Home remedy to darken Gray hair: ಹೆನ್ನಾ, ಹೇರ್ ಡೈ ಇಲ್ಲದೆಯೂ ಬಿಳಿ ಕೂದಲನ್ನು ಎರಡೇ ನಿಮಿಷಗಳಲ್ಲಿ ಕಪ್ಪಾಗಿಸಬಹುದು.
Quick remedy to darken Gray hair: ಬಿಳಿ ಕೂದಲಿನ ಸಮಸ್ಯೆಗೆ ನಿಮ್ಮ ಅಡುಗೆ ಮನೆಯಲ್ಲಿರುವ ವಸ್ತುಗಳಿಂದಲೇ ಸುಲಭವಾಗಿ ಪರಿಹಾರ ಪಡೆಯಬಹುದು.
ನೀವು ಬಿಳಿ ಕೂದಲಿನ ಸಮಸ್ಯೆಯಿಂದ ಬೇಸರಗೊಂಡು ಹೇರ್ ಮಾಡುವ ಬಗ್ಗೆ ಚಿಂತಿಸುತ್ತಿದ್ದರೆ ಈಗಲೇ ನಿಮ್ಮ ಆಲೋಚನೆಯನ್ನು ಮರೆತುಬಿಡಿ. ಹೇರ್ ಡೈ, ಮೆಹಂದಿ ಹಚ್ಚದೆಯೂ ಬಿಳಿ ಕೂದಲನ್ನು ಕೆಲವೇ ನಿಮಿಷಗಳಲ್ಲಿ ಕಪ್ಪಾಗಿಸಬಹುದು.
ಬಿಳಿ ಕೂದಲಿಗೆ ತ್ವರಿತ ಪರಿಹಾರ ಪಡೆಯಲು ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ ಅಥವಾ ಅಧಿಕ ಶ್ರಮದ ಅವಶ್ಯಕತೆಯೂ ಇಲ್ಲ.
ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೊಬ್ಬರಿ ಎಣ್ಣೆ, ಅರಿಶಿನ ಹಾಗೂ ಚಹಾ ಪುಡಿಯನ್ನು ಬಳಸಿ ಬೆಳ್ಳಗಾಗಿರುವ ಕೂದಲನ್ನು ಎರಡೇ ನಿಮಿಷಗಳಲ್ಲಿ ಕಪ್ಪು ಬಣ್ಣಕ್ಕೆ ತಿರುಗಿಸಬಹುದು.
ಬಿಳಿ ಕೂದಲನ್ನು ಕಪ್ಪಾಗಿಸಲು ಬೇಕಾದ ಮ್ಯಾಜಿಕಲ್ ಹೋಂ ಮೇಡ್ ಹೇರ್ ಡೈ ತಯಾರಿಸಲು ಮೊದಲಿಗೆ ಒಂದು ಕಬ್ಬಿಣದ ಬಾಣಲೆಯನ್ನು ಕಾಯಿಸಿ ಅರದಲ್ಲಿ ಎರಡು ಸ್ಪೂನ್ ಅರಿಶಿನ, ಎರಡು ಸ್ಪೂನ್ ಟೀ ಪುಡಿ ಹಾಕಿ ಅದು ಸಂಪೂರ್ಣ ಕಪ್ಪಾಗುವವರೆಗೂ ಸಣ್ಣ ಉರಿಯಲ್ಲಿ ಕಾಯಿಸಿ.
ಫ್ರೈ ಮಾಡಿ ಇಟ್ಟ ಅರಿಶಿನ, ಟೀ ಪುಡಿಯನ್ನು ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ, ಒಂದು ಬಾಟಲಿನಲ್ಲಿ ಶೇಖರಿಸಿಡಿ.
ಅರಿಶಿನ, ಟೀ ಮಿಶ್ರಿತ ಪುಡಿಯನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಕೂದಲಿನ ಬುಡಕ್ಕೆ ಅಪ್ಲೈ ಮಾಡಿದರೆ ಕೂಡಲೇ ಬಿಳಿ ಕೂದಲು ಗಾಢ ಕಪ್ಪು ಬಣ್ಣಕ್ಕೆ ಮರಳುತ್ತದೆ. ನಿಯಮಿತವಾಗಿ ಇದರ ಬಳಕೆಯಿಂದ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.