Home Remedies to darken gray hair: ಬಿಳಿ ಕೂದಲನ್ನು ಕಪ್ಪಾಗಿಸಲು ತೆಂಗಿನ ಎಣ್ಣೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.
1/6ತೆಂಗಿನ ಎಣ್ಣೆ ಜೊತೆ ಕೆಲವು ಪದಾರ್ಥಗಳನ್ನು ಬೆರೆಸಿ ಬಳಸುವುದರಿಂದ ನೈಸರ್ಗಿಕವಾಗಿ ಬಿಳಿಕೂದಲನ್ನು ಕಡು ಕಪ್ಪಾಗಿಸಬಹುದು. ಹೇರ್ ಡೈ ಇಲ್ಲದೆಯೇ ನಿಮ್ಮ ಬಿಳಿ ಕೂದಲನ್ನು ಕಪ್ಪುಗೊಳಿಸುವ ಸೂಪರ್ ಮನೆಮದ್ದು ಇಲ್ಲಿದೆ...
2/6ತೆಂಗಿನ ಎಣ್ಣೆ ಮತ್ತು ಗೋರಂಟಿ ಬಳಸಿ 10 ನಿಮಷದಲ್ಲೇ ಬಿಳಿ ಕೂದಲನ್ನು ಕಪ್ಪಾಗಿಸಬಹುದು. 3 - 4 ಚಮಚ ತೆಂಗಿನ ಎಣ್ಣೆಯನ್ನು ಕುದಿಸಿ, ನಂತರ ಎಣ್ಣೆಗೆ ಗೋರಂಟಿ ಎಲೆಗಳನ್ನು ಸೇರಿಸಿ. ಎಣ್ಣೆಯು ಕಂದು ಬಣ್ಣಕ್ಕೆ ಬರುವವರೆಗೆ ಕುದಿಸಿ.
3/6ಈಗ ಎಣ್ಣೆಯನ್ನು ತಣ್ಣಗಾಗಿಸಿ ಮತ್ತು ಕೂದಲಿನ ಬೇರುಗಳಿಗೆ ಹಚ್ಚಿಕೊಳ್ಳಿ. ಕನಿಷ್ಠ 40 ನಿಮಿಷಗಳ ಕಾಲ ಎಣ್ಣೆಯನ್ನು ಹಾಗೇ ಬಿಡಿ ಮತ್ತು ನಂತರ ತಲೆ ಸ್ನಾನ ಮಾಡಿ. ಬಿಳಿ ಕೂದಲು ಬುಡಸಮೇತ ಕಪ್ಪಾಗಿರುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ನಿಯಮಿತವಾಗಿ ಮಾಡಿದರೆ ಬಿಳಿ ಕೂದಲು ಕಪ್ಪಾಗುವುದು ಖಚಿತ.
4/6ಕೊಲಾಜೆನ್ ಅನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುವ ಆಮ್ಲಾದೊಂದಿಗೆ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ ಹಚ್ಚಿದಾಗ ಕೂದಲಿನ ಆರೋಗ್ಯ ದ್ವಿಗುಣಗೊಳ್ಳುತ್ತದೆ. ಇದರಿಂದ ಕೂದಲು ಕಪ್ಪಾಗುತ್ತದೆ.
5/63 ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ 2 ಚಮಚ ಆಮ್ಲಾ ಪುಡಿಯನ್ನು ಮಿಶ್ರಣ ಮಾಡಿ. 10-15 ನಿಮಿಷಗಳ ಬಳಿಕ ಗ್ಯಾಸ್ ಆಫ್ ಮಾಡಿ. ಎಣ್ಣೆಯನ್ನು ತಣ್ಣಗಾಗಿಸಿ. ಕೂದಲಿಗೆ ಹಚ್ಚಿ ಮತ್ತು ಮಸಾಜ್ ಮಾಡಿ. ಅದನ್ನು ರಾತ್ರಿಯಿಡೀ ಬಿಟ್ಟು ಬೆಳಗ್ಗೆ ತಲೆಸ್ನಾನ ಮಾಡಿ. ಬಿಳಿ ಕೂದಲು ಕಪ್ಪಾಗುವುದು.
6/6ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Z Kannada News ಇದಕ್ಕೆ ಹೊಣೆಯಲ್ಲ.