Cheapest gold : ದೀಪಾವಳಿಯಂದು ಬೆಳ್ಳಿಯ ಮಾರುಕಟ್ಟೆಗಳು ಜನರಿಂದ ತುಂಬಿರುತ್ತವೆ, ಆದರೆ ಚಿನ್ನದ ಬೆಲೆಗಳು ಗಗನಕ್ಕೇರಿದ್ದು ಜನ ಬಂಗಾರ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.. ಚಿನ್ನದ ಬೆಲೆ 10 ಗ್ರಾಂಗೆ ಸುಮಾರು ₹1.23 ಲಕ್ಷ ತಲುಪಿದ್ದು, ಆಭರಣ ಮಳಿಗೆ ನೋಡಲು ಸಹ ಹೆದರುವಂತಾಗಿದೆ.
ಒಂದು ವೇಳೆ ನೀವು ಧನ್ತೇರಸ್ ಅಥವಾ ದೀಪಾವಳಿಗೆ ಆಭರಣಗಳನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಬಂಗಾರ ಬದಲು ಚೀನೀ ಚಿನ್ನದ ಆಭರಣಗಳನ್ನು ಖರೀದಿಸಬಹುದು. ಇದರ ಬೆಲೆ 10 ಗ್ರಾಂಗೆ ಸುಮಾರು ₹3,500 ಮತ್ತು ಅದು ನಿಖರವಾಗಿ ಚಿನ್ನದಂತೆಯೇ ಕಾಣುತ್ತದೆ.
ಹೌದು.. ನಾವು ನಕಲಿ ಚಿನ್ನದ ಬಗ್ಗೆ ಮಾತನಾಡುತ್ತಿದ್ದೇವೆ ಅಂತ ನೀವು ಭಾವಿಸಿದರೆ, ನಿಮ್ಮ ಊಹೆ ತಪ್ಪು. ಈ ರೀತಿ ತಯಾರಿಸಿದ ಆಭರಣಗಳು ವಾಸ್ತವವಾಗಿ ಶೇಕಡಾ 93% ರಷ್ಟು ಬೆಳ್ಳಿ ಮತ್ತು 7% ಚಿನ್ನದಿಂದ ತಯಾರು ಮಾಡಲಾಗಿರುತ್ತದೆ.. ಆದ್ದರಿಂದ ಇದು ಚಿನ್ನಕ್ಕಿಂತ ಹೆಚ್ಚು ಮಾರಟವಾಗುತ್ತದೆ.
ಚಿನ್ನದ ಮಿಶ್ರಲೋಹದಿಂದಾಗಿ, ನೋಡಲು ಥೆಟ್ ಬಂಗಾರದ ಆಭರಣದಂತೆ ಕಾಣುತ್ತದೆ. ಆಭರಣ ತಯಾರಕರು ಪರಿಶೀಲಿಸಿದ ನಂತರವೇ ಇದು ಸಂಪೂರ್ಣ ಬಂಗಾರವಲ್ಲ ಅಂತ ಹೇಳಬಹುದು, ಬಿಟ್ಟರೆ ಸಾಮಾನ್ಯ ಜನರಿಗೆ ಇದು ಶುದ್ಧ ಬಂಗಾರದಂತೆ ಕಾಣುತ್ತದೆ.
ಇದನ್ನು ಹೈ ಪ್ಯೂರಿಟಿ ಸ್ಟರ್ಲಿಂಗ್ ಸಿಲ್ವರ್ ಮಿಶ್ರಲೋಹ ಎಂದು ಕರೆಯಲಾಗುತ್ತದೆ. ಈ 93% ಬೆಳ್ಳಿ ಮಿಶ್ರಲೋಹವು ಚಿನ್ನವನ್ನು ಸಹ ಒಳಗೊಂಡಿದೆ, ಇದು ಬೆಳ್ಳಿಯ ಶಕ್ತಿ ಮತ್ತು ಗುಣಲಕ್ಷಣಗಳನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಹೆಚ್ಚಿನ ಶುದ್ಧತೆಯ ಬೆಳ್ಳಿ ಮಿಶ್ರಲೋಹವಾಗಿದೆ. ನಂತರ ಅದನ್ನು ಚಿನ್ನದಂತಹ ನೋಟವನ್ನು ನೀಡಲು ಚಿನ್ನದಿಂದ ಲೇಪಿಸಲಾಗುತ್ತದೆ.
ಚೀನೀ ಚಿನ್ನದ ಆಭರಣಗಳ ಪ್ರಯೋಜನಗಳು : ಆಭರಣಗಳ ಬೆಲೆ ಏರಿಕೆಯಿಂದಾಗಿ, ಬೆಳ್ಳಿಯಿಂದ ಮಾಡಿದ ಚಿನ್ನದ ಆಭರಣಗಳ ಪ್ರವೃತ್ತಿ ಹೆಚ್ಚುತ್ತಿದೆ. ಇದು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಬಾಳಿಕೆಯ ಜೊತೆ ಕೈಗೆಟುಕುವ ದರದಲ್ಲಿ ಇದು ಲಭ್ಯ. ಇದನ್ನು ಖರೀದಿಸುವ ಮೂಲಕ, ನೀವು ಬೆಳ್ಳಿ ಮತ್ತು ಚಿನ್ನ ಎರಡನ್ನೂ ಪಡೆಯುತ್ತೀರಿ.