ದುಬಾರಿ ಹೇರ್‌ ಕಲರ್‌ ಬದಲು.. ಸ್ನಾನಕ್ಕೂ ಮುನ್ನ ಈ ಪುಡಿಯ ಪೇಸ್ಟ್‌ ತಲೆಗೆ ಹಚ್ಚಿಕೊಂಡ್ರೆ ಶಾಶ್ವತವಾಗಿ ಕಪ್ಪಾಗುತ್ತವೆ ಬಿಳಿ ಕೂದಲು!

White Hair Remedy: ದುಬಾರಿ ಹೇರ್‌ ಕಲರ್‌ ಬದಲು..  ಸ್ನಾನಕ್ಕೂ ಮೊದಲು ಈ ಪುಡಿಯನ್ನ ಬೆರೆಸಿ ಹಚ್ಚಿದ್ರೆ 5 ನಿಮಿಷದಲ್ಲಿ ಶಾಶ್ವತವಾಗಿ ಕಪ್ಪಾಗುತ್ತವೆ ಬಿಳಿ ಕೂದಲು! ಮತ್ತೇ ಬೆಳ್ಳಗಾಗಲ್ಲ..

1 /6

ಗಾಢ ಕಪ್ಪಾದ ದಪ್ಪ, ಉದ್ದ ಕೂದಲು ಹೊಂದುವುದು ಪ್ರತಿಯೊಬ್ಬ ಹೆಣ್ಣಿನ ಕನಸಾಗಿರುತ್ತದೆ. ಆಧುನಿಕ ಕಾಲದಲ್ಲಿ, ಆಹಾರ ಪದ್ಧತಿ, ಪೌಷ್ಟಿಕಾಂಶದ ಕೊರತೆ, ಮಾಲಿನ್ಯ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳಂತಹ ವಿವಿಧ ಕಾರಣಗಳಿಂದಾಗಿ, ಕೂದಲು ಉದುರುವಿಕೆ, ಬೂದು ಕೂದಲಿನ ಸಮಸ್ಯೆ ಬಹಳಷ್ಟು ಜನರನ್ನು ಚಿಂತೆಗೀಡುಮಾಡಿದೆ. ಆದರೆ ನೀವು ಸ್ನಾನಕ್ಕೂ ಮೊದಲು ಈ ಒಂದು ಪುಡಿಯನ್ನು ಕೂದಲಿನ ಬುಡಕ್ಕೆ ಹಚ್ಚಿದ್ರೆ ಬೆಳ್ಳಗಾಗಿರುವ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ. 

2 /6

ಬಿಳಿ ಕೂದಲಿನಿಂದ ಪರಿಹಾರ ಪಡೆಯಲು ಬಹುತೇಕ ಜನರು ಕೆಮಿಕಲ್‌ ಮಿಶ್ರಿತ ಹೇರ್‌ ಡೈಗಳ ಮೊರೆ ಹೋಗುತ್ತಾರೆ. ಆದರೆ, ರಾಸಾಯನಿಕ ಆಧಾರಿತ ಉತ್ಪನ್ನಗಳ ಬದಲಿಗೆ ನೈಸರ್ಗಿಕ ಮತ್ತು ಸುರಕ್ಷಿತ ಮನೆಮದ್ದುಗಳನ್ನು ಅನುಸರಿಸುವ ಮೂಲಕ ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗುವಂತೆ ಮಾಡಬಹುದು ಜೊತೆಗೆ ಹೇರ್‌ ಫಾಲ್‌ ಸಮಸ್ಯೆಯಿಂದಲೂ ಪರಿಹಾರ ದೊರೆಯುತ್ತದೆ. ಇದಕ್ಕೆ ʼಇದ್ದಿಲುʼ ತುಂಬಾ ಸಹಕಾರಿ ಆಗಿದೆ.   

3 /6

ಬಿಳಿ ಕೂದಲನ್ನು ಕಪ್ಪಾಗಿಸಲು ಇದ್ದಿಲು ಅತ್ಯುತ್ತಮ ಪರಿಹಾರವಾಗಿದೆ. ಇದ್ದಿಲಿನಲ್ಲಿರುವ ಕೆಲವು ಶಕ್ತಿಶಾಲಿ ಪೋಷಕಾಂಶಗಳು ಕೂದಲು ಉದುರುವಿಕೆಯನ್ನು ತಡೆಯುತ್ತದೆ ಮತ್ತು ಕೂದಲು ಕಪ್ಪು ಮತ್ತು ದಪ್ಪವಾಗಿ ಬೆಳೆಯುವುದನ್ನು ಪ್ರಚೋದಿಸುತ್ತದೆ. 

4 /6

ಇದ್ದಿಲನ್ನು ಪುಡಿ ಮಾಡಿ ಶಾಂಪೂ ಜೊತೆಗೆ ಬೆರೆಸಿ ಬಳಸುವುದರಿಂದ ಇದು  ಕೂದಲಿನಿಂದ ಕೊಳಕು ಮತ್ತು ಶಿಲೀಂಧ್ರವನ್ನು ತೆಗೆದುಹಾಕುವಲ್ಲಿ ಇದ್ದಿಲು ಪ್ರಮುಖ ಪಾತ್ರ ವಹಿಸುತ್ತದೆ. ಮಾತ್ರವಲ್ಲ ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ. 

5 /6

ಒಂದು ಬಟ್ಟಲಿನಲ್ಲಿ ಅರ್ಧ ಚಮಚ ಇದ್ದಿಲು ಪುಡಿಯನ್ನು ತೆಗೆದುಕೊಳ್ಳಿ. ಅದರಲ್ಲಿ 2 ಚಮಚ ಅಲೋವೆರಾ ಜೆಲ್ ಹಾಕಿ ಬೆರೆಸಿಡಿ. ಎರಡನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ ಅದರಲ್ಲಿ ನೀವು ಬಳಸುವ ಶಾಂಪೂ ಬೆರೆಸಿ. 

6 /6

ತಲೆಗೆ ಸ್ನಾನ ಮಾಡುವ ಮೊದಲು ಈ ಮಿಶ್ರಣವನ್ನು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ. ಐದು ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಹೇರ್‌ ವಾಶ್‌ ಮಾಡಿ.  ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ, ಬದಲಾವಣೆ ತಕ್ಷಣ ಕಾಣುವಿರಿ. ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುವುದರ ಜೊತೆಗೆ ಉದ್ದವಾಗಿಯೂ ಬೆಳೆಯುತ್ತದೆ.  ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.