DA Hike: ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ 58% ಏರಿಕೆ!

DA Hike: ಸಂಕ್ರಾಂತಿ ಹಬ್ಬದ ಹೊಸ್ತಿಲಲ್ಲಿ ಈ ರಾಜ್ಯ ಸರ್ಕಾರ ತನ್ನ ಸರ್ಕಾರಿ ನೌಕರರಿಗೆ ಶುಭ ಸುದ್ದಿ ನೀಡಿದ್ದು ತುಟ್ಟಿ ಭತ್ಯೆ (ಡಿಎ) ಅನ್ನು 3 ಪ್ರತಿಶತದಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ. 
 

1 /6

2025ರ ಆಗಸ್ಟ್‌ನಲ್ಲಿ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು 2% ಹೆಚ್ಚಿಸುವ ಮೂಲಕ ಒಟ್ಟು ಶೇ. 55 ಪ್ರತಿಶತದಷ್ಟು ಡಿಎ ಏರಿಕೆ ಮಾಡಿದ್ದ ಛತ್ತೀಸ್‌ಗಢ ಸರ್ಕಾರ ಇದೀಗ ಸಂಕ್ರಾಂತಿ ಹಬ್ಬದ ಹೊಸ್ತಿಲಲ್ಲಿ ಮತ್ತೆ ರಾಜ್ಯದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ.

2 /6

ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಏರಿಕೆಗೆ ಸಂಬಂಧಿಸಿದಂತೆ ಭಾನುವಾರ (ಜನವರಿ 12) ಗುಡ್‌ನ್ಯೂಸ್‌ ನೀಡಿರುವ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ತುಟ್ಟಿ ಭತ್ಯೆ (ಡಿಎ) ಅನ್ನು ಇನ್ನೂ 3 ಪ್ರತಿಶತದಷ್ಟು ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

3 /6

ಛತ್ತೀಸ್‌ಗಢ ಸರ್ಕಾರದ ಇತ್ತೀಚಿನ ಡಿಎ ಹೆಚ್ಚಳದೊಂದಿಗೆ ಸರ್ಕಾರಿ ನೌಕರರ ತುಟ್ಟಿ ಭತ್ಯೆ (ಡಿಎ) ಮೊತ್ತವು ಮೂಲವೇತನದೊಂದಿಗೆ 58%ಗೆ ತಲುಪಿದೆ

4 /6

ರಾಜ್ಯ ಸರ್ಕಾರಿ ನೌಕರರು ಪಡೆಯುವ ಡಿಎ ಮೊತ್ತವು ಈಗ ಮೂಲ ವೇತನದ 58 ಪ್ರತಿಶತವನ್ನು ತಲುಪಿದೆ. ಈ ನಿರ್ಧಾರವು ಸುಮಾರು 3.9 ಲಕ್ಷ ಉದ್ಯೋಗಿಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿದುಬಂದಿದೆ.

5 /6

ಭಾನುವಾರ (ಜನವರಿ 12) ರಾಯ್‌ಪುರದಲ್ಲಿ ಛತ್ತೀಸ್‌ಗಢ ರಾಜ್ಯ ನೌಕರರ ಸಂಘ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ವಿಷ್ಣು ದೇವ್ ಸಾಯಿ ಅವರು, ಕಳೆದ ಎರಡು ವರ್ಷಗಳಲ್ಲಿ ಸರ್ಕಾರ ನೌಕರರ ಅನುಕೂಲಕ್ಕಾಗಿ ಸರ್ಕಾರವು ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ವರ್ಗಾವಣೆ ನೀತಿ, ಬಡ್ತಿ ಪ್ರಕ್ರಿಯೆ ಮತ್ತು ಕಚೇರಿ ನಿರ್ವಹಣೆಯಲ್ಲಿ ಸುಧಾರಣೆಗಳನ್ನು ಪರಿಚಯಿಸುವ ಮೂಲಕ ಆಡಳಿತವನ್ನು ಹೆಚ್ಚು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿ ಮಾಡಲಾಗಿದೆ ಎಂದು ಹೇಳಿದರು.   

6 /6

ತಂತ್ರಜ್ಞಾನ ಮತ್ತು ತರಬೇತಿ ಕಾರ್ಯಕ್ರಮಗಳ ಮೂಲಕ ನೌಕರರ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಸರ್ಕಾರವು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಸರ್ಕಾರಿ ನೌಕರರನ್ನು ಸಿದ್ದಪಡಿಸುತ್ತಿದೆ. ಸರ್ಕಾರಿ ನೌಕರರು ತೃಪ್ತರಾಗಿದ್ದರೆ ಮಾತ್ರ ಸರ್ಕಾರದ ಆಡಳಿತ ಯಂತ್ರವೂ ಬಲಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಕಾಲಕಾಲಕ್ಕೆ ಅವರಿಗೆ ತಲುಪಬೇಕಾಗ ವೇತನ, ಭತ್ಯೆಗಳನ್ನು ತಲುಪಿಸಿವುದು ಕೂಡ ಅಗತ್ಯ. ವರ್ಷದ ಆರಂಭದಲ್ಲೇ ಡಿಎ ಹೆಚ್ಚಳವು ಸರ್ಕಾರಿ ನೌಕರರ ಜೀವನವನ್ನು ಸುಗಮಗೊಳಿಸಲಿದೆ ಎಂದವರು ಆಶಯ ವ್ಯಕ್ತಪಡಿಸಿದರು. Disclaimer: ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಇದು ಯಾವುದೇ ರೀತಿಯ ಸರ್ಕಾರದ ವೇತನ ಹೆಚ್ಚಳ ಅಥವಾ ಪಿಂಚಣಿ ಏರಿಕೆಯನ್ನು ಖಾತರಿಪಡಿಸುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಸಂಪರ್ಕಿಸಲು ಶಿಫಾರಸು ಮಾಡಲಾಗಿದೆ.