾರ ಡಿಎ ಹೆಚ್ಚಳವನ್ನು ಅಧಿಕೃತವಾಗಿ ಘೋಷಿಸಲಿದೆ.
ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಮತ್ತು ಪಿಂಚಣಿದಾರರ ತುಟ್ಟಿ ಪರಿಹಾರವನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸುತ್ತದೆ. ಈ ಪ್ರಕಾರ ಜನವರಿಯಿಂದ ಏರಿಸಬೇಕಾಗಿದ್ದ ತುಟ್ಟಿಭತ್ಯೆಯ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರಿ ನೌಕರರು ಇದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
7 ನೇ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ, ಸರ್ಕಾರವು ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಮತ್ತು ಪಿಂಚಣಿದಾರರ ತುಟ್ಟಿ ಪರಿಹಾರವನ್ನು ಹೆಚ್ಚಿಸುತ್ತಿದೆ. ಇದರಿಂದ 1 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅನುಕೂಲವಾಗಲಿದೆ.
ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಮತ್ತು ಪಿಂಚಣಿದಾರರ ತುಟ್ಟಿ ಪರಿಹಾರವನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸುತ್ತದೆ. ಈ ಪ್ರಕಾರ ಜನವರಿಯಿಂದ ಏರಿಸಬೇಕಾಗಿದ್ದ ತುಟ್ಟಿಭತ್ಯೆಯ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರಿ ನೌಕರರು ಇದ್ದಾರೆ.
ಇದೀಗ ಸರ್ಕಾರಿ ನೌಕರರ ನೀರಿಕ್ಷೆ ಕೊನೆಯಾಗಿದೆ. ಹೋಳಿಗೂ ಮುನ್ನ ಅಂದರೆ ಇನ್ನೆರಡು ದಿನಗಳಲ್ಲಿ ಸರ್ಕಾರ ಡಿಎ ಹೆಚ್ಚಳವನ್ನು ಅಧಿಕೃತವಾಗಿ ಘೋಷಿಸಲಿದೆ.
ಲೆಕ್ಕಾಚಾರದ ಪ್ರಕಾರ ಈ ಬಾರಿಯ ತುಟ್ಟಿಭತ್ಯೆ ಸರ್ಕಾರೀ ನೌಕರರಿಗೆ ಅಷ್ಟೊಂದು ಸಂತಸದಾಯಕವಾಗಿಲ್ಲ. ಈ ಬಾರಿ ಶೇಕಡಾ 2 ರಷ್ಟು ಮಾತ್ರ ತುಟ್ಟಿಭತ್ಯೆ ಹೆಚ್ಚಳವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ, ತುಟ್ಟಿ ಭತ್ಯೆ ಶೇ. 53 ರಷ್ಟಿದೆ. ಡಿಎ 2% ಹೆಚ್ಚಾದರೆ, ಒಟ್ಟು ಭತ್ಯೆ 55% ಕ್ಕೆ ಹೆಚ್ಚಾಗುತ್ತದೆ. ಗಮನಾರ್ಹವೆಂದರೆ, ಡಿಎ ಹೆಚ್ಚಳವು 2% ಆಗಿದ್ದರೆ, ವೇತನ ಹೆಚ್ಚಳದಲ್ಲಿಯೂ ಕಡಿಮೆಯಾಗುತ್ತದೆ.
ಈ ತಿಂಗಳು ತುಟ್ಟಿ ಭತ್ಯೆ ಹೆಚ್ಚಳದ ಘೋಷಣೆ ಬಂದರೂ, ಜನವರಿಯಿಂದ ಪ್ರಾರಂಭವಾಗುವ ತಿಂಗಳುಗಳ ತುಟ್ಟಿ ಭತ್ಯೆಯ ಮೊತ್ತವನ್ನು ಬಾಕಿ ಪಾವತಿಸಲಾಗುತ್ತದೆ. ಏಕೆಂದರೆ ಈ ವರ್ಷದ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರದ ಮೊದಲ ಹೆಚ್ಚಳವು ಜನವರಿ 2025 ರಿಂದ ಜಾರಿಗೆ ಬರಲಿದೆ.
ಒಬ್ಬ ಉದ್ಯೋಗಿಯ ಮೂಲ ವೇತನ 40,000 ರೂ. ಆಗಿದ್ದರೆ, 2% ತುಟ್ಟಿ ಭತ್ಯೆ ಹೆಚ್ಚಳದ ನಂತರ, ಅವರ ಸಂಬಳದಲ್ಲಿ ತಿಂಗಳಿಗೆ 800 ರೂ. ಹೆಚ್ಚಳವಾಗುತ್ತದೆ. ವಾರ್ಷಿಕ ವೇತನ ಹೆಚ್ಚಳವು 9600 ರೂ.ಗಳಾಗುವ ನಿರೀಕ್ಷೆಯಿದೆ. ವೇತನ ಹೆಚ್ಚಳ ಮತ್ತು ಡಿಎ ಬಾಕಿ ನೌಕರರಿಗೆ ದೊಡ್ಡ ಪರಿಹಾರ ನೀಡಲಿದೆ.